IPL 2024 ತಿಲಕ ವರ್ಮಾ, ಸೂರ್ಯಕುಮಾರ್ ಅಬ್ಬರ, ಪಂಜಾಬ್‌ಗೆ 193 ರನ್ ಟಾರ್ಗೆಟ್

ಮುಂಬೈ ಇಂಡಿಯನ್ಸ್ ದಿಟ್ಟ ಹೋರಾಟ ಮೂಲಕ 192 ರನ್ ಸಿಡಿಸಿದೆ. ಅಂತಿಮ ಹಂತದಲ್ಲಿ ತಿಲಕ್ ವರ್ಮಾ ಅಬ್ಬರ ಮುಂಬೈ ತಂಡಕ್ಕೆ ನೆರವಾಗಿದೆ.ಇದೀಗ ಪಂಜಾಬ್ 193 ರನ್ ಚೇಸ್ ಮಾಡುವ ವಿಶ್ವಾಸದಲ್ಲಿದೆ.

IPL 2024 Tilak Varma help Mumbai Indians to set 193 run Target to Punjab ckm

ಚಂಡೀಘಡ(ಏ.18) ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಹೋರಾಟ ಪ್ಲೇ ಆಫ್ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಅಬ್ಬರದಿಂದ ಮುಂಬೈ ಇಂಡಿಯನ್ಸ್ 7 ವಿಕೆಟ್ ನಷ್ಟಕ್ಕೆ 192 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಆರಂಭ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಇಶಾನ್ ಕಿಶನ್ ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಹೋರಾಟ ಮುಂಬೈ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ರೋಹಿತ್ ಶರ್ಮಾ 36 ರನ್ ಸಿಡಿಸಿ ಔಟಾದರು. 99 ರನ್‌ಗೆ ಮುಂಬೈ ಇಂಡಿಯನ್ಸ್ 2ನೇ ವಿಕೆಟ್ ಕಳೆದುಕೊಂಡಿತು.

ಯಾರಮ್ಮ ಇವಳು? ಮನಸ್ಸು ಕದ್ದ ಹುಡುಗಿ, ವೈರಲ್ ಆದ ಐಪಿಎಲ್ ಫ್ಯಾನ್ ಗರ್ಲ್!

ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಹಾಫ್ ಸೆಂಚುರಿ ಸಿಡಿಸಿದ ಸೂರ್ಯಕುಮಾರ್ ಯಾದವ್ ಮುಂಬೈ ತಂಡಕ್ಕೆ ಆಸರೆಯಾದರು. ಇತ್ತ ತಿಲಕ್ ವರ್ಮಾ ಕೂಡ ಅಬ್ಬರಿಸಲು ಆರಂಭಿಸಿದರು. ಸೂರ್ಯಕುಮಾರ್ ಯಾದವ್ 53 ಎಸೆತದಲ್ಲಿ 78 ರನ್ ಸಿಡಿಸಿ ಔಟಾದರು.

ನಾಯಕ ಹಾರ್ದಿಕ್ ಪಾಂಡ್ಯ ಕೇವಲ 10 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಟಿಮ್ ಡೇವಿಡ್ 14 ರನ್ ಸಿಡಿಸಿದರು. ರೊಮಾರಿಯಾ ಶೇಫರ್ಡ್ ಕೇವಲ 1ರನ್ ಸಿಡಿಸಿದರೆ, ಮೊಹಮ್ಮದ್ ನಬಿ ರನೌಟ್‌ಗೆ ಬಲಿಯಾದರು. ಇತ್ತ ಅಜೇಯ ಹೋರಾಟ ನೀಡಿದ ತಿಲಕ್ ವರ್ಮಾ 18 ಎಸೆತದಲ್ಲಿ 34 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 7 ವಿಕೆಟ್ ಕಳೆದುಕೊಂಡು 192 ರನ್ ಸಿಡಿಸಿತು.

193 ರನ್ ಟಾರ್ಗೆಟ್ ಪಡೆದಿರುವ ಪಂಜಾಬ್ ಕಿಂಗ್ಸ್ ಚೇಸಿಂಗ್ ವಿಶ್ವಾಸದಲ್ಲಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿರುವ ಪಂಜಾಬ್ ಚೇಸ್ ಮಾಡಿ ಮುಂಬೈಗೆ ಮತ್ತೊಂದು ಶಾಕ್ ಕೊಡುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.

ಟೀಮ್‌ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮ ಬಳಿ ಇರುವ 7 ದುಬಾರಿ ವಸ್ತುಗಳಿವು!

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ರೀಲೆ ರೋಸೋ, ಪ್ರಭಸಿಮ್ರನ್ ಸಿಂಗ್, ಸ್ಯಾಮ್ ಕುರನ್(ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್) ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಾಗಿಸೋ ರಬಡಾ, ಅರ್ಶದೀಪ್ ಸಿಂಗ್
 

Latest Videos
Follow Us:
Download App:
  • android
  • ios