ಗುಜರಾತ್ ಟೈಟಾನ್ಸ್‌ನ ಹೊರದಬ್ಬಿದ ಮಳೆರಾಯ; ಕ್ವಾಲಿಫೈಯರ್‌-1ರಲ್ಲಿ ಸ್ಥಾನ ಪಡೆದ ಕೆಕೆಆರ್‌..!

ಸೋಮವಾರ ಸಂಜೆಯಿಂದಲೇ ಸುರಿಯಲು ಆರಂಭಿಸಿದ ಧಾರಾಕಾರ ಮಳೆ ರಾತ್ರಿ 10 ಗಂಟೆ ವರೆಗೂ ನಿಲ್ಲಲಿಲ್ಲ. ಇದರಿಂದಾಗಿ ಟಾಸ್ ಕೂಡಾ ಸಾಧ್ಯವಾಗಲಿಲ್ಲ. ತಲಾ ಕನಿಷ್ಠ 5 ಓವರ್‌ ಪಂದ್ಯಕ್ಕೆ 10.56ರ ಗಡುವು ವಿಧಿಸಲಾಗಿತ್ತಾದರೂ, ಎಡೆಬಿಡದೆ ಸುರಿಯ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತಿತ್ತು. ಹೀಗಾಗಿ 10.45ರ ವೇಳೆ ರೆಫ್ರಿಗಳು ಪರಿಶೀಲನೆ ನಡೆಸಿ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.

IPL 2024 Gujarat Titans eliminated after Kolkata Knight Riders match ends in washout kvn

ಅಹಮದಾಬಾದ್‌: ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್ ನಡುವೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಪಂದ್ಯ ಭಾರಿ ಮಳೆಯಿಂದ ರದ್ದುಗೊಂಡಿದೆ. ಇದರಿಂದಾಗಿ ಇತ್ತಂಡಗಳು ತಲಾ 1 ಅಂಕ ಹಂಚಿಕೊಂಡಿದ್ದು, ಗುಜರಾತ್‌ 17ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿತ್ತು.

ಸೋಮವಾರ ಸಂಜೆಯಿಂದಲೇ ಸುರಿಯಲು ಆರಂಭಿಸಿದ ಧಾರಾಕಾರ ಮಳೆ ರಾತ್ರಿ 10 ಗಂಟೆ ವರೆಗೂ ನಿಲ್ಲಲಿಲ್ಲ. ಇದರಿಂದಾಗಿ ಟಾಸ್ ಕೂಡಾ ಸಾಧ್ಯವಾಗಲಿಲ್ಲ. ತಲಾ ಕನಿಷ್ಠ 5 ಓವರ್‌ ಪಂದ್ಯಕ್ಕೆ 10.56ರ ಗಡುವು ವಿಧಿಸಲಾಗಿತ್ತಾದರೂ, ಎಡೆಬಿಡದೆ ಸುರಿಯ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತಿತ್ತು. ಹೀಗಾಗಿ 10.45ರ ವೇಳೆ ರೆಫ್ರಿಗಳು ಪರಿಶೀಲನೆ ನಡೆಸಿ ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.

ಪ್ಲೇ ಆಫ್ ಲೆಕ್ಕಾಚಾರ ಬೆನ್ನಲ್ಲೇ ಆರ್‌ಸಿಬಿಗೆ ಶಾಕ್, ಇನ್ನುಳಿದ ಪಂದ್ಯಕ್ಕೆ ವಿಲ್ ಜ್ಯಾಕ್ಸ್, ಟಾಪ್ಲೆ ಅಲಭ್ಯ!

ಟೈಟಾನ್ಸ್ ಔಟ್‌: ಪಂದ್ಯ ರದ್ದುಗೊಂಡ ಕಾರಣ ಇತ್ತಂಡಕ್ಕೂ ತಲಾ 1 ಅಂಕ ಲಭಿಸಿತು. ಹೀಗಾಗಿ ಮಾಜಿ ಚಾಂಪಿಯನ್‌ ಗುಜರಾತ್‌ನ ಅಂಕ 11ಕ್ಕೆ ಹೆಚ್ಚಳವಾಯಿತು. ಕೊನೆ ಪಂದ್ಯ ಗೆದ್ದರೂ ತಂಡದ ಅಂಕ ಕೇವಲ 13 ಆಗಲಿದ್ದು, ಪ್ಲೇ-ಆಫ್‌ಗೇರುವ ಅವಕಾಶ ಕಳೆದುಕೊಂಡಿತು. ಗುಜರಾತ್‌ ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಮೇ 16ಕ್ಕೆ ಪಂಜಾಬ್‌ ಸವಾಲು ಎದುರಾಗಲಿದೆ.

ಕ್ವಾಲಿಫೈಯರ್‌-1ರಲ್ಲಿ ಸ್ಥಾನ ಪಡೆದ ಕೆಕೆಆರ್‌

ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಕೋಲ್ಕತಾ 13 ಪಂದ್ಯಗಳಲ್ಲಿ 19 ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಖಚಿತಪಡಿಸಿಕೊಂಡಿದೆ. ತಂಡ ಕ್ವಾಲಿಫೈಯರ್‌-1ರಲ್ಲಿ ಆಡಲಿದ್ದು, ಗೆದ್ದರೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಕೆಕೆಆರ್‌ ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಮೇ 19ರಂದು ರಾಜಸ್ಥಾನ ವಿರುದ್ಧ ಆಡಲಿದೆ.

01ನೇ ಪಂದ್ಯ: ಈ ಬಾರಿ ಐಪಿಎಲ್‌ನಲ್ಲಿ ಮಳೆಯಿಂದಾಗಿ ಮೊದಲ ಬಾರಿ ಪಂದ್ಯ ರದ್ದುಗೊಂಡಿತು.
 
Latest Videos
Follow Us:
Download App:
  • android
  • ios