ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಮೈದಾನ ಆತಿಥ್ಯ ವಹಿಸಿತ್ತು. ಈ ಪಂದ್ಯದಲ್ಲಿ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್, ಸಿಎಸ್‌ಕೆ ಪಡೆಗೆ ತಿರುಗೇಟು ನೀಡುವ ಯತ್ನ ನಡೆಸಿತು. ಸಿಎಸ್‌ಕೆ ತಂಡದ ಡೇರಲ್ ಮಿಚೆಲ್ ಆಫ್‌ಸ್ಟಂಪ್‌ನಾಚೆ ಎಸೆದ ಚೆಂಡನ್ನು ವಿಜಯ್ ಶಂಕರ್ ಬೌಂಡರಿ ಬಾರಿಸುವ ಯತ್ನ ನಡೆಸಿದರು. ಆದರೆ ಚೆಂಡು ವಿಜಯ್ ಶಂಕರ್ ಬ್ಯಾಟ್ ಅಂಚನ್ನು ಸವರಿದ ಚೆಂಡು ಧೋನಿ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಬೇಕಾಗಿ ಬಂತು.
ಚೆನ್ನೈ(ಮಾ.27): ಕ್ಯಾಪ್ಟನ್ ಕೂಲ್ ಖ್ಯಾತಿಯ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಈಗ ವಯಸ್ಸು 42 ವರ್ಷ. ಆದರೆ ಧೋನಿ ಪಾಲಿಗೆ ವಯಸ್ಸು ಕೇವಲ ನಂಬರ್ ಅಷ್ಟೇ. ಯಾಕೆಂದರೆ ಧೋನಿ ಈಗಲೂ ಚಿರ ಯುವಕರೂ ನಾಚುವಂತ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತಿದೆ, ಗುಜರಾತ್ ಟೈಟಾನ್ಸ್ ಎದುರು ವಿಕೆಟ್ ಕೀಪರ್ ಧೋನಿ ಹಿಡಿದ ಅಧ್ಬುತ ಕ್ಯಾಚ್.
ಹೌದು, ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಮೈದಾನ ಆತಿಥ್ಯ ವಹಿಸಿತ್ತು. ಈ ಪಂದ್ಯದಲ್ಲಿ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್, ಸಿಎಸ್‌ಕೆ ಪಡೆಗೆ ತಿರುಗೇಟು ನೀಡುವ ಯತ್ನ ನಡೆಸಿತು. ಸಿಎಸ್‌ಕೆ ತಂಡದ ಡೇರಲ್ ಮಿಚೆಲ್ ಆಫ್‌ಸ್ಟಂಪ್‌ನಾಚೆ ಎಸೆದ ಚೆಂಡನ್ನು ವಿಜಯ್ ಶಂಕರ್ ಬೌಂಡರಿ ಬಾರಿಸುವ ಯತ್ನ ನಡೆಸಿದರು. ಆದರೆ ಚೆಂಡು ವಿಜಯ್ ಶಂಕರ್ ಬ್ಯಾಟ್ ಅಂಚನ್ನು ಸವರಿದ ಚೆಂಡು ಧೋನಿ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಸೇರಬೇಕಾಗಿ ಬಂತು.
ಕೇವಲ 0.6 ಸೆಕೆಂಡ್‌ಗಳಲ್ಲಿ ಧೋನಿ ಹಿಡಿದ ಈ ಅದ್ಭುತ ಕ್ಯಾಚ್, ಮಾಹಿ ಅಭಿಮಾನಿಗಳ ಮನ ಗೆಲ್ಲುವಂತೆ ಮಾಡಿದೆ. ಐಪಿಎಲ್ 'ಎಕ್ಸ್' ಹ್ಯಾಂಡಲ್, ಧೋನಿ ಹಿಡಿದ ಈ ಅದ್ಭುತ ಕ್ಯಾಚ್ ಅನ್ನು ವಿಂಟೇಜ್ ಧೋನಿ ಎಂದು ಬಣ್ಣಿಸಿದೆ.
ಹೀಗಿದೆ ನೋಡಿ ಆ ವಿಡಿಯೋ:
ಇನ್ನು ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಚೆನ್ನೈ ಸಿಕ್ಸರ್, ಬೌಂಡರಿಗಳ ಸುರಿಮಳೆ ಸಿಡಿಸಿ ಒಟ್ಟುಗೂಡಿಸಿದ್ದು 206 ರನ್. ಕಳೆದುಕೊಂಡ ವಿಕೆಟ್‌ಗಳ ಸಂಖ್ಯೆ 6. ಯಶಸ್ವಿಯಾಗಿ ಚೇಸ್ ಮಾಡುತ್ತೇವೆಂಬ ನಿರೀಕ್ಷೆಯೊಂದಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಗುಜರಾತ್‌ಗೆ ಚೆನ್ನೈನ ಬೃಹತ್ ಮೊತ್ತ ಕೈ ಗೆಟುಕಲಿಲ್ಲ. ತವರಿನ ತಂಡದ ಬೌಲರ್‌ಗಳ ಸಂಘಟಿತ ದಾಳಿ ಮುಂದೆ ನಿರುತ್ತರವಾದ ಗುಜರಾತ್ ಟೈಟಾನ್ಸ್ 8 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿ ಸೋಲೊಪ್ಪಿಕೊಂಡಿತು.
