IPL 2024 ದಿನೇಶ್ ಕಾರ್ತಿಕ್ ಒಂದು ನಿರ್ಧಾರದಿಂದ ಆರ್‌ಸಿಬಿ ಸೋಲು ಕಂಡಿತಾ? ಏನಿದು ವಿವಾದ!
ಕೆಕೆಆರ್ ವಿರುದ್ಧ ಆರ್‌ಸಿಬಿ ಕೇವಲ 1 ರನ್‌ನಿಂದ ಸೋಲು ಕಂಡಿದೆ. ಈ ಸೋಲಿಗೆ ಹಲವು ಕಾರಣಗಳಿವೆ. ಈ ಪೈಕಿ ದಿನೇಶ್ ಕಾರ್ತಿಕ್ ವಿರುದ್ಧವೂ ನೆಟ್ಟಿಗರು ಆರೋಪ ಹೊರಿಸಿದ್ದಾರೆ. ಅಷ್ಟಕ್ಕು ಕಾರ್ತಿಕ್ ಆ ಒಂದು ನಿರ್ಧಾರ ಸೋಲಿಗೆ ಕಾರಣವಾಯಿತಾ?
ಕೋಲ್ಕತಾ(ಏ.21) ಐಪಿಎಲ್ 2024 ಟೂರ್ನಿಯಲ್ಲಿ ಆರ್‌ಸಿಬಿ ಗೆಲುವು ಕಾದ ಅಭಿಮಾನಿಳಲು ಸುಸ್ತಾಗಿದ್ದಾರೆ. ಕಪ್ ಮಾತು ದೂರ, ಕನಿಷ್ಠ ಗೆಲುವು ಬರಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ವಿರೋಚಿತ ಸೋಲು ಕಂಡಿದೆ. ಕೇವಲ 1 ರನ್‌ಗಳ ಸೋಲು ಅಭಿಮಾನಿಗಳನ್ನು ಮತ್ತಷ್ಟು ಘಾಸಿಗೊಳಿಸಿದೆ. ಈ ಸೋಲಿಗೆ ಹಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ದಿನೇಶ್ ಕಾರ್ತಿಕ್ ವಿರುದ್ದ ಆರೋಪಗಳು ಕೇಳಿಬಂದಿದೆ. 18ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಕರಣ್ ಶರ್ಮಾ ಸಾಮರ್ಥ್ಯದ ಮೇಲೆ ಅನುಮಾನ ಪಟ್ಟ ದಿನೇಶ್ ಕಾರ್ತಿಕ್ ಸಿಂಗಲ್ಸ್ ಪಡೆಯದೇ ತಾವೇ ಕ್ರೀಸ್‌ನಲ್ಲಿ ಉಳಿದುಕೊಂಡರು. ಇತ್ತ ಕಾರ್ತಿಕ್ ರನ್ ಸಿಡಿಸಲಿಲ್ಲ, ಅತ್ತ ಕರಣ್ ಶರ್ಮಾಗೆ ಚೇಸ್ ಮಾಡಲು ಅವಕಾಶ ನೀಡಲಿಲ್ಲ. ಈ ನಿರ್ಧಾರ ಆರ್‌ಸಿಬಿ ಸೋಲಿಗೆ ಕಾರಣವಾಗಿದೆ ಎಂದು ನೆಟ್ಟಿಗರು ದೂರಿದ್ದಾರೆ.
ಕೆಕೆಆರ್ ನೀಡಿದ 223 ರನ್ ಟಾರ್ಗೆಟ್ ಚೇಸ್ ಮಾಡಲು ಹೋರಾಟ ನೀಡಿದ ಆರ್‌ಸಿಬಿ ಅಂತಿಮ ಹಂತದಲ್ಲಿ ರೋಚಕ ತಿರುವು ಪಡೆದುಕೊಂಡಿತು. ಸುಯಾಷ್ ಪ್ರುಭದೇಸಾಯಿ ವಿಕೆಟ್ ಪತನದ ಬಳಿಕ 18ನೇ ಓವರ್‌ನಲ್ಲಿ ಕರಣ್ ಶರ್ಮಾ ಕ್ರೀಸ್‌ಗೆ ಆಗಮಿಸಿದರು. ಆದರೆ ಕರಣ್ ಸಾಮರ್ಥ್ಯದ ಬಗ್ಗೆ ದಿನೇಶ್ ಕಾರ್ತಿಕ್ ಅನುಮಾನ ಪಟ್ಟಿದ್ದರು. ಹೀಗಾಗಿ ದಿನೇಶ್ ಕಾರ್ತಿಕ್ ಸಿಂಗಲ್ಸ್ ತೆಗೆದುಕೊಳ್ಳಲಿಲ್ಲ, ಕರಣ್ ಶರ್ಮಾಗೆ ಕ್ರೀಸ್ ನೀಡಲಿಲ್ಲ.
ಕೆಕೆಆರ್ ಎದುರು 1 ರನ್ ರೋಚಕ ಸೋಲು ಕಂಡ ಆರ್‌ಸಿಬಿ..! ಪ್ಲೇ ಆಫ್ ಕನಸು ಬಹುತೇಕ ಭಗ್ನ
ಕಾರ್ತಿಕ್ ಹೆಚ್ಚು ಎಸೆತಗಳನ್ನು ಎದುರಿಸಿದರೂ ಅಬ್ಬರಿಸಲಿಲ್ಲ. ಇತ್ತ ಕರಣ್ ಶರ್ಮಾಗೆ ಬ್ಯಾಟಿಂಗ್ ಅವಕಾಶವನ್ನೂ ನೀಡಲಿಲ್ಲ. 18ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಕರಣ್ ಶರ್ಮಾಗೆ ಬ್ಯಾಟಿಂಗ್ ಅವಕಾಶ ಸಿಕ್ಕಿದ್ದು, ಕೊನೆಯ 20ನೇ ಓವರ್‌ನಲ್ಲಿ. ದಿನೇಶ್ ಕಾರ್ತಿಕ್ ವಿಕೆಟ್ ಪತನದ ಬಳಿಕ ಕರಣ್ ಶರ್ಮಾ , ವೇಗಿ ಮಿಚೆಲ್ ಸ್ಟಾರ್ಕ್ 4 ಎಸೆತದಲ್ಲಿ 3 ಸಿಕ್ಸರ್ ಸಿಡಿಸಿದರು. ಅಂತಿಮ 2 ಎಸೆತದಲ್ಲಿ 3 ರನ್ ಅವಶ್ಯಕತೆ ಇತ್ತು. ಆದರೆ ಕರಣ್ ಶರ್ಮಾ ವಿಕೆಟ್ ಪತನಗೊಂಡಿತು. ಅಂತಿಮ ಒಂದು ಎಸೆತದಲ್ಲಿ 3 ರನ್ ಬೇಕಿತ್ತು. ಈ ವೇಳೆ 1 ರನ್ ಸಿಡಿಸಿದ ಆರ್‌ಸಿಬಿ ಕೇವಲ 1 ರನ್‌ಗಳಿಂದ ಸೋಲು ಕಂಡಿತ್ತು.
ದಿನೇಶ್ ಕಾರ್ತಿಕ್ ಸಿಂಗಲ್ಸ್ ತೆಗೆಯದೇ ಅತ್ತ ಕರಣ್ ಶರ್ಮಾಗೂ ಕ್ರೀಸ್ ನೀಡದೆ ಇರುವೇದೇ ಈ ಸೋಲಿಗೆ ಕಾರಣ ಅನ್ನೋ ಚರ್ಚೆ ಶುರುವಾಗಿದೆ. ಕಾರ್ತಿಕ್ 18 ಎಸೆತದ ಎದುರಿಸಿ 25 ರನ್ ಸಿಡಿಸಿ ಔಟಾದರು. ಸೋಲಿಗೆ ಹಲವು ಕಾರಣಗಳಿವೆ. ಆದರೆ ಆರ್‌ಸಿಬಿಯ ಪ್ಲೇಆಫ್ ದಾರಿಗಳು ಬಹುತೇಕ ಮುಚ್ಚುತ್ತಿದೆ. ಇನ್ನುಳಿದ ಎಲ್ಲಾ ಪಂದ್ಯದಲ್ಲಿ ಗೆದ್ದರೆ ಕೊನೆಯ ಅವಕಾಶದ ಬಾಗಿಲು ತೆರೆದುಕೊಳ್ಳುವ ಸಾಧ್ಯತೆಗಳಿವೆ.
Video ಸಿಕ್ಸರ್ ಸೆಲೆಬ್ರೇಷನ್‌ನಲ್ಲಿ ಜಾರೋಯ್ತು ಚಹಾಲ್ ಪ್ಯಾಂಟ್, 1ರನ್ನಿಂದ ಫಿಫ್ಟಿ ಮಿಸ್!