Asianet Suvarna News Asianet Suvarna News

IPL 2024 ಸನ್‌ರೈಸರ್ಸ್‌ ಹೈದರಾಬಾದ್ ಆರ್ಭಟಕ್ಕೆ ಬ್ರೇಕ್‌ ಹಾಕುತ್ತಾ ಡೆಲ್ಲಿ ಕ್ಯಾಪಿಟಲ್ಸ್?

ಹೈದರಾಬಾದ್‌ ಆಡಿರುವ 6ರಲ್ಲಿ 4 ಪಂದ್ಯ ಗೆದ್ದಿದ್ದು, ಕಳೆದ 3 ಪಂದ್ಯಗಳಲ್ಲೂ ಜಯಗಳಿಸಿದೆ. ಸ್ಫೋಟಕ ಬ್ಯಾಟರ್‌ಗಳಾದ ಟ್ರ್ಯಾವಿಸ್‌ ಹೆಡ್‌, ಕ್ಲಾಸೆನ್‌, ಮಾರ್ಕ್‌ರಮ್‌, ಅಭಿಷೇಕ್‌ ಶರ್ಮಾ ತಂಡದ ಟ್ರಂಪ್‌ಕಾರ್ಡ್ಸ್‌. ಇವರು ಅಬ್ಬರಿಸಲು ಶುರುವಿಟ್ಟರೆ ಕಡಿವಾಣ ಹಾಕುವುದು ಕಷ್ಟ ಎಂಬ ಅರಿವು ಡೆಲ್ಲಿಗಿದ್ದು, ಸೂಕ್ತ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ.

IPL 2024 Sunrisers Hyderabad take on Delhi Capitals Challenge kvn
Author
First Published Apr 20, 2024, 11:39 AM IST

ಡೆಲ್ಲಿ(ಏ.20): ತನ್ನ ಸ್ಫೋಟಕ ಬ್ಯಾಟಿಂಗ್‌, ರನ್‌ ದಾಖಲೆಗಳ ಸುರಿಮಳೆ ಮೂಲಕವೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿರುವ ಸನ್‌ರೈಸರ್ಸ್‌ ಹೈದರಾಬಾದ್‌ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಾಡಲಿದ್ದು, ಮತ್ತೊಂದು ಗೆಲುವಿನ ಕಾತರದಲ್ಲಿದೆ. ಆದರೆ ಸನ್‌ರೈಸರ್ಸ್‌ನ ಆರ್ಭಟಕ್ಕೆ ತವರಿನಲ್ಲೇ ಕಡಿವಾಣ ಹಾಕಲು ಡೆಲ್ಲಿ ತಂಡ ಕಾಯುತ್ತಿದೆ.

ಹೈದರಾಬಾದ್‌ ಆಡಿರುವ 6ರಲ್ಲಿ 4 ಪಂದ್ಯ ಗೆದ್ದಿದ್ದು, ಕಳೆದ 3 ಪಂದ್ಯಗಳಲ್ಲೂ ಜಯಗಳಿಸಿದೆ. ಸ್ಫೋಟಕ ಬ್ಯಾಟರ್‌ಗಳಾದ ಟ್ರ್ಯಾವಿಸ್‌ ಹೆಡ್‌, ಕ್ಲಾಸೆನ್‌, ಮಾರ್ಕ್‌ರಮ್‌, ಅಭಿಷೇಕ್‌ ಶರ್ಮಾ ತಂಡದ ಟ್ರಂಪ್‌ಕಾರ್ಡ್ಸ್‌. ಇವರು ಅಬ್ಬರಿಸಲು ಶುರುವಿಟ್ಟರೆ ಕಡಿವಾಣ ಹಾಕುವುದು ಕಷ್ಟ ಎಂಬ ಅರಿವು ಡೆಲ್ಲಿಗಿದ್ದು, ಸೂಕ್ತ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ. ಆದರೆ ಸನ್‌ರೈಸರ್ಸ್‌ನ ಬೌಲಿಂಗ್‌ ವಿಭಾಗ ದುಬಾರಿಯಾಗುತ್ತಿದ್ದು, ಸುಧಾರಿತ ಪ್ರದರ್ಶನದ ಅಗತ್ಯವಿದೆ.

ಆಟಗಾರರಿಗೆ ಸೂಕ್ತವಲ್ಲ: ಇಂಪ್ಯಾಕ್ಟ್‌ ನಿಯಯಕ್ಕೆ ರಿಕಿ ಪಾಂಟಿಂಗ್‌ ಆಕ್ಷೇಪ..!

ಅತ್ತ ಡೆಲ್ಲಿ 7 ಪಂದ್ಯಗಲ್ಲಿ 3ರಲ್ಲಿ ಗೆದ್ದಿದ್ದು, ಪ್ಲೇ-ಆಫ್‌ ಹಾದಿ ಸುಗಮಗೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ತಂಡ ಟೂರ್ನಿಯಲ್ಲಿ ಮೊದಲ ಬಾರಿ ತವರಿನ ಡೆಲ್ಲಿ ಕ್ರೀಡಾಂಗಣದಲ್ಲಿ ಆಡಲು ಸಜ್ಜಾಗಿದೆ. ಟೂರ್ನಿಯಲ್ಲಿ ಡೆಲ್ಲಿ ಸಾಧಾರಣ ಪ್ರದರ್ಶನ ತೋರುತ್ತಿದ್ದರೂ, ಚೆನ್ನೈ ಹಾಗೂ ಗುಜರಾತ್ ವಿರುದ್ಧದ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಒಟ್ಟು ಮುಖಾಮುಖಿ: 23

ಡೆಲ್ಲಿ: 11

ಹೈದ್ರಾಬಾದ್‌: 12

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಜೇಕ್‌ ಫ್ರೇಸರ್‌, ಟ್ರಿಸ್ಟನ್‌ ಸ್ಟಬ್ಸ್‌, ಶಾಯ್ ಹೋಪ್‌, ರಿಷಭ್ ಪಂತ್(ನಾಯಕ), ಅಕ್ಷರ್‌ ಪಟೇಲ್, ಸುಮಿತ್‌, ಕುಲ್ದೀಪ್‌ ಯಾದವ್, ಇಶಾಂತ್‌ ಶರ್ಮಾ, ಮುಕೇಶ್‌ ಕುಮಾರ್, ಖಲೀಲ್‌ ಅಹಮದ್.

ಸನ್‌ರೈಸರ್ಸ್‌ ಹೈದ್ರಾಬಾದ್‌: ಟ್ರಾವಿಸ್ ಹೆಡ್‌, ಅಭಿಷೇಕ್‌ ಶರ್ಮಾ, ಏಡನ್‌ ಮಾರ್ಕ್‌ರಮ್, ಹೆನ್ರಿಚ್ ಕ್ಲಾಸೆನ್‌, ನಿತೀಶ್‌, ಅಬ್ದುಲ್ ಸಮದ್‌, ಶಾಬಾಜ್‌ ಅಹಮ್ಮದ್, ಪ್ಯಾಟ್ ಕಮಿನ್ಸ್‌(ನಾಯಕ), ಭುವನೇಶ್ವರ್‌ ಕುಮಾರ್, ಜಯದೇವ್ ಉನಾದ್ಕಟ್‌, ಟಿ ನಟರಾಜನ್‌.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಜಿಯೋ ಸಿನಿಮಾ
 

Follow Us:
Download App:
  • android
  • ios