ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ ಬಳಿ ಇರುವ 7 ದುಬಾರಿ ವಸ್ತುಗಳಿವು!
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ ಹಲವು ದುಬಾರಿ ವಸ್ತುಗಳ ಮಾಲೀಕ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ರೋಹಿತ್ ಶರ್ಮ ಅವರ ಬಳಿಕ ಇರುವ 7 ದುಬಾರಿ ವಸ್ತುಗಳ ಲಿಸ್ಟ್ ಇಲ್ಲಿದೆ.
Rohit Sharma
ಹಿಟ್‌ಮ್ಯಾನ್ ಎನ್ನುವ ಹೆಸರೇ ಭಾರತೀಯ ಕ್ರಿಕೆಟ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್. ಕ್ರಿಕೆಟ್ ಆಡುವುದರಿಂದಲೇ ರೋಹಿತ್ ಶರ್ಮ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಹಣ ಗಳಿಸುತ್ತಾರೆ.
ಕ್ರಿಕೆಟ್ ಹೊರತಾಗಿ ರೋಹಿತ್ ಶರ್ಮ ಅವರ ಆದಾಯದ ದೊಡ್ಡ ಮೂಲ ಜಾಹೀರಾತುಗಳು. ಪ್ರಸ್ತುತ ರೋಹಿತ್ ಶರ್ಮ 24 ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದಾರೆ.
ಕ್ರೋಲ್ ಸೆಲಬ್ರಿಟಿ ಬ್ರ್ಯಾಂಡ್ ವ್ಯಾಲ್ಯುವೇಷನ್ ಸ್ಟಡಿ ಪ್ರಕಾರ 2021ರಲ್ಲಿ ರೋಹಿತ್ ಶರ್ಮ ಅವರ ಬ್ರ್ಯಾಂಡ್ ಮೌಲ್ಯ 26 ಮಿಲಿಯನ್ ಯುಎಸ್ ಡಾಲರ್ ಆಗಿತ್ತು.
ಇದರೊಂದಿಗೆ ರೋಹಿತ್ ಶರ್ಮ ಕೆಲವು ದುಬಾರಿ ವಸ್ತುಗಳಿಗೂ ಮಾಲೀಕರಾಗಿದ್ದಾರೆ. ಅವರು ಹೊಂದಿರುವ ಪ್ರಮುಖ ಐಷಾರಾಮಿ ಆಸ್ತಿಗಳು ಇಲ್ಲಿದೆ.
ರೋಹಿತ್ ಶರ್ಮ ಅವರ ಬಳಿ ಕಡಿಮೆ ಎಂದರೂ 100ಕ್ಕೂ ಅಧಿಕ ವಾಚ್‌ಗಳಿವೆ. ಇದರಲ್ಲಿ ಅತ್ಯಂತು ದುಬಾರಿ ವಾಚ್ ಹುಬೋಲ್ಟ್ ಫೆರಾರಿ ಯುನಿಕೋ ಮ್ಯಾಜಿಕ್ ಗೋಲ್ಡ್. ಈ ವಾಚ್‌ನ ಬೆಲೆ 27.8 ಲಕ್ಷ ರೂಪಾಯಿ
ಇದರೊಂದಿಗೆ ರೋಹಿತ್ ಶರ್ಮ 2019ರಲ್ಲಿ ಭಾರತದಲ್ಲಿ ಲಾಂಚ್ ಆದ ಬಿಎಂಡಬ್ಲ್ಯು 350ಎಲ್ ಕಾರ್‌ಅನ್ನೂ ಹೊಂದಿದ್ದರೆ. ಇದರ ಬೆಲೆ 80 ಲಕ್ಷ ರೂಪಾಯಿ.
ಮರ್ಸಿಡೀಸ್ ಜಿಎಲ್‌ಎಸ್ 350 ಡಿ ಕಾರ್‌ಗೂ ರೋಹಿತ್ ಶರ್ಮ ಮಾಲೀಕರಾಗಿದ್ದಾರೆ. ಈ ಕಾರ್‌ಅನ್ನು ಖರೀದಿ ಮಾಡಿದ ವೇಳೆ 95 ಲಕ್ಷ ರೂಪಾಯಿ ಮೌಲ್ಯ ಹೊಂದಿತ್ತು.
ಕಳೆದ ಕೆಲವು ವಾರಗಳವರೆಗೂ 1.33 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಎಂ5 ಕಾರು ರೋಹಿತ್ ಶರ್ಮ ಅವರ ಗ್ಯಾರೇಜ್‌ನಲ್ಲಿದ್ದ ಅತ್ಯಂತ ದುಬಾರಿ ಕಾರು ಎನಿಸಿತ್ತು.
ತೀರಾ ಇತ್ತೀಚೆಗೆ ರೋಹಿತ್ ಶರ್ಮ ಲ್ಯಾಂಬೋರ್ಗಿನಿ ಉರುಸ್ ಕಾರ್‌ಅನ್ನು ಖರೀದಿ ಮಾಡಿದ್ದಾರೆ. 3.10 ಕೋಟಿ ರೂಪಾಯಿ ಮೌಲ್ಯದ ಈ ಕಾರ್, ರೋಹಿತ್ ಶರ್ಮ ಗ್ಯಾರೇಜ್‌ನ ಅತ್ಯಂತ ದುಬಾರಿ ಕಾರು ಎನಿಸಿದೆ.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಾಜೆಕ್ಟ್ 'ಡಿಸ್ಕವರಿಯಲ್ಲಿ' ಖಂಡಾಲಾ ಹಾಲಿಡೇ ಹೋಮ್‌ಅನ್ನು ರೋಹಿತ್ ಶರ್ಮ ಹೊಂದಿದ್ದಾರೆ. ಇದರ ಮೌಲ್ಯ 5 ಕೋಟಿ ರೂಪಾಯಿ ಆಗಿದೆ.
ಮುಂಬೈನ ವೊರ್ಲಿಯಲ್ಲಿರುವ ಅಹುಜಾ ಟವರ್ಸ್‌ನ 26ನೇ ಮಹಡಿಯಲ್ಲಿ ರೋಹಿತ್ ಶರ್ಮ ವಾಸ ಮಾಡುತ್ತಿದ್ದಾರೆ. 4 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನ ಮೌಲ್ಯ 30 ಕೋಟಿ ರೂಪಾಯಿ ಆಗಿದೆ.