ಈ ಬಾರಿ ಶತಾಯ ಗತಾಯ ಕಪ್ ಗೆಲ್ಲಲೇಬೇಕು ಅಂತ IPL ಅಖಾಡಕ್ಕಿಳಿದ RCB, ಮತ್ತದೇ ಹಳೆ ಚಾಳಿ ಮುಂದುವರಿಸಿದೆ. ತವರಿನ ಅಂಗಳದಲ್ಲೇ ಸೋಲಿನ ಸಿಲುಕಿದೆ. ಇದ್ರಿಂದ ಈ ಸಲವೂ RCB ಕಪ್ ಗೆಲ್ಲೋದು ಕಷ್ಟವಾಗಿದೆ.

ಬೆಂಗಳೂರು(ಏ.04) ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡು ಸೋಲುಗಳಿಂದ ಕಂಗೆಟ್ಟಿದೆ. ಆದ್ರೆ, ಈ ಸೋಲಿನ ಸರಣಿ ಇಷ್ಟಕ್ಕೆ ನಿಲ್ಲುವಂತೆ ಕಾಣ್ತಿಲ್ಲ. ಯಾಕಂದ್ರೆ, ಇನ್ಮೇಲೆ ಡು ಪ್ಲೆಸಿಸ್ ಪಡೆಗೆ ಮತ್ತಷ್ಟು ಕಠಿಣ ಸವಾಲುಗಳು ಎದುರಾಗಲಿವೆ. ಈ ಸವಾಲುಗಳನ್ನ ಮೆಟ್ಟಿ ನಿಲ್ಲದೇ ಇದ್ರೆ, ಈ ಸಲ ಕೂಡ ಕಪ್ RCBಯದ್ದಲ್ಲ. 

ತವರಿನಾಚೆ ಕಾದಾಡಬೇಕಿದೆ ಡು ಪ್ಲೆಸಿಸ್ ಪಡೆ..!

ಈ ಬಾರಿ ಶತಾಯ ಗತಾಯ ಕಪ್ ಗೆಲ್ಲಲೇಬೇಕು ಅಂತ IPL ಅಖಾಡಕ್ಕಿಳಿದ RCB, ಮತ್ತದೇ ಹಳೆ ಚಾಳಿ ಮುಂದುವರಿಸಿದೆ. ತವರಿನ ಅಂಗಳದಲ್ಲೇ ಸೋಲಿನ ಸಿಲುಕಿದೆ. ಇದ್ರಿಂದ ಈ ಸಲವೂ RCB ಕಪ್ ಗೆಲ್ಲೋದು ಕಷ್ಟವಾಗಿದೆ. ಯಾಕಂದ್ರೆ, ಕಪ್ ಗೆಲ್ಲಬೇಕು ಅಂದ್ರೆ ಮೊದಲು ಪ್ಲೇ ಆಫ್ ಹಂತಕ್ಕೆ ಎಂಟ್ರಿ ನಿಡಬೇಕು. ಆದ್ರೆ, ಪ್ಲೇ ಆಫ್ ಹಂತಕ್ಕೆ ತಲುಪೋದು ಸುಲಭದ ಮಾತಲ್ಲ. ಈಗಾಗ್ಲೇ 4 ಪಂದ್ಯಗಳನ್ನಾಡಿರೋ ಡು ಪ್ಲೆಸಿಸ್ ಪಡೆ, 5ನೇ ಪಂದ್ಯಕ್ಕೆ ರೆಡಿಯಾಗಿದೆ. ಇಲ್ಲಿಂದ ರೆಡ್ ಆರ್ಮಿಯ ದಾರಿ ಮತ್ತಷ್ಟು ಕಠಿಣವಾಗಲಿದೆ.

ಗುಜರಾತ್ ಟೈಟಾನ್ಸ್ ಸವಾಲಿಗೆ ಪಂಜಾಬ್ ಕಿಂಗ್ಸ್ ಸಜ್ಜು, ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿ ಧವನ್ ಪಡೆ

ಯೆಸ್, RCB ಮುಂದಿನ 5 ಪಂದ್ಯಗಳಲ್ಲಿ 1 ಪಂದ್ಯವನ್ನ ಮಾತ್ರ ತವರಿನಲ್ಲಿ ಆಡಲಿದೆ. ಇನ್ನುಳಿದ 4 ಪಂದ್ಯಗಳನ್ನ ತವರಿನಾಚೆ ಆಡಲಿದೆ. ಇದ್ರಿಂದ ತವರಿನ ಅಭಿಮಾನಿಗಳ ಅದ್ಭುತ ಬೆಂಬಲವನ್ನೂ RCB ಆಟಗಾರರು ಮಿಸ್ ಮಾಡಿಕೊಳ್ಳಲಿದ್ದಾರೆ. ಹೋಮ್‌ ಗ್ರೌಂಡ್ ಅಡ್ವಾಂಟೇಜ್ ಸಿಗಲ್ಲ. ಇದಲ್ಲದೇ ತಮಗಿಂಗ ಸಖತ್ ಸ್ಟ್ರಾಂಗ್ ಆಗಿರೋ ತಂಡಗಳ ವಿರುದ್ಧ RCB ಕಾದಾಟ ನಡೆಸಬೇಕಿದೆ. 

ತವರಿನಲ್ಲೇ ಗೆಲ್ಲದವರು ಹೊರಗಡೆ ಗೆಲ್ತಾರಾ..?

ಹೋಮ್‌ಗ್ರೌಂಡ್ನಲ್ಲೇ ಎದುರಾಳಿಗಳಿಗೆ ಶರಣಾಗಿರೋ RCBಗೆ, ಈಗ ಅವ್ರ ನೆಲದಲ್ಲೇ ಅವರನ್ನ ಸೋಲಿಸಬೇಕಿದೆ. RCBಯ ಮುಂದಿನ ಪಂದ್ಯ ಏಪ್ರಿಲ್ 6ರಂದು ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ನಿಗದಿಯಾಗಿದೆ. ಜೈಪುರ್ ಅಂಗಳದಲ್ಲಿ ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ ಸತತ ಗೆಲುವುಗಳಿಂದ ಮುನ್ನಗ್ಗುತ್ತಿರೋ ರಾಯಲ್ಸ್ ಪಡೆಯನ್ನ, ತವರಿನಲ್ಲಿ ಮಣಿಸೋದು ದೊಡ್ಡ ಸವಾಲಾಗಲಿದೆ. ಅದರಲ್ಲೂ RCBಗೆ ಹೋಲಿಸಿದ್ರೆ ಸಂಜು ಸ್ಯಾಮ್ಸನ್ ಸೈನ್ಯ ಎಲ್ಲಾ ಡಿಪಾರ್ಟ್ಮೆಂಟ್ಗಳಲ್ಲೂ ಸ್ಟ್ರಾಂಗ್ ಆಗಿದೆ. 

ರಿಷಭ್ ಪಂತ್ ಹೃದಯ ಕದ್ದ ಇಶಾ ನೇಗಿ..! ಇಲ್ಲಿದೆ ಕ್ಯೂಟ್ ಜೋಡಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

RCB ತನ್ನ 6ನೇ ಪಂದ್ಯವನ್ನ ಏಪ್ರಿಲ್ 11ರಂದು ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಬೇಕಿದೆ. ಸದ್ಯ RCB ಮತ್ತು ಮುಂಬೈ ಎರಡೂ ತಂಡಗಳ ಪರಿಸ್ಥಿತಿ ಒಂದೇ ಆಗಿದೆ. ಆದ್ರೆ, ಮುಂಬೈ ಅಂಗಳದಲ್ಲಿ ಅಂಬಾನಿ ಬ್ರಿಗೇಡ್ ಯಾವತ್ತಿದ್ರೂ ಸಖತ್ ಡೇಂಜರ್. ಹೀಗಾಗಿ ಈ ಪಂದ್ಯವೂ RCB ಪಾಲಿಗೆ ಸುಲಭವಲ್ಲ. 

ಏಪ್ರಿಲ್ 15 ರಂದು ಬೆಂಗಳೂರಿನಲ್ಲಿ ಸನ್‌ರೈಸರ್ಸ್ ವಿರುದ್ಧ RCB ಕಾದಾಟ ನಡೆಸಬೇಕಿದೆ. ಈ ಬಾರಿ ಭಯಾನಕ ಬ್ಯಾಟಿಂಗ್ ಲೈನ್ ಅಪ್ ಸನ್‌ರೈಸರ್ಸ್ ಬಳಿ ಇದೆ. ಒಬ್ಬರು ತಪ್ಪಿದ್ರೆ ಒಬ್ಬರು ಅಬ್ಬರಿಸುತ್ತಿದ್ದಾರೆ. ಅದರಲ್ಲೂ ಹೆನ್ರಿಚ್ ಕ್ಲಾಸೆನ್ ಸಿಡಿದು ನಿಂತ್ರೆ ಕಟ್ಟಿಹಾಕೋದು ಕಷ್ಟ. ಬೌಲಿಂಗ್ನಲ್ಲೂ SRH ಬಲಿಷ್ಠವಾಗಿದೆ. 

ಏಪ್ರಿಲ್ 21ರಂದು KKR ವಿರುದ್ಧ RCB ಸೆಣಸಾಡಬೇಕಿದೆ. ಈಗಾಗ್ಲೇ RCB ವಿರುದ್ಧ ಗೆಲುವು ಸಾಧಿಸಿರೋ ಕೆಕೆಆರ್, ತವರಿನಲ್ಲೂ ಗೆಲುವಿನ ಬಾವುಟ ಹಾರಿಸೋ ವಿಶ್ವಾಸದಲ್ಲಿದೆ. ಕೋಲ್ಕತಾದಲ್ಲಿ RCB ಹೇಳಿಕೊಳ್ಳುವಂತ ದಾಖಲೆ ಹೊಂದಿಲ್ಲ. ಇನ್ನು ಏಪ್ರಿಲ್ 25 ರಂದು ಹೈದ್ರಾಬಾದ್ನಲ್ಲಿ ಮತ್ತೆ ಸನ್‌ರೈಸರ್ಸ್ ಸವಾಲನ್ನು ಎದುರಿಸಬೇಕಿದೆ. ಒಟ್ಟಿನಲ್ಲಿ ಮುಂದಿನ ಪಂದ್ಯಗಳು ಟೂರ್ನಿಯಲ್ಲಿ RCBಯ ಪ್ಲೇ ಆಫ್ ಭವಿಷ್ಯ ನಿರ್ಧರಿಸಲಿವೆ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್