ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದ್ರಾಬಾದ್‌ ಫೈಟ್: ಉಭಯ ತಂಡಗಳಿಗೆ ಮೊದಲ ಜಯದ ಗುರಿ

ಹಾರ್ದಿಕ್‌ ಪಾಂಡ್ಯ ನಾಯಕತ್ವದೊಂದಿಗೆ ಕಣಕ್ಕಿಳಿದಿರುವ 5 ಬಾರಿ ಚಾಂಪಿಯನ್‌ ಮುಂಬೈ ಆರಂಭಿಕ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಪರಾಭವಗೊಂಡಿತ್ತು. ಅತ್ತ ಪ್ಯಾಟ್‌ ಕಮಿನ್ಸ್‌ ಸಾರಥ್ಯದ ಸನ್‌ರೈಸರ್ಸ್‌ ತಂಡ ಕೋಲ್ಕತಾ ವಿರುದ್ಧ ಸೋಲುಂಡಿತ್ತು. ಇದೀಗ ಉಭಯ ತಂಡಗಳು ಮೊದಲ ಗೆಲುವಿನ ನಿರೀಕ್ಷೆಯಲ್ಲಿವೆ

IPL 2024 Mumbai Indians and Sunrisers Hyderabad eyes on first win in the tournament kvn

ಹೈದರಾಬಾದ್‌(ಮಾ.27): 17ನೇ ಆವೃತ್ತಿ ಐಪಿಎಲ್‌ನಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿರುವ ಮಾಜಿ ಚಾಂಪಿಯನ್‌ಗಳಾದ ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಬಾದ್‌ ತಂಡಗಳು ಬುಧವಾರ ಪರಸ್ಪರ ಮುಖಾಮುಖಿಯಾಗಲಿವೆ.

ಹಾರ್ದಿಕ್‌ ಪಾಂಡ್ಯ ನಾಯಕತ್ವದೊಂದಿಗೆ ಕಣಕ್ಕಿಳಿದಿರುವ 5 ಬಾರಿ ಚಾಂಪಿಯನ್‌ ಮುಂಬೈ ಆರಂಭಿಕ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಪರಾಭವಗೊಂಡಿತ್ತು. ಅತ್ತ ಪ್ಯಾಟ್‌ ಕಮಿನ್ಸ್‌ ಸಾರಥ್ಯದ ಸನ್‌ರೈಸರ್ಸ್‌ ತಂಡ ಕೋಲ್ಕತಾ ವಿರುದ್ಧ ಸೋಲುಂಡಿತ್ತು. ಇದೀಗ ಉಭಯ ತಂಡಗಳು ಮೊದಲ ಗೆಲುವಿನ ನಿರೀಕ್ಷೆಯಲ್ಲಿವೆ

IPL 2024 ಚೆನ್ನೈ ರನ್‌ ಮಳೆಯಲ್ಲಿ ಮುಳುಗಿದ ಗುಜರಾತ್ ಟೈಟಾನ್ಸ್‌..!

ಗುಜರಾತ್‌ ಟೈಟಾನ್ಸ್ ವಿರುದ್ಧ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ್ದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿತ್ತು. ಮಾಜಿ ನಾಯಕ ರೋಹಿತ್‌ ಶರ್ಮಾ, ಇಶಾನ್‌ ಕಿಶನ್‌, ತಿಲಕ್ ವರ್ಮಾ‌ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದ್ದು, ಹಾರ್ದಿಕ್ ಪಾಂಡ್ಯ‌ ನಾಯಕತ್ವದ ಒತ್ತಡ ನಿಭಾಯಿಸಿ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ. ಸ್ಪಿನ್ನರ್‌ಗಳಾದ ಶಮ್ಸ್‌ ಮುಲಾನಿ, ಪಿಯೂಶ್‌ ಚಾವ್ಲಾ ಪರಿಣಾಮಕಾರಿಯಾಗದ ಹೊರತು ತಂಡಕ್ಕೆ ಗೆಲುವು ಕಷ್ಟಸಾಧ್ಯ.

ನಿಕಿತಾ ಕೈಕೊಟ್ಟಾಗ ಸಿಕ್ಕಿದ್ದೇ ದೀಪಿಕಾ: ಇಲ್ಲಿದೆ ದಿನೇಶ್ ಕಾರ್ತಿಕ್-ದೀಪಿಕಾ ಪಲ್ಲಿಕಲ್ ಇಂಟ್ರೆಸ್ಟಿಂಗ್ ಲವ್‌ ಸ್ಟೋರಿ...!

ಅತ್ತ ಸನ್‌ರೈಸರ್ಸ್‌ ಹೈದರಾಬಾದ್ ತಂಡ ರನ್‌ ಮಳೆ ಹರಿದಿದ್ದ ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧ ಪಂದ್ಯದಲ್ಲಿ ಅಲ್ಪದರಲ್ಲೇ ಸೋಲು ಕಂಡಿತ್ತು. ಕ್ಲಾಸೆನ್‌ ಅಬ್ಬರದ ಪ್ರದರ್ಶನ ಮುಂದುವರಿಸುವ ಕಾತರದಲ್ಲಿದ್ದು, ಮಯಾಂಕ್‌ ಅಗರ್‌ವಾಲ್, ಅಭಿಷೇಕ್‌ ಶರ್ಮಾ, ಏಯ್ಡನ್ ಮಾರ್ಕ್‌ರಮ್‌ ದೊಡ್ಡ ಇನ್ನಿಂಗ್ಸ್‌ ಕಟ್ಟಬೇಕಿದೆ. ₹20.5 ಕೋಟಿಗೆ ಹರಾಜಾಗಿದ್ದ ನಾಯಕ ಕಮಿನ್ಸ್ ಫ್ರಾಂಚೈಸಿ ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಳ್ಳುವ ರೀತಿ ಪ್ರದರ್ಶನ ನೀಡಬೇಕಿದೆ.

ಒಟ್ಟು ಮುಖಾಮುಖಿ: 21

ಮುಂಬೈ: 12

ಹೈದರಾಬಾದ್‌: 09

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ ಇಂಡಿಯನ್ಸ್: ರೋಹಿತ್‌ ಶರ್ಮಾ, ಇಶಾನ್‌ ಕಿಶನ್, ತಿಲಕ್‌ ವರ್ಮಾ, ನಮನ್‌ ಧೀರ್‌, ಹಾರ್ದಿಕ್‌ ಪಾಂಡ್ಯ(ನಾಯಕ), ಟಿಮ್‌ ಡೇವಿಡ್‌, ಶಮ್ಸ್‌ ಮುಲಾನಿ, ಪೀಯೂಸ್ ಚಾವ್ಲಾ, ಗೆರಾಲ್ಡ್ ಕೋಟ್ಜೀ, ಜಸ್ಪ್ರೀತ್ ಬುಮ್ರಾ, ಮಾರ್ಕ್ ವುಡ್‌.

ಸನ್‌ರೈಸರ್ಸ್‌ ಹೈದರಾಬಾದ್‌: ಮಯಾಂಕ್‌ ಅಗರ್‌ವಾಲ್, ಅಭಿಷೇಕ್‌ ಶರ್ಮಾ, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್‌ರಮ್‌, ಹೆನ್ರಿಚ್ ಕ್ಲಾಸೆನ್‌, ಅಬ್ದುಲ್ ಸಮದ್‌, ಶಾಬಾಜ್‌ ಅಹಮದ್, ಮಾರ್ಕೋ ಯಾನ್ಸನ್‌, ಪ್ಯಾಟ್ ಕಮಿನ್ಸ್‌(ನಾಯಕ), ಭುವನೇಶ್ವರ್‌ ಕುಮಾರ್, ಮಯಾಂಕ್ ಮಾರ್ಕಂಡೆ

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.

Latest Videos
Follow Us:
Download App:
  • android
  • ios