Asianet Suvarna News Asianet Suvarna News

ಮುಂಬೈ ವಿರುದ್ಧ ಸೋತ್ರೂ, ಫ್ಯಾನ್ಸ್ ಮನಗೆದ್ದ ಕೊಹ್ಲಿ..! ಕೊಹ್ಲಿಯ ಒಂದೇ ಮಾತಿನಿಂದ ಮುಂಬೈ ಫ್ಯಾನ್ಸ್ ಸೈಲೆಂಟ್..!

ಕೊಹ್ಲಿ ಅಂದ್ರೆ ಅಗ್ರೆಸಿವ್. ಕೊಹ್ಲಿ ಅಂದ್ರೆ ಫೈಯರ್.! ಯಾರ ತಂಟೆಗೂ ಹೋಗಲ್ಲ, ತಮ್ಮ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ. ಆದ್ರೆ, ಕೊಹ್ಲಿಗೆ ಅಂದ್ರೆ ಬರೀ ಆ್ಯಟಟ್ಯುಡ್ ಅಲ್ಲ. ಕೊಹ್ಲಿಗೆ ಇನ್ನೊಂದು ಮುಖವೂ ಇದೆ.  ಯೆಸ್, ಕೊಹ್ಲಿ ಅಗ್ರೆಸಿವ್ ಅನ್ನೋದು ಎಷ್ಟು ನಿಜಾನೋ. ಜೆಂಟಲ್ಮೆನ್ ಕ್ರಿಕೆಟರ್ ಅನ್ನೋದು ನಿಜ.

IPL 2024 Unhappy Virat Kohli Takes Stand For Hardik Pandya Against Booing Wankhede Crowd kvn
Author
First Published Apr 13, 2024, 12:11 PM IST

ಮುಂಬೈ(ಏ.13) ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್  ಕೊಹ್ಲಿ ಅಂದ್ರೆ ಅಗ್ರೆಸಿವ್ ಅನ್ನೋದು ಎಷ್ಟು ನಿಜಾನೋ. ಜೆಂಟಲ್ಮೆನ್ ಅಂದ್ರೆ ಕೊಹ್ಲಿ ಅಂದ್ರೆ ಕೊಹ್ಲಿ ಅನ್ನೋದು ಅಷ್ಟೇ ನಿಜ. ಪ್ರಸಕ್ತ ಐಪಿಎಲ್‌ನಲ್ಲಿ ಮೊನ್ನೆ ನಡೆದ ಆರ್‌ಸಿಬಿ-ಮುಂಬೈ ನಡುವಿನ ಪಂದ್ಯಕ್ಕೆ ಇದಕ್ಕೆ ಬೆಸ್ಟ್ ಎಕ್ಸಾಂಪಲ್..!

ವಿರಾಟ್ ನಡೆಗೆ ಟೀಂ ಇಂಡಿಯಾ ಫ್ಯಾನ್ಸ್ ಫಿದಾ..! 

ಯೆಸ್, ಕೊಹ್ಲಿ ಅಂದ್ರೆ ಅಗ್ರೆಸಿವ್. ಕೊಹ್ಲಿ ಅಂದ್ರೆ ಫೈಯರ್.! ಯಾರ ತಂಟೆಗೂ ಹೋಗಲ್ಲ, ತಮ್ಮ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ. ಆದ್ರೆ, ಕೊಹ್ಲಿಗೆ ಅಂದ್ರೆ ಬರೀ ಆ್ಯಟಟ್ಯುಡ್ ಅಲ್ಲ. ಕೊಹ್ಲಿಗೆ ಇನ್ನೊಂದು ಮುಖವೂ ಇದೆ.  ಯೆಸ್, ಕೊಹ್ಲಿ ಅಗ್ರೆಸಿವ್ ಅನ್ನೋದು ಎಷ್ಟು ನಿಜಾನೋ... ಜೆಂಟಲ್ಮೆನ್ ಕ್ರಿಕೆಟರ್ ಅನ್ನೋದು ನಿಜ. ಪ್ರಸಕ್ತ IPLನಲ್ಲಿ ಮೊನ್ನೆ ನಡೆದ RCB- ಮುಂಬೈ ನಡುವಿನ ಪಂದ್ಯಕ್ಕೆ ಇದಕ್ಕೆ ಬೆಸ್ಟ್ ಎಕ್ಸಾಂಪಲ್..! 

ಇಂದು ರಾಜಸ್ಥಾನ vs ಪಂಜಾಬ್‌ ಹೈವೋಲ್ಟೇಜ್ ಫೈಟ್

ಕೊಹ್ಲಿಯ ಒಂದೇ ಮಾತಿನಿಂದ ಮುಂಬೈ ಫ್ಯಾನ್ಸ್ ಸೈಲೆಂಟ್..!

ಐಪಿಎಲ್‌ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ರೋಹಿತ್ ಶರ್ಮಾರನ್ನ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲಾಯ್ತು. ಇದ್ರಿಂದ ಕೆಲ ಮುಂಬೈ ಫ್ಯಾನ್ಸ್, ಐಪಿಎಲ್ ಆರಂಭದಿಂದಲೂ ಮುಂಬೈ ಪಂದ್ಯದ ವೇಳೆ ಹಾರ್ದಿಕ್ ವಿರುದ್ಧ ಘೋಷಣೆಗಳನ್ನ ಕೂಗ್ತಿದ್ದಾರೆ.  ಮೊನ್ನೆಯ ಪಂದ್ಯದಲ್ಲೂ ಮುಂದುವರಿದಿತ್ತು. ಆದ್ರೆ, ಈ ವೇಳೆ ಕೊಹ್ಲಿ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ರು. ಹಾರ್ದಿಕ್ ಟೀಮ್ ಇಂಡಿಯಾ ಪ್ಲೇಯರ್ ಅನ್ನೋದು ನೆನಪಿರಲಿ ಅಂತ ಹೇಳಿದ್ರು. ಕೊಹ್ಲಿಯ ಒಂದೇ ಮಾತಿನಿಂದ ಫ್ಯಾನ್ಸ್  ಸೈಲಾಂಟಾದ್ರೂ. ಕೊಹ್ಲಿಯ ಈ ನಡೆಯ ವಿರುದ್ಧ ಅಸಲಿ ಕ್ರಿಕೆಟ ಫ್ಯಾನ್ಸ್ ಫಿದಾ ಆಗಿದ್ದಾರೆ. 

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಕೊಹ್ಲಿ ಇಂತಹದ್ದೇ ನಡೆಯಿಂದ ಫ್ಯಾನ್ಸ್ ಮೆಚ್ಚುಗೆಗೆ ಪಾತ್ರರಾಗಿದ್ರು. 2023ರ IPLನಲ್ಲಿ ಕೊಹ್ಲಿ ಮತ್ತು ಆಪ್ಘಾನ್ ಪ್ಲೇಯರ್ ನವೀನ್ ಉಲ್ ಹಕ್ ಆನ್ಫೀಲ್ಡ್ನಲ್ಲೇ ಕಿತ್ತಾಡಿಕೊಂಡಿದ್ರು. ಈ ಘಟನೆ ನಂತರ ರನ್ಮಷಿನ್ ಫ್ಯಾನ್ಸ್ ನವೀನ್ ಉಲ್ ಹಕ್ ವಿರುದ್ಧ ಕಿಡಿಕಾರ್ತಿದ್ರು. ವಿಶ್ವಕಪ್ ಪಂದ್ಯಗಳಲ್ಲಿ ನವೀನ್ ವಿರುದ್ದ ಘೋಷಣೆ ಕೂಗ್ತಿದ್ರು. 

'ನಾನು ನಿಮ್ಮ ಅತಿದೊಡ್ಡ ಚಿಯರ್ ಲೀಡರ್..': ಆಗಾಗ ಸುದ್ದಿಯಲ್ಲಿರುವ ಚಹಲ್ ಪತ್ನಿ ಹೀಗೆ ಹೇಳಿದ್ದು ಯಾರಿಗೆ?

ಭಾರತ-ಆಪ್ಘಾನಿಸ್ತಾನ ನಡುವಿನ ಪಂದ್ಯದ ವೇಳೆಯೂ ವಿರಾಟ್ ಫ್ಯಾನ್ಸ್ ನವೀನ್ ಮೇಲೆ ಮುಗಿಬಿದ್ದಿದ್ರು. ಈ ವೇಳೆ ವಿರಾಟ್ ಸಂಜ್ಞೆ ಮಾಡಿ, ಘೋಷಣೆಗಳನ್ನ ಕೂಗೋದನ್ನ ನಿಲ್ಲಿಸಿ ಅಂತ ಸೂಚಿಸಿದ್ರು. ನಂತರ ಅಭಿಮಾನಿಗಳು ಸುಮ್ಮನಾದ್ರು. ಇದ್ರಿಂದ ಫುಲ್ ಖುಷ್ ಆದ ನವೀನ್ ಕೊಹ್ಲಿಯನ್ನ ಶ್ಲಾಘಿಸಿದ್ರು. ಇಬ್ಬರೂ  ಕಹಿ ಘಟನೆಯನ್ನ ಮರೆತು ಒಂದಾದ್ರು. 

ಸ್ಮಿತ್‌ರನ್ನ ಅಣಕಿಸಿದ್ದ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದ ಕೊಹ್ಲಿ..!

2019ರ ಏಕದಿನ ವಿಶ್ವಕಪ್ ವೇಳೆ ಕೊಹ್ಲಿ ಅಭಿಮಾನಿಗಳ ಮನಗೆದ್ದಿದ್ರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯವೊಂದರಲ್ಲಿ, ಭಾರತದ ಅಭಿಮಾನಿಗಳು ಸ್ಟೀವ್ ಸ್ಮಿತ್ಗೆ ಸ್ಲೆಡ್ಜ್ ಮಾಡ್ತಿದ್ರು. ಇದನ್ನ ಕಂಡ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ, ಸುಮ್ಮನಿರುವಂತೆ ಸೂಚಿಸಿದ್ರು. ಒಟ್ಟಿನಲ್ಲಿ ಕೊಹ್ಲಿ ಅಂದ್ರೆ ಅಗ್ರೆಷನ್ ಮಾತ್ರವಲ್ಲ, ಕೊಹ್ಲಿ ಅಂದ್ರೆ ಜೆಂಟಲ್ಮೆನ್ ಅನ್ನೋದನ್ನೆ ಈ ಘಟನೆಗಳೇ ಸಾಕ್ಷಿ..! 

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios