ಚೆನ್ನೈ(ಫೆ.18): ಐಪಿಎಲ್ ಟೂರ್ನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ದುಬಾರಿ ಖರೀದಿ ಮಾಡಿದೆ. ಈ ಬಾರಿ ಆಸ್ಟ್ರೇಲಿಯಾ ಟಿ20 ಸ್ಪೆಷಲಿಸ್ಟ್ ಡೇನಿಯಲ್ ಕ್ರಿಶ್ಚಿಯನ್‌ ಖರೀದಿಸಿದೆ. 4.80 ಕೋಟಿ ರೂಪಾಯಿ ನೀಡೋ ಮೂಲಕ ಆರ್‌ಸಿಬಿ ಡೇನಿಯಲ್ ಖರೀದಿಸಿದೆ.

IPL ಹರಾಜು: 15 ಕೋಟಿ ರೂಪಾಯಿ ನೀಡಿ ಕೈಲ್‌ ಜಾಮಿಸನ್‌ ಖರೀದಿಸಿದ RCB!

ಕೋಲ್ಕತಾ ನೈಟ್ ರೈಡರ್ಸ್ ಕೂಡ ಡೇನಿಯ್ ಖರೀದಿಗೆ ಪೈಪೋಟಿಗೆ ಬಿದ್ದಿತ್ತು. ಜಿದ್ದಿಗೆ ಬಿದ್ದ ಆರ್‌ಸಿಬಿ ಕೊನೆಗೂ ಡೇನಿಯಲ್ ಕ್ರಿಶ್ಚಿಯನ್ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ.

ಐಪಿಎಲ್ ಟೂರ್ನಿಯಲ್ಲಿ 40 ಪಂದ್ಯ ಆಡಿರುವ ಡೇನಿಯಲ್ 446 ರನ್ ಹಾಗೂ 36 ವಿಕೆಟ್ ಕಬಳಿಸಿದ್ದಾರೆ. ಆಲ್ರೌಂಡರ್ ಡೇನಿಯಲ್ ಆಗಮನದಿಂದ ಆರ್‌ಸಿಬಿ ತಂಡದ ಮತ್ತಷ್ಟು ಬಲಿಷ್ಠಗೊಂಡಿದೆ