Asianet Suvarna News Asianet Suvarna News

IPL 2024 ಗುಜರಾತ್ ಟೈಟಾನ್ಸ್ ಎದುರು ಗೆಲ್ಲುತ್ತಾ ಪಂಜಾಬ್‌ ಕಿಂಗ್ಸ್..?

ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಗುಜರಾತ್‌ ತಂಡ ರಶೀದ್‌ ಖಾನ್‌ ಮೇಲೆ ಅತಿಯಾಗಿ ಅವಲಂಬಿತಗೊಂಡಿದ್ದರೆ, ಶಶಾಂಕ್‌ ಸಿಂಗ್‌ ಹಾಗೂ ಅಶುತೋಷ್‌ ಶರ್ಮಾರನ್ನು ಪಂಜಾಬ್‌ ನೆಚ್ಚಿಕೊಂಡಿದೆ.

IPL 2024 Punjab Kings take on Gujarat Titans Challenge kvn
Author
First Published Apr 21, 2024, 11:15 AM IST

ಮುಲ್ಲಾನ್‌ಪುರ್‌(ಏ21): ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್‌ ಕಿಂಗ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ಭಾನುವಾರ ಪರಸ್ಪರ ಎದುರಾಗಲಿದ್ದು, ಗೆಲುವಿನ ಹಳಿಗೆ ಮರಳಲು ಹಪಹಪಿಸುತ್ತಿವೆ. ಪಂಜಾಬ್‌ ಸತತ 3 ಸೋಲು ಅನುಭವಿಸಿ, ಒಟ್ಟಾರೆ ಕೇವಲ 2 ಜಯಗಳೊಂದಿಗೆ 9ನೇ ಸ್ಥಾನದಲ್ಲಿದ್ದರೆ, ಕಳೆದ 4 ಪಂದ್ಯಗಳಲ್ಲಿ 3ರಲ್ಲಿ ಸೋತಿರುವ ಗುಜರಾತ್‌ 8ನೇ ಸ್ಥಾನದಲ್ಲಿ ಬಾಕಿಯಾಗಿದೆ. 

ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಗುಜರಾತ್‌ ತಂಡ ರಶೀದ್‌ ಖಾನ್‌ ಮೇಲೆ ಅತಿಯಾಗಿ ಅವಲಂಬಿತಗೊಂಡಿದ್ದರೆ, ಶಶಾಂಕ್‌ ಸಿಂಗ್‌ ಹಾಗೂ ಅಶುತೋಷ್‌ ಶರ್ಮಾರನ್ನು ಪಂಜಾಬ್‌ ನೆಚ್ಚಿಕೊಂಡಿದೆ.

ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಒಟ್ಟು 4 ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ತಲಾ ಎರಡು ಬಾರಿ ಗೆಲುವಿನ ನಗೆ ಬೀರಿದೆ. ಇಂದಿನ ಪಂದ್ಯದಲ್ಲಿ ಯಾವ ತಂಡದ ಕೈ ಮೇಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.

ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ ನೋಡಿ:

ಪಂಜಾಬ್ ಕಿಂಗ್ಸ್:

ಪ್ರಭಸಿಮ್ರನ್ ಸಿಂಗ್, ರಿಲೇ ರೂಸ್ಸೌ, ಸ್ಯಾಮ್ ಕರ್ರನ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಆಶುತೋಷ್ ಶರ್ಮಾ, ಹಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ಆರ್ಶದೀಪ್ ಸಿಂಗ್.

ಗುಜರಾತ್ ಟೈಟಾನ್ಸ್:

ಶುಭ್‌ಮನ್ ಗಿಲ್‌(ನಾಯಕ), ವೃದ್ದಿಮಾನ್ ಸಾಹ(ವಿಕೆಟ್ ಕೀಪರ್), ಸಾಯಿ ಸುದರ್ಶನ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹಮದ್, ಸ್ಪೆನ್ಸರ್ ಜಾನ್ಸನ್, ಸಂದೀಪ್ ವಾರಿಯರ್.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

Follow Us:
Download App:
  • android
  • ios