ಐಪಿಎಲ್ 18ನೇ ಆವೃತ್ತಿಗೆ 5 ದಿನ ಬಾಕಿ ಇವೆ. 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಸನ್ ರೈಸರ್ಸ್ ಹೈದರಾಬಾದ್ ತಂಡವು ಬಲಿಷ್ಠವಾಗಿದೆ. ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ನೀಡಬಲ್ಲರು. ಪ್ಯಾಟ್ ಕಮಿನ್ಸ್ ನಾಯಕತ್ವ ವಹಿಸಲಿದ್ದಾರೆ. ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್ ಬೌಲಿಂಗ್ ಬಲ ಹೆಚ್ಚಿಸಲಿದ್ದಾರೆ. ರಾಹುಲ್ ಚಹಾರ್, ಆಡಂ ಜಂಪಾ ಸ್ಪಿನ್ ಅಸ್ತ್ರವಾಗಲಿದ್ದಾರೆ.
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆ ಐಪಿಎಲ್‌ನ 18ನೇ ಆವೃತ್ತಿ ಭರ್ಜರಿಯಾಗಿ ಶುರುವಾಗೋಕೆ ಇನ್ನು ಕೇವಲ 5 ದಿನ ಮಾತ್ರ ಉಳಿದಿದೆ. ಈ ಕ್ರಿಕೆಟ್ ಹಬ್ಬದಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲು ಸಜ್ಜಾಗಿವೆ. ಮೂರು ತಿಂಗಳ ಹಿಂದೇನೆ ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಿವೆ. ಈಗ ಮೈದಾನದಲ್ಲಿ ಪ್ಲೇಯಿಂಗ್ 11 ಮಾಡೋದು ಅಷ್ಟೇ ಬಾಕಿ. ಈ ಸೀಸನ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಟೀಮ್ ಸಿಕ್ಕಾಪಟ್ಟೆ ಡೇಂಜರಸ್ ಆಗಿದೆ. ಮೊದಲೇ ಟ್ರಾವಿಸ್ ಹೆಡ್ ಮತ್ತೆ ಅಭಿಷೇಕ್ ಶರ್ಮಾ ಅಂತ ಇಬ್ಬರು ಓಪನರ್ ಇದ್ದಾರೆ. ಇದರ ನಡುವೆ ಇಶಾನ್ ಕಿಶನ್ ಸೇರ್ಪಡೆ ತಂಡಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ. ಹಾಗಾಗಿ ಆರೆಂಜ್ ಆರ್ಮಿ ಪ್ಲೇಯಿಂಗ್ 11ನಲ್ಲಿ ಎಷ್ಟರ ಮಟ್ಟಿಗೆ ಡೇಂಜರಸ್ ಆಗಿದೆ ಅಂತ ನೋಡೋಣ ಬನ್ನಿ.
ಸನ್‌ರೈಸರ್ಸ್ ಹೈದರಾಬಾದ್‌ಗೆ ಪ್ಯಾಟ್ ಕಮಿನ್ಸ್ ಕ್ಯಾಪ್ಟನ್
ಕಾವ್ಯಾ ಮಾರನ್ ಅವರ ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್ ಟೀಮ್‌ಗೆ ಆಸ್ಟ್ರೇಲಿಯಾದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಲೀಡ್ ಮಾಡ್ತಿದ್ದಾರೆ. ಕಳೆದ ಸೀಸನ್‌ನಲ್ಲಿ ಅವರು ಟೀಮ್‌ನ್ನು ಫೈನಲ್‌ಗೆ ತಲುಪಿಸಿದ್ರು, ಆದ್ರೆ ಕೆಕೆಆರ್ ಎದುರು ಮುಗ್ಗರಿಸುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕುವ ಅವಕಾಶ ಕೈಚೆಲ್ಲಿದರು. ಆದ್ರೆ ಈ ಸಲ ಕಮಿನ್ಸ್ ಆ ತಪ್ಪು ಮಾಡೋಕೆ ಬಿಡಲ್ಲ, ಯಾಕಂದ್ರೆ ಅವರು ದೊಡ್ಡ ಮ್ಯಾಚ್ ವಿನ್ನರ್ ಕ್ಯಾಪ್ಟನ್ ಅಂತಾನೇ ಹೆಸರುವಾಸಿಯಾಗಿದ್ದಾರೆ. ಅವರ ಕ್ಯಾಪ್ಟನ್ಸಿಯಲ್ಲಿ ಆಸ್ಟ್ರೇಲಿಯಾ ಟೀಮ್ ವರ್ಲ್ಡ್ ಕಪ್, ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಆಗಿದೆ. ಹಾಗಾಗಿ ಅವರು ಇನ್ನೊಮ್ಮೆ ಐಪಿಎಲ್‌ನಲ್ಲಿ ಬೇರೆ ಟೀಮ್‌ಗಳಿಗೆ ತಲೆನೋವು ತರಿಸಬಹುದು.
ಇದನ್ನೂ ಓದಿ: ಕೋಣೆಯಲ್ಲಿ ಒಂಟಿಯಾಗಿ ಕೂತು ಅಳಬೇಕಾ? ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?
ಸನ್‌ರೈಸರ್ಸ್ ಹೈದರಾಬಾದ್ ಹತ್ರ ಸ್ಪೋಟಕ ಬ್ಯಾಟಿಂಗ್ ಇದೆ
SRH ಬ್ಯಾಟಿಂಗ್ ಮಾತ್ರ ಸಿಕ್ಕಾಪಟ್ಟೆ ಜೋರಾಗಿದೆ. ಮೊದಲ ಪವರ್‌ಪ್ಲೇನಲ್ಲಿ ಟ್ರಾವಿಸ್ ಹೆಡ್ ಮತ್ತೆ ಅಭಿಷೇಕ್ ಶರ್ಮಾ ಭರ್ಜರಿ ಸ್ಟಾರ್ಟ್ ಮಾಡ್ತಾರೆ. ಇಬ್ಬರ ಸ್ಟ್ರೈಕ್ ರೇಟ್ 200ಕ್ಕಿಂತ ಜಾಸ್ತಿನೇ ಇದೆ. ಈಗ ಅವರ ಜೊತೆಗೆ ಇಶಾನ್ ಕಿಶನ್ ಕೂಡ ಬಂದಿದ್ದಾರೆ, ಅವರು ಸ್ಪೋಟಕ ಬ್ಯಾಟಿಂಗ್ ಮಾಡೋಕೆ ಫೇಮಸ್. ನಂಬರ್ 3ರಲ್ಲಿ ಅವರು ಗೇಮ್ ಚೇಂಜ್ ಮಾಡೋ ಹಾಗೆ ಆಡ್ತಾರೆ. ಆಮೇಲೆ ಮಿಡಲ್ ಆರ್ಡರ್‌ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತೆ ಹೆನ್ರಿಕ್ ಕ್ಲಾಸೆನ್ ಅಂತ ಆಟಗಾರರು ಇದ್ದಾರೆ. ಫಿನಿಶರ್ ರೋಲ್‌ನಲ್ಲಿ ಅನಿಕೇತ್ ವರ್ಮಾ, ಅಭಿನವ್ ಮನೋಹರ್ ಮತ್ತೆ ಪ್ಯಾಟ್ ಕಮಿನ್ಸ್ ಕಾಣಿಸಿಕೊಳ್ತಾರೆ. ಇವರಲ್ಲಿ ಯಾರಾದ್ರೂ 2-3 ಜನ ಬ್ಯಾಟ್ ಬೀಸಿದ್ರೆ ಸ್ಕೋರ್ ಮಾತ್ರ ದೊಡ್ಡದಾಗಿರುತ್ತೆ.
SRH ಹತ್ರ ಸ್ಪಿನ್ ಮತ್ತೆ ಫಾಸ್ಟ್ ಬೌಲಿಂಗ್ ಕೂಡ ಇದೆ
ಈಗ ಹೈದರಾಬಾದ್ ಬೌಲಿಂಗ್ ಕಡೆ ಒಂದು ಕಣ್ಣು ಹಾಕಿದ್ರೆ, ಟೀಮ್‌ನಲ್ಲಿ ಮೊದಲ ಬಾರಿಗೆ ಮೊಹಮ್ಮದ್ ಶಮಿ ಅವರ ಎಕ್ಸ್‌ಪೀರಿಯೆನ್ಸ್ ಸೇರಿಕೊಂಡಿದೆ. ಶಮಿ ಗುಜರಾತ್ ಟೈಟನ್ಸ್ ಟೀಮ್‌ಗೋಸ್ಕರ ಮೊದಲ ಸೀಸನ್‌ನಲ್ಲಿ ಏನ್ ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ಅವರು ಹೊಸ ಬಾಲ್ ಮತ್ತೆ ಹಳೆ ಬಾಲ್ ಎರಡರಲ್ಲೂ ವಿಕೆಟ್ ತೆಗಿಯೋಕೆ ಎಕ್ಸ್‌ಪರ್ಟ್. ಅವರಿಗೆ ಪ್ಯಾಟ್ ಕಮಿನ್ಸ್ ಅವರೇ ಸಾಥ್ ಕೊಡ್ತಾರೆ. ಆಮೇಲೆ 7ರಿಂದ 15 ಓವರ್ ಅಂದ್ರೆ ಮಿಡಲ್ ಓವರ್‌ನಲ್ಲಿ ರಾಹುಲ್ ಚಹಾರ್ ಮತ್ತೆ ಆಡಂ ಜಂಪಾ ಸ್ಪಿನ್ ವಿಕೆಟ್ ತೆಗೀತಾರೆ, ಅವರಿಗೆ ವಿಕೆಟ್ ತೆಗಿಯೋದು ಗೊತ್ತು. ಕೊನೆ ಓವರ್‌ನಲ್ಲಿ ಹರ್ಷಲ್ ಪಟೇಲ್ ಕಾಣಿಸ್ತಾರೆ. ಹರ್ಷಲ್ ಪಟೇಲ್ ಕೊನೆಯಲ್ಲಿ ಸ್ಪೀಡ್ ಚೇಂಜ್ ಮಾಡ್ತಾರೆ ಮತ್ತೆ ಸಿಕ್ಕಾಪಟ್ಟೆ ಸ್ಲೋ ಬಾಲ್ ಹಾಕ್ತಾರೆ. ಹಾಗಾಗಿ ಅವರನ್ನ ಕೊನೆಯ 4 ಓವರ್‌ನಲ್ಲಿ ಆಡೋದು ಅಷ್ಟು ಸುಲಭ ಅಲ್ಲ.
ಇದನ್ನೂ ಓದಿ: ಭಾರತೀಯರಲ್ಲಿ ಶುರುವಾಗಿದೆ ಐಪಿಎಲ್ ಜ್ವರ! 'ಎ' ಗುಂಪಿನ ತಂಡಗಳ ಕಂಪ್ಲೀಟ್ ಡೀಟೈಲ್ಸ್
ಸನ್‌ರೈಸರ್ಸ್ ಹೈದರಾಬಾದ್:
ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಮನೋಹರ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್, ಮೊಹಮ್ಮದ್ ಶಮಿ, ಆಡಂ ಜಂಪಾ, ಹರ್ಷಲ್ ಪಟೇಲ್, ರಾಹುಲ್ ಚಹಾರ್.
