ಚೆನ್ನೈ(ಫೆ.18): ಐಪಿಎಲ್ ಟೂರ್ನಿಯ ಹರಾಜು ಕುತೂಹಲ ಹೆಚ್ಚಿಸಿದೆ. ಕಳೆದ ಬಾರಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಖರೀದಿಸಲು ಈ ಬಾರಿ ಯಾರೂ ಆಸಕ್ತಿ ತೋರಲಿಲ್ಲ. ಆದರೆ ಅನ್‌ಸೋಲ್ಡ್ ಆಟಗಾರರಿಗೆ ಮತ್ತೊಂದು ಅವಕಾಶವಿದ್ದು, ಅದೃಷ್ಠ ಖುಲಾಯಿಸುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.

IPL Auction 2021: ಈವರೆಗೆ ಸೇಲಾದ ಆಟಗಾರರ ವಿವರ

2020ರ ಐಪಿಎಲ್ ಟೂರ್ನಿಯಲ್ಲಿ ವೈಯುಕ್ತಿ ಕಾರಣ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಬಂದಿದ್ದರು. ಸುರೇಶ್ ರೈನಾ ಚೆನ್ನೈ ತಂಡದಿಂದ ಹೊರಬಂದ ಬೆನ್ನಲ್ಲೇ ಹರ್ಭಜನ್ ಸಿಂಗ್ ಕೂಡ ಹೊರಬಂದಿದ್ದರು. ಹೀಗಾಗಿ ಈ ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು

ಚೆನ್ನೈಯಿಂದ ಹೊರಬಂದ ಹರ್ಭಜನ್ ಸಿಂಗ್ ಅವರನ್ನ ಸಿಎಸ್‌ಕೆ ಕೈಬಿಟ್ಟಿತು. ಹೀಗಾಗಿ 2021ರ ಐಪಿಎಲ್ ಹರಾಜಿನಲ್ಲಿ ಭಜ್ಜಿ ಹೆಸರು ನೊಂದಾಯಿಸಿಕೊಂಡಿದ್ದರು. ಇದೀಗ ಮೊದಲ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದ ಹರ್ಭಜನ್ ಸಿಂಗ್ ಅನ್‌ಸೋಲ್ಡ್ ಆಗಿದ್ದಾರೆ.