2023ರಲ್ಲಿ ಪ್ಲೇ ಆಫ್‌ಗೇರಿದ ಎಲ್ಲಾ ತಂಡ ಈ ಬಾರಿ ಔಟ್, ಈ ಬಾರಿ 4 ರ ಪೈಕಿ ಆರ್‌ಸಿಬಿಗೆ ಹೆಚ್ಚು ಚಾನ್ಸ್!
ಐಪಿಎಲ್ ಲೀಗ್ ಹಂತದ ಪಂದ್ಯಗಳ ಮುಕ್ತಾಯ ಗೊಂಡಿದೆ. ಇನ್ನೇನಿದ್ದರು ಪ್ಲೇಆಫ್ ಹೋರಾಟ. 2023ರಲ್ಲಿ ಪ್ಲೇ ಆಫ್ ಪ್ರವೇಶಿಸಿದ ಎಲ್ಲಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಬಾರಿಯ 4 ತಂಡಗಳ ಪೈಕಿ ಆರ್‌ಸಿಬಿಗೆ ಹೆಚ್ಚು ಚಾನ್ಸ್.
ಬೆಂಗಳೂರು(ಮೇ.20) ಐಪಿಎಲ್ 2024 ಟೂರ್ನಿ ಅಂತಿಮ ಘಟ್ಟ ತಲುಪಿದೆ. ಆರ್‌ಸಿಬಿ ಅಂತಿಮ ಕ್ಷಣದಲ್ಲಿ ಪ್ಲೇ ಆಫ್ ಪ್ರವೇಶಿಸಿ ಇತಿಹಾಸ ರಚಿಸಿದೆ. ಇದೀಗ ಪ್ಲೇ ಆಫ್ ಸುತ್ತಿನ ಪಂದ್ಯದಳು ಮೇ.21ರಿಂದ ಆರಂಭಗೊಳ್ಳುತ್ತಿದೆ. ಕೆಕೆಆರ್, ಎಸ್‌ಆರ್‌ಹೆಚ್, ಆರ್‌ಆರ್ ಹಾಗೂ ಆರ್‌ಸಿಬಿ ಅಖಾಡದಲ್ಲಿದೆ. ಈ ನಾಲ್ಕು ತಂಡಗಳ ಪೈಕಿ ಮೂರು ತಂಡಗಳು ಈಗಾಗಲೇ ಐಪಿಎಲ್ ಟ್ರೋಫಿ ಗೆದ್ದಿದೆ. ಆರ್‌ಸಿಬಿಗೆ ಟ್ರೋಫಿ ಭಾಗ್ಯ ಸಿಕ್ಕಿಲ್ಲ. ಆದರೆ 2024ರಲ್ಲಿ ಟ್ರೋಫಿ ಗೆಲ್ಲಲು ಅತೀ ಹೆಚ್ಚಿನ ಚಾನ್ಸ್ ಆರ್‌ಸಿಬಿ ಪಾಲಿಗಿದೆ.
ಲೀಗ್ ಹಂತದ ಪಂದ್ಯ, ಪ್ರದರ್ಶನ, ಅಂಕದ ಲೆಕ್ಕಾಚಾರದಲ್ಲಿ ಆರ್‌ಸಿಬಿ ಪರ್ಸೆಂಟೇಜ್ ಕಡಿಮೆ ಇರಬಹುದು. ಆದರೆ ಅಂತಿಮ 7 ಪಂದ್ಯದಲ್ಲಿ ನೀಡಿದ ಪ್ರದರ್ಶನ ನೋಡಿದರೆ ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. 2023ರಲ್ಲಿ ಪ್ಲೇ ಆಫ್ ಪ್ರವೇಶಿಸಿದ 4 ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಈ ಬಾರಿ ಹೊಸ ನಾಲ್ಕು ತಂಡಗಳು ಪ್ಲೇಫ್ ಸುತ್ತಿಗೇರಿದೆ. ಮೇ.21ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಇನ್ನು ಮೇ22ರಂದು ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ಹೋರಾಟ ನಡೆಸಲಿದೆ.
ಕೊಹ್ಲಿ ಮೊದಲ ಕಾರು ಯಾವುದು? SUV ಖರೀದಿಸಿ ಪೆಟ್ರೋಲ್ ಪಂಪ್‌ನಲ್ಲಿ ಎಡವಟ್ಟು ಮಾಡಿದ್ದ ಕಿಂಗ್!
2023ರ ಪ್ಲೇ ಆಫ್ ತಂಡ: ಗುಜರಾತ್ ಟೈಟಾನ್, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್
2024ರ ಪ್ಲೇ ಆಫ್ ತಂಡ: ಕೋಲ್ಕತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಐಪಿಎಲ್ ಇತಿಹಾಸದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಗಳಲ್ಲಿದ್ದು, ಬಳಿಕ ಒಂದೇ ಸಮನೆ ಫೀನಿಕ್ಸ್‌ನಂತೆ ಎದ್ದು ಬಂದು ಪ್ಲೇ ಆಫ್ ಪ್ರವೇಶಿಸಿ ಟ್ರೋಫಿ ಗೆದ್ದ ತಂಡಗಳೇ ಹೆಚ್ಚು. ಮುಂಬೈ ಇಂಡಿಯನ್ಸ್ , ಚೆನ್ನೈ ಸೂಪರ್ ಕಿಂಗ್ಸ್ ಇದೇ ರೀತಿ ಟ್ರೋಫಿ ಗೆದ್ದುಕೊಂಡಿದೆ. ಈ ಬಾರಿ ಈ ಅವಕಾಶ ಆರ್‌ಸಿಬಿ ತಂಡಕ್ಕಿದೆ.
ಕಳೆದ 5 ವರ್ಷದಲ್ಲಿ ಆರ್‌ಸಿಬಿ 4 ಬಾರಿ ಪ್ಲೇ ಆಫ್ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಮೂಲಕ ಆರ್‌ಸಿಬಿ ನಿರಂತವಾಗಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.
2020: ಆರ್‌ಸಿಪಿ ಪ್ಲೇ ಆಪ್ ಪ್ರವೇಶ
2021: ಆರ್‌ಸಿಪಿ ಪ್ಲೇ ಆಪ್ ಪ್ರವೇಶ
2022: ಆರ್‌ಸಿಪಿ ಪ್ಲೇ ಆಪ್ ಪ್ರವೇಶ
2024: ಆರ್‌ಸಿಪಿ ಪ್ಲೇ ಆಪ್ ಪ್ರವೇಶ
ಮತ್ತೆ ಮತ್ತೆ ನೋಡಬೇಕೆನಿಸುವ ಆರ್‌ಸಿಬಿ ಗೆಲ್ಲಿಸಿದ ಆ ಒಂದು ಓವರ್..! ಇಲ್ಲಿದೆ ವಿಡಿಯೋ
ಮತ್ತೊಂದು ವಿಶೇಷ ಅಂದರೆ ಈ ಬಾರಿ ಆರ್‌ಸಿಬಿ ಗೆದ್ದರೆ ತಂಡಕ್ಕೆ ಮೊದಲ ಟ್ರೋಫಿ, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಗೆದ್ದರೆ ತಂಡಕ್ಕೆ 2ನೇ ಟ್ರೋಫಿ, ಕೆಕೆಆರ್ ಗೆದ್ದರೆ ತಂಡಕ್ಕೆ ಮೂರನೇ ಟ್ರೋಫಿ.