Asianet Suvarna News Asianet Suvarna News

IPL 2022 Ahmedabad franchise is in Trouble: ಐಪಿಎಲ್‌ ಟೂರ್ನಿಯಿಂದ ಹೊಸ ತಂಡಕ್ಕೆ ಗೇಟ್‌ಪಾಸ್‌..?

* 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಭರದಿಂದಲೇ ಸಿದ್ದತೆಗಳು ಆರಂಭ

* ಒಂದು ಕಡೆ ಹರಾಜಿಗೆ ಸಿದ್ದತೆಗಳು ಆರಂಭವಾಗುತ್ತಿದ್ದರೇ ಮತ್ತೊಂದೆಡೆ ಅಹಮದಾಬಾದ್‌ಗೆ ಸಂಕಷ್ಟ

* ಬೆಟ್ಟಿಂಗ್ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವ ಅಹಮದಾಬಾದ್ ಫ್ರಾಂಚೈಸಿ

IPL Auction 2022 Ahmedabad IPL Team Participation in Doubt CVC Capitals links with Betting Company kvn
Author
Bengaluru, First Published Nov 29, 2021, 9:14 AM IST

ಮುಂಬೈ(ನ.29): ಒಂದೆಡೆ 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ಗೆ (Indian Premier League) ಸಿದ್ಧತೆಗಳು ಭರದಿಂದ ಸಾಗಿದ್ದು, ಆಟಗಾರರ ಹರಾಜಿಗೆ ದಿನಗಣನೆಗೆ ಆರಂಭವಾಗಿದೆ. ಒಂದೆಡೆ 8 ತಂಡಗಳ ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ (IPL Mega Auction) ಪಾಲ್ಗೊಳ್ಳಲು ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಹೊಸದಾಗಿ ಸೇರ್ಪಡೆಗೊಂಡ ಅಹಮದಾಬಾದ್‌ ತಂಡ (Ahmedabad franchise) ಐಪಿಎಲ್‌ನಿಂದಲೇ ಹೊರಬೀಳುವ ಆತಂಕದಲ್ಲಿದೆ.

ಪ್ರಸ್ತುತ ಇರುವ 8 ತಂಡಗಳ ಜತೆಗೆ ಅಹಮದಾಬಾದ್‌ ಹಾಗೂ ಲಖನೌ ತಂಡಗಳು ಹೊಸದಾಗಿ ಸೇರ್ಪಡೆಗೊಂಡಿದ್ದವು. ಬರೋಬ್ಬರಿ 7,090 ಕೋಟಿ ನೀಡಿ ಲಖನೌ ಫ್ರಾಂಚೈಸಿಯನ್ನು ಆರ್‌ಪಿಎಸ್‌ಜಿ ಖರೀದಿಸಿದ್ದರೆ, 5,625 ಕೋಟಿ ನೀಡಿ ಯುರೋಪ್‌ ಮೂಲದ ಸಿವಿಸಿ ಕ್ಯಾಪಿಟಲ್ಸ್‌ (CVC Capitals) ಸಂಸ್ಥೆ ಅಹಮದಾಬಾದ್‌ ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. 15ನೇ ಆವೃತ್ತಿಯಿಂದಲೇ ಈ ಎರಡು ತಂಡಗಳು ಆಡಲಿವೆ ಎಂದು ಬಿಸಿಸಿಐ (BCCI) ಘೋಷಿಸಿತ್ತು.

ಆದರೆ, ಸಿವಿಸಿ ಕ್ಯಾಪಿಟಲ್ಸ್‌ ಕ್ರೀಡಾ ಬೆಟ್ಟಿಂಗ್‌ ಸಂಸ್ಥೆಗಳಲ್ಲಿ ಪಾಲು ಹೊಂದಿದ್ದು, ಇದು ಭಾರೀ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ. ಬೆಟ್ಟಿಂಗ್‌ ಸಂಸ್ಥೆಗಳ ಜತೆ ನೇರ ಸಂಪರ್ಕ ಹೊಂದಿರುವ ಸಂಸ್ಥೆಯ ಮಾಲೀಕತ್ವ ಮುಂದುವರೆಸಬೇಕಾ? ಅಥವಾ ಬೇಡವಾ? ಎಂಬ ಸಂದಿಗ್ಧತೆಯಲ್ಲಿ ಬಿಸಿಸಿಐ ಸಿಲುಕಿದೆ ಎನ್ನಲಾಗಿದೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ಬಿಸಿಸಿಐನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಐಪಿಎಲ್‌ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಸೇರಿದಂತೆ ಅನೇಕರು, ಹರಾಜಿನಲ್ಲಿ ಸಿವಿಸಿಗೆ ಅವಕಾಶ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಹಮದಾಬಾದ್‌ ತಂಡದ ಸ್ಥಿತಿ ಡೋಲಾಯಮಾನವಾಗಿದೆ.

ರಿಟೈನ್‌ ಪಟ್ಟಿ ಸಲ್ಲಿಕೆಗೆ ನವೆಂಬರ್ 30 ಕೊನೆ ದಿನ

ಇನ್ನು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ತಂಡದ ಫ್ರಾಂಚೈಸಿಗಳಿಗೆ ನವೆಂಬರ್ 30 ಅಂತಿಮ ದಿನವಾಗಿದ್ದು, ಇದುವರೆಗೂ ಯಾವುದೇ ತಂಡಗಳು ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಆಟಗಾರರ ಮೆಗಾ ಹರಾಜಿಗೂ ಮುನ್ನ ಈಗಿರುವ 8 ಫ್ರಾಂಚೈಸಿಗಳು ಗರಿಷ್ಠ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರತಿ ತಂಡವು ಮೂವರು ದೇಶಿ ಆಟಗಾರ ಹಾಗೂ ಓರ್ವ ವಿದೇಶಿ ಆಟಗಾರ ಅಥವಾ ತಲಾ ಇಬ್ಬರು ದೇಶಿ ಹಾಗೂ ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ.

IPL 2022: ಸಂಭಾವ್ಯ ವೇಳಾಪಟ್ಟಿ ಪ್ರಕಟ, ಚೆನ್ನೈನಲ್ಲಿ ಮೊದಲ ಪಂದ್ಯ..?

ಈ ನಡುವೆ ಆರ್‌ಸಿಬಿ (RCB) ವಿರಾಟ್‌ ಕೊಹ್ಲಿ (Virat Kohli), ಗ್ಲೆನ್‌ ಮ್ಯಾಕ್ಸ್‌ವೆಲ್‌ರನ್ನು (Glenn Maxwell) ರಿಟೈನ್‌ ಮಾಡಲಿದ್ದು, ಸಿಎಸ್‌ಕೆ ಧೋನಿ ಮನವೊಲಿಸಿದ್ದು ಮುಂದಿನ ಮೂರೂ ವರ್ಷ ಅವರೇ ನಾಯಕ. ರಾಜಸ್ಥಾನ ರಾಯಲ್ಸ್‌ಗೆ (Rajasthan Royals) ಸಂಜು ಸ್ಯಾಮ್ಸನ್‌ (Sanju Samson), ಡೆಲ್ಲಿ ಕ್ಯಾಪಿಟಲ್ಸ್‌ಗೆ (Delhi Capitals) ರಿಷಭ್‌ ಪಂತ್‌ (Rishabh Pant) ನಾಯಕರಾಗುವುದು ಖಚಿತ ಎಂಬಿತ್ಯಾದಿ ಸುದ್ದಿಗಳು ಭಾರೀ ಸದ್ದು ಮಾಡುತ್ತಿದ್ದು, ತಂಡಗಳು ಉಳಿಸಿಕೊಳ್ಳಲಿವೆ ಎಂಬ ಆಟಗಾರರ ಪಟ್ಟಿ ಎಲ್ಲೆಡೆ ಹರಿದಾಡುತ್ತಿವೆ. ಆದರೆ, ಫ್ರಾಂಚೈಸಿಗಳು ಮಾತ್ರ ಯಾವುದೇ ಅಧಿಕೃತ ಹೇಳಿಕೆ ದಾಖಲೆ ಬಿಡುಗಡೆ ಮಾಡಿಲ್ಲ.

ಒಂದು ವೇಳೆ ಫ್ರಾಂಚೈಸಿಯೊಂದು ಗರಿಷ್ಠ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಂಡರೇ ಪರ್ಸ್‌ನಲ್ಲಿರುವ 90 ಕೋಟಿ ರುಪಾಯಿಗಳಲ್ಲಿ 42 ರುಪಾಯಿಗಳನ್ನು ರೀಟೈನ್ ಮಾಡಿದ ಆಟಗಾರರಿಗೆ ಹಂಚಬೇಕಾಗುತ್ತದೆ. ಇನ್ನು ಫ್ರಾಂಚೈಸಿ ಕೇವಲ ಒಬ್ಬ ಆಟಗಾರನನ್ನು ಮಾತ್ರ ರೀಟೈನ್ ಮಾಡಿಕೊಂಡರೇ ಆತನಿಗೆ 14 ಕೋಟಿ ರುಪಾಯಿ ಮಾತ್ರ ನೀಡಬೇಕಾಗುತ್ತದೆ. ಇನ್ನು ಹೊಸದಾಗಿ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ತಂಡವು ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಅವಕಾಶ ನೀಡಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಐಪಿಎಲ್‌ ಮೆಗಾ ಹರಾಜು ನಡೆಯಲಿದೆ ಎನ್ನಲಾಗುತ್ತಿದೆ.

IPL Retention 2022: ಆರ್‌ಸಿಬಿಯಿಂದ ಇಬ್ಬರು, ಸಿಎಸ್‌ಕೆ, ಮುಂಬೈ ನಾಲ್ವರು ಆಟಗಾರರ ರೀಟೈನ್‌..?

ಇನ್ನು 2022ನೇ ಸಾಲಿನ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಭಾರತದಲ್ಲಿಯೇ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇನ್ನು ಟೂರ್ನಿಯು ಏಪ್ರಿಲ್‌ 02ರಿಂದ ಆರಂಭವಾಗಲಿದೆ ಎಂದು ಸಹಾ ವರದಿಯಾಗಿದೆ. ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ ಜರುಗಲಿದೆ ಎನ್ನಲಾಗಿದೆ.
 

Follow Us:
Download App:
  • android
  • ios