IPL 2024 ಭೇಟಿಗೆ ಬಂದು ಬೇಟೆ ಆದ್ರು: ಡೆಲ್ಲಿ ಕ್ಯಾಪಿಟಲ್ಸ್ ಕಾಲೆಳೆದ ಆರ್‌ಸಿಬಿ!

ಭಾನುವಾರ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಕನ್ನಡದಲ್ಲಿ 'ನಮಸ್ಕಾರ ಬೆಂಗಳೂರು, ಭೇಟಿಯಾಗೋಣ ಚಿನ್ನಸ್ವಾಮಿಯಲ್ಲಿ' ಎಂದು ಬರೆದಿತ್ತು. 

IPL 2024 RCB Trolls Delhi Capitals after 47 runs win kvn

ಬೆಂಗಳೂರು(ಮೇ.14): ಸಾಮಾಜಿಕ ತಾಣಗಳಲ್ಲಿಆರ್‌ಸಿಬಿ ಆಗಾಗ ಸದ್ದು ಮಾಡುತ್ತಲೇ ಇರುತ್ತೆ. ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಡಿರುವ ಪೋಸ್ಟ್ ಒಂದು ಇದೀಗ ಭಾರಿ ವೈರಲ್ ಆಗಿದೆ. 

ಭಾನುವಾರ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಕನ್ನಡದಲ್ಲಿ 'ನಮಸ್ಕಾರ ಬೆಂಗಳೂರು, ಭೇಟಿಯಾಗೋಣ ಚಿನ್ನಸ್ವಾಮಿಯಲ್ಲಿ' ಎಂದು ಬರೆದಿತ್ತು. 

ಪಂದ್ಯ ಮುಗಿದ ಬಳಿಕ ಡೆಲ್ಲಿಯ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಆರ್‌ಸಿಬಿ, 'ಭೇಟಿ ಆಗೋಕೆ ಬಂದು ಬೇಟೆ ಆಗೋದ್ರು' ಎಂದಿದೆ. ಆರ್‌ಸಿಬಿಯ ಈ ಪೋಸ್ಟ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿಗೆ ಭರ್ಜರಿ ಜಯ: 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ 62ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಿದವು. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಉತ್ತಮ ಆರಂಭದ ಹೊರತಾಗಿಯೂ ಕಲೆಹಾಕಿದ್ದು 9 ವಿಕೆಟ್‌ಗೆ 187 ರನ್‌. ಚಿನ್ನಸ್ವಾಮಿಯಲ್ಲಿ ಈ ಮೊತ್ತ ಯಾವುದೇ ತಂಡಕ್ಕೂ ಚೇಸ್‌ ಮಾಡಬಹುದಾದ ಮೊತ್ತ. ಆದರೆ ಆರ್‌ಸಿಬಿಯ ಅನಿರೀಕ್ಷಿತ ಬೆಂಕಿ ಬೌಲಿಂಗ್‌ ದಾಳಿ ಡೆಲ್ಲಿಯನ್ನು ಕಂಗೆಟ್ಟಿಸಿತು. ಫೀಲ್ಡಿಂಗ್‌ ಕೂಡ ಅಮೋಘವಾಗಿದ್ದ ಕಾರಣ ಡೆಲ್ಲಿ 19.1 ಓವರಲ್ಲಿ ಆಲೌಟ್‌ ಆಯಿತು. ಈ ಮೂಲಕ ಆರ್‌ಸಿಬಿ 47 ರನ್ ಜಯ ಸಾಧಿಸಿತು.

ಗುಜರಾತ್ ಟೈಟಾನ್ಸ್‌ನ ಹೊರದಬ್ಬಿದ ಮಳೆರಾಯ; ಕ್ವಾಲಿಫೈಯರ್‌-1ರಲ್ಲಿ ಸ್ಥಾನ ಪಡೆದ ಕೆಕೆಆರ್‌..!

ಐಪಿಎಲ್‌ ತೊರೆದು ಆರ್‌ಸಿಬಿಯ ಜ್ಯಾಕ್ಸ್‌, ಟಾಪ್ಲಿ, ರಾಯಲ್ಸ್‌ನ ಬಟ್ಲರ್‌ ತವರಿಗೆ!

ಬೆಂಗಳೂರು: ಐಪಿಎಲ್‌ ಪ್ಲೇ-ಆಫ್‌ ಸನಿಹದಲ್ಲೇ ಆರ್‌ಸಿಬಿಯ ತಾರಾ ಆಲ್ರೌಂಡರ್‌ ವಿಲ್ ಜ್ಯಾಕ್ಸ್, ವೇಗಿ ರೀಸ್‌ ಟಾಪ್ಲಿ ಹಾಗೂ ರಾಜಸ್ಥಾನ ರಾಯಲ್ಸ್‌ನ ವಿಕೆಟ್ ಕೀಪರ್‌ ಬ್ಯಾಟರ್‌ ಜೋಸ್‌ ಬಟ್ಲರ್‌ ತಮ್ಮ ತವರು ದೇಶ ಇಂಗ್ಲೆಂಡ್‌ಗೆ ಹಿಂದಿರುಗಿದ್ದಾರೆ.

ಟಿ20 ವಿಶ್ವಕಪ್‌ ಸಿದ್ಧತೆಗಾಗಿ ಅವರು ಶೀಘ್ರದಲ್ಲೇ ರಾಷ್ಟ್ರೀಯ ತಂಡಗಳನ್ನು ಕೂಡಿಕೊಳ್ಳಲಿದ್ದಾರೆ. ಇಂಗ್ಲೆಂಡ್‌ ತಂಡ ಮೇ 22ರಿಂದ ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಹೀಗಾಗಿ ಐಪಿಎಲ್‌ನ ಲೀಗ್‌ ಹಂತ ಹಾಗೂ ನಾಕೌಟ್‌ ಪಂದ್ಯಗಳಿಗೆ ಗೈರಾಗಲಿದ್ದಾರೆ.

IPL 2024 ಪ್ಲೇಆಫ್‌ ಸ್ಥಾನಕ್ಕಾಗಿ ಇಂದು ಲಖನೌ vs ಡೆಲ್ಲಿ ಸೆಣಸಾಟ

ಸೋಮವಾರ ವಿಲ್‌ ಜ್ಯಾಕ್ಸ್‌, ರೀಸ್‌ ಟಾಪ್ಲಿ ಹಾಗೂ ಜೋಸ್‌ ಬಟ್ಲರ್‌ ತವರಿಗೆ ಹಿಂದಿರುಗುತ್ತಿರುವ ವಿಡಿಯೋಗಳನ್ನು ಫ್ರಾಂಚೈಸಿಗಳು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿವೆ. ನಿರ್ಣಾಯಕ ಪಂದ್ಯಗಳಲ್ಲಿ ತಾರಾ ಆಟಗಾರರು ಗೈರು ತಂಡಗಳಿಗೆ ಹಿನ್ನಡೆ ಉಂಟು ಮಾಡುವ ಸಾಧ್ಯತೆಯಿದೆ. ಆರ್‌ಸಿಬಿ ಮೇ 18ಕ್ಕೆ ಚೆನ್ನೈ ವಿರುದ್ಧ, ರಾಜಸ್ಥಾನ ತಂಡ ಮೇ 15ಕ್ಕೆ ಪಂಜಾಬ್‌, ಮೇ 19ಕ್ಕೆ ಕೋಲ್ಕತಾ ವಿರುದ್ಧ ಸೆಣಸಾಡಬೇಕಿದೆ.

ಇನ್ನು, ಪಂಜಾಬ್‌ ಕಿಂಗ್ಸ್‌ನ ಲಿಯಾಮ್‌ ಲಿವಿಂಗ್‌ಸ್ಟೋನ್ ಕೂಡಾ ತವರಿಗೆ ಹಿಂದಿರುಗಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ನ ಮೊಯೀನ್‌ ಅಲಿ, ಕೋಲ್ಕತಾ ನೈಟ್‌ ರೈಡರ್ಸ್‌ನ ಫಿಲ್‌ ಸಾಲ್ಟ್‌, ಪಂಜಾಬ್‌ ಕಿಂಗ್ಸ್‌ನ ಜಾನಿ ಬೇರ್‌ಸ್ಟೋವ್‌ ಕೂಡಾ ಕೆಲ ದಿನಗಳಲ್ಲೇ ಇಂಗ್ಲೆಂಡ್‌ ಮರಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಜೂ.1ಕ್ಕೆ ವಿಶ್ವಕಪ್‌ ಆರಂಭಗೊಳ್ಳಲಿದೆ.
 

Latest Videos
Follow Us:
Download App:
  • android
  • ios