Asianet Suvarna News Asianet Suvarna News

IPL 2024 ಕೆಕೆಆರ್ ಶಿಸ್ತುಬದ್ದ ದಾಳಿ: ಸಾಧಾರಣ ಗುರಿ ನೀಡಿದ ಲಖನೌ ಸೂಪರ್ ಜೈಂಟ್ಸ್

ಇಲ್ಲಿನ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಲಖನೌ ಸೂಪರ್ ಜೈಂಟ್ಸ್ ಆರಂಭದಲ್ಲೇ ಕ್ವಿಂಟನ್ ಡಿ ಕಾಕ್ ವಿಕೆಟ್ ಕಳೆದುಕೊಂಡಿತು. ಡಿ ಕಾಕ್ 10 ರನ್ ಗಳಿಸಿ ವೈಭವ್ ಅರೋರಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.

IPL 2024 Nicholas Pooran Quick Fire Propels Lucknow Super Giants To 161 for 7 Against Kolkata Knight Riders kvn
Author
First Published Apr 14, 2024, 5:25 PM IST

ಕೋಲ್ಕತಾ(ಏ.14): ಕೆಕೆಆರ್ ಬೌಲರ್‌ಗಳ ಶಿಸ್ತುಬದ್ದ ದಾಳಿಯ ಹೊರತಾಗಿಯೂ ನಾಯಕ  ಕೆ ಎಲ್ ರಾಹುಲ್ ಹಾಗೂ ನಿಕೋಲಸ್ ಪೂರನ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ಪಡೆಗೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಇಲ್ಲಿನ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಲಖನೌ ಸೂಪರ್ ಜೈಂಟ್ಸ್ ಆರಂಭದಲ್ಲೇ ಕ್ವಿಂಟನ್ ಡಿ ಕಾಕ್ ವಿಕೆಟ್ ಕಳೆದುಕೊಂಡಿತು. ಡಿ ಕಾಕ್ 10 ರನ್ ಗಳಿಸಿ ವೈಭವ್ ಅರೋರಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ಇದರ ಬೆನ್ನಲ್ಲೇ ದೇವದತ್ ಪಡಿಕ್ಕಲ್ ಬದಲು ಆಡುವ ಹನ್ನೊಂದರೊಳಗೆ ಸ್ಥಾನಗಿಟ್ಟಿಸಿಕೊಂಡ ದೀಪಕ್ ಹೂಡಾ ಕೇವಲ 8 ರನ್‌ ಗಳಿಸಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.

ಯಂಗ್‌ಗನ್ ಯಶಸ್ವಿ ಜೈಸ್ವಾಲ್‌ಗೆ ಏನಾಯ್ತು..? ಖದರ್ ಕಳೆದುಕೊಂಡ್ರಾ ಲೆಫ್ಟಿ..?

ಲಖನೌ ತಂಡವು 39 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಇಬ್ಬರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಇದಾದ ಬಳಿಕ ಮೂರನೇ ವಿಕೆಟ್‌ಗೆ ನಾಯಕ ಕೆ ಎಲ್ ರಾಹುಲ್ ಹಾಗೂ ಆಯುಷ್ ಬದೋನಿ ತಂಡಕ್ಕೆ ಕೊಂಚ ಆಸರೆಯಾದರು. ನಾಯಕ ಕೆ ಎಲ್ ರಾಹುಲ್ 27 ಎಸೆತಗಳನ್ನು ಎದುರಿಸಿ 39 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಆಯುಷ್ ಬದೋನಿ 29 ರನ್ ಗಳಿಸಿ ನರೈನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಕೇವಲ 10 ರನ್ ಗಳಿಸಿ ವರುಣ್ ಚಕ್ರವರ್ತಿಗೆ ವಿಕೆಟ್ ಒಪ್ಪಿಸಿದರು.

ಗುಡುಗಿದ ಪೂರನ್: ಕೋಲ್ಕತಾ ನೈಟ್ ರೈಡರ್ಸ್‌ ಬೌಲರ್‌ಗಳ ಕರಾರುವಕ್ಕಾದ ದಾಳಿಗೆ ಲಖನೌ ಸ್ಪೋಟಕ ಬ್ಯಾಟರ್‌ಗಳು ರನ್‌ಗಳಿಸಲು ಪರದಾಡಿದರು. ಪರಿಣಾಮ 14.4 ಎಸೆತಗಳವರೆಗೂ ಲಖನೌ ತಂಡವು ಕೇವಲ 111 ರನ್ ಗಳಿಸಿತ್ತು. ಆದರೆ ಕೊನೆಯಲ್ಲಿ ಮತ್ತೊಮ್ಮೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ನಿಕೋಲಸ್ ಪೂರನ್, ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ನಿಕೋಲಸ್ ಪೂರನ್ 32 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 45 ರನ್ ಬಾರಿಸಿ ಸ್ಟಾರ್ಕ್‌ಗೆ ಎರಡನೇ ಬಲಿಯಾದರು.

IPL 2024: ಲಖನೌ ಎದುರು ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ, ಉಭಯ ತಂಡದಲ್ಲಿ ಮೇಜರ್ ಚೇಂಜ್

ಇನ್ನು ಕೆಕೆಆರ್ ಪರ ಐಪಿಎಲ್‌ನ ದುಬಾರಿ ವೇಗಿ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್, ಸುನಿಲ್ ನರೈನ್ ಹಾಗೂ ವೈಭವ್ ಅರೋರ ತಲಾ ಒಂದೊಂದು ವಿಕೆಟ್ ಕಬಳಿಸಿದರು
 

Follow Us:
Download App:
  • android
  • ios