ಚೆನ್ನೈ(ಫೆ.18): ಈ ಬಾರಿಯ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ದುಬಾರಿಖರೀದಿ ಮಾಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 14.25 ಕೋಟಿ ರೂಪಾಯಿ ನೀಡಿದ್ದರೆ, ಇದೀಗ ನ್ಯೂಜಿಲೆಂಡ್ ಕ್ರಿಕೆಟಿಗ ಕೈಲ್ ಜ್ಯಾಮಿಸನ್‌ಗೆ ಬರೋಬ್ಬರಿ 15 ಕೋಟಿ ರೂಪಾಯಿ ನೀಡಿದೆ

RCB ಸೇರಿದ ಬೆನ್ನಲ್ಲೇ ಶಪಥ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್!..

2014ರ ಅಂಡರ್ ನೈಂಟೀನ್ ತಂಡದ ಭಾಗವಾಗಿದ್ದ ಕೈಲ್ ಜ್ಯಾಮಿಸನ್, 2020ರಲ್ಲಿ ಭಾರತ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ನ್ಯೂಜಿಲೆಂಡ್ ಪರ 6 ಟೆಸ್ಟ್ ಪಂದ್ಯ, 2 ಏಕದಿನ ಹಾಗೂ 4 ಟಿ20 ಪಂದ್ಯ ಆಡಿರುವ ಕೈಲ್ ಜ್ಯಾಮಿಸನ್‌ಗೆ ಆರ್‌ಸಿಬಿ 15 ಕೋಟಿ ರೂಪಾಯಿ ನೀಡಿದೆ.