Asianet Suvarna News Asianet Suvarna News

IPL 2024 ಈ ಸಲ ಕಪ್ ಗೆಲ್ಲೋದು ಕೆಕೆಆರ್ ಅಂತೆ..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಈ ಆವೃತ್ತಿಯಲ್ಲಿ ಕೆಕೆಆರ್ ಆಡಿದ ಮೂರಕ್ಕೆ ಮೂರೂ ಪಂದ್ಯಗಳನ್ನು ಗೆದ್ದು ಬೀಗಿದೆ. ಈ ಮೂರು ಪಂದ್ಯಗಳಲ್ಲೂ ತಂಡ ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದೆ. ಇದು ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ವಾಸ್ತವವಾಗಿ ಈ ಕಾಕತಾಳೀಯ ತಂಡದ ಮೆಂಟರ್ ಗಂಭೀರ್ ಹಾಗೂ ನಾಯಕ ಅಯ್ಯರ್ ಅವರಿಗೆ ಸಂಬಂಧಿಸಿದ್ದಾಗಿದೆ.

IPL 2024 Kolkata Knight Riders will win trophy here is why all you need to know kvn
Author
First Published Apr 6, 2024, 2:38 PM IST

ಬೆಂಗಳೂರು(ಏ.06) ಯಾರು ಏನೇ ಹೇಳಲಿ ಈ ಸಲ ಕೋಲ್ಕತಾ ನೈಟ್ ರೈಡರ್ಸ್ ಐಪಿಎಲ್ ಟ್ರೋಫಿ ಗೆಲ್ಲಲಿದೆ. ಇದನ್ನ ನಾವ್ ಹೇಳ್ತಿಲ್ಲ. KKR ಫ್ಯಾನ್ಸ್ ಹೇಳ್ತಿದ್ದಾರೆ. ಗಂಭೀರ್ ನಾಯಕಯತ್ವದಲ್ಲಿ ಚಾಂಪಿಯನ್ ಆಗಿದ್ದ ಕೆಕೆಆರ್, ಈಗ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಚಾಂಪಿಯನ್ ಆಗಲಿದೆ. ಸತತ ಮೂರು ಪಂದ್ಯ ಗೆದ್ದಿರುವುದಕ್ಕೆ ಇದನ್ನ ಹೇಳ್ತಿಲ್ಲ. ಮತ್ಯಾಕೆ ಹೇಳ್ತಿದ್ದಾರೆ ಅನ್ನೋದಕ್ಕೆ ಈ ಸ್ಟೋರಿ ನೋಡಿ ಗೊತ್ತಾಗುತ್ತೆ. 

ಕೆಕೆಆರ್‌ಗೆ ಐಪಿಎಲ್ ಕಪ್, ಹೀಗೊಂದು ಕಾಕತಾಳೀಯ..!

ಕೆಕೆಆರ್ ಇಡೀ ತಂಡವಾಗಿ ಪ್ರದರ್ಶನವನ್ನು ನೀಡುತ್ತಿರುವುದನ್ನು ನೋಡಿದರೆ ಈ ಸಲ ಐಪಿಎಲ್ ಕಪ್ ಶಾರುಕ್ ಖಾನ್ ತಂಡಕ್ಕೆ ಎಂದರೆ ತಪ್ಪಾಗಲಾರದು. ಈ ನಡುವೆ ಹೀಗೊಂದು ಕಾಕತಾಳಿಯ ಹುಟ್ಟಿಕೊಂಡಿದ್ದು, ಈ ಬಾರಿ KKR ಚಾಂಪಿಯನ್ ಆಗುವುದು ಖಚಿತ ಎಂದು ಹೇಳಲಾಗ್ತಿದೆ. ಗೌತಮ್ ಗಂಭೀರ್ KKR  ತಂಡದ ಮೆಂಟರ್ ಆಗಿದ್ದೇ ಬಂತು, ತಂಡದ ಪ್ರದರ್ಶನವೇ ಬದಲಾಗಿ ಹೋಗಿದೆ. ಕಳೆದ ಆವೃತ್ತಿಯಲ್ಲಿ ಸಪ್ಪೆಯಾಗಿದ್ದ KKR, ಈ ಬಾರಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತದೆ. ಗಂಭೀರ್ ಜೊತೆಗೆ ಶ್ರೇಯಸ್ ಅಯ್ಯರ್ ನಾಯಕತ್ವವೂ ಕೆಲಸ ಮಾಡುತ್ತಿದೆ.

ಸತತ ಸೋಲಿನಿಂದ ಕಂಗೆಟ್ಟ ಮುಂಬೈ ಇಂಡಿಯನ್ಸ್, ಸೋಮನಾಥ ಶಿವನ ದೇಗುಲದಲ್ಲಿ ಹಾರ್ದಿಕ್ ಪಾಂಡ್ಯ ಪೂಜೆ..!

ಈ ಆವೃತ್ತಿಯಲ್ಲಿ ಕೆಕೆಆರ್ ಆಡಿದ ಮೂರಕ್ಕೆ ಮೂರೂ ಪಂದ್ಯಗಳನ್ನು ಗೆದ್ದು ಬೀಗಿದೆ. ಈ ಮೂರು ಪಂದ್ಯಗಳಲ್ಲೂ ತಂಡ ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದೆ. ಇದು ತಂಡದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ವಾಸ್ತವವಾಗಿ ಈ ಕಾಕತಾಳೀಯ ತಂಡದ ಮೆಂಟರ್ ಗಂಭೀರ್ ಹಾಗೂ ನಾಯಕ ಅಯ್ಯರ್ ಅವರಿಗೆ ಸಂಬಂಧಿಸಿದ್ದಾಗಿದೆ. ಈ ಕಾಕತಾಳೀಯವನ್ನು ನೋಡಿದರೆ, ಕೆಕೆಆರ್ ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿಯಬಹುದು ಎನಿಸುತ್ತಿದೆ. ಹಾಗಾದರೆ ಈ ವಿಶೇಷ ಕಾಕತಾಳೀಯ ಏನು ಎಂಬುದನ್ನು ಹೇಳ್ತಿವಿ ಕೇಳಿ.

ಡೆಲ್ಲಿಯಿಂದ ಕೋಲ್ಕತಾಗೆ ಬಂದಿದ್ದ ಗಂಭೀರ್

KKR ತಂಡ ಇದುವರೆಗೆ ಎರಡು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಗಂಭೀರ್ ನಾಯಕತ್ವದಲ್ಲಿ ಈ ತಂಡ ಎರಡೂ ಬಾರಿ ಈ ಸಾಧನೆ ಮಾಡಿದೆ. 2012ರಲ್ಲಿ KKRನ ಜವಾಬ್ದಾರಿ ವಹಿಸುವ ಮೊದಲು ಗಂಭೀರ್ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದರು. 2011ರ ಮೆಗಾ ಹರಾಜಿನಲ್ಲಿ ಕೋಲ್ಕತಾ ಗೌತಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಇದಾದ ಬೆನ್ನಲ್ಲೇ ತಂಡದ ನಾಯಕರನ್ನಾಗಿಯೂ ನೇಮಿಸಲಾಯಿತು. ಆ ಬಳಿಕ KKR ಪರ ಸತತ ಎರಡು ಸೀಸನ್ ಆಡಿದ ಗಂಭೀರ್, ಕೆಕೆಆರ್ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಡೆಲ್ಲಿಯಿಂದ ಕೋಲ್ಕತಾಗೆ ಬಂದಿರುವ ಶ್ರೇಯಸ್

ಗಂಭೀರ್ ಅವರಂತೆ ಶ್ರೇಯಸ್ ಕೂಡ ಕೋಲ್ಕತಾ ಪರ ಆಡುವುದಕ್ಕೂ ಮೊದಲು ಡೆಲ್ಲಿ ಪರ ಆಡಿದ್ದರು. 2018ರಲ್ಲಿ ಗಂಭೀರ್ ದೆಹಲಿ ತಂಡದ ನಾಯಕತ್ವ ತೊರೆದಾಗ ಅಯ್ಯರ್ ಅವರನ್ನು ಡೆಲ್ಲಿ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ನಂತರ ಅಯ್ಯರ್ 2021 ರವರೆಗೆ ಡೆಲ್ಲಿ ಪರ ಆಡುವುದನ್ನು ಮುಂದುವರೆಸಿದ್ದರು. ಅಯ್ಯರ್ ನಾಯಕತ್ವದಲ್ಲೂ ಡೆಲ್ಲಿ ತಂಡದ ಪ್ರದರ್ಶನ ಉತ್ತಮಗೊಳಲಿಲ್ಲ. ಹೀಗಾಗಿ ಡೆಲ್ಲಿ 2022ರಲ್ಲಿ ಅಯ್ಯರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಇದರ ನಂತರ ಗಂಭೀರ್‌ ಅವರಂತೆ, ಅಯ್ಯರ್ ಕೂಡ ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡವನ್ನು ಸೇರಿಕೊಂಡರು.

ಗಂಭೀರ್‌ನಂತೆ ಶ್ರೇಯಸ್ ಸಹ ಚಾಂಪಿಯನ್ ಮಾಡ್ತಾರಾ..?

ಗಂಭೀರ್‌ನಂತೆ, ಅಯ್ಯರ್ ಅವರನ್ನು ತಕ್ಷಣವೇ KKR ತಂಡದ ನಾಯಕನನ್ನಾಗಿ ಮಾಡಲಾಯಿತು. ಆದರೆ ಅಯ್ಯರ್‌ ಕೂಡ KKR ತಂಡವನ್ನು ಪ್ಲೇ-ಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಶ್ರೇಯಸ್ ಅಯ್ಯರ್ ಈಗ ಕೋಲ್ಕತಾ ಪರ ಎರಡನೇ ಸೀಸನ್ ಆಡುತ್ತಿದ್ದಾರೆ. ಏಕೆಂದರೆ 2023ರಲ್ಲಿ ಅವರು ಗಾಯದ ಕಾರಣದಿಂದಾಗಿ ಇಡೀ ಸೀಸನ್ ಹೊರಗುಳಿದಿದ್ದರು. ಇದೀಗ KKR ಪರ ಎರಡನೇ ಸೀಸನ್‌ ಆಡುತ್ತಿರುವ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ತಂಡ ಇದುವರೆಗೆ ತೋರಿದ ಆಟವನ್ನು ನೋಡಿದರೆ ಐಪಿಎಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗಂಭೀರ್ ತಮ್ಮ ಎರಡನೇ ಸೀಸನ್‌ನಲ್ಲಿ ಕೆಕೆಆರ್‌ಗಾಗಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದಂತೆಯೇ ಅಯ್ಯರ್ ತಮ್ಮ ಎರಡನೇ ಸೀಸನ್‌ನಲ್ಲಿ ಅದೇ ಸಾಧನೆ ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

Follow Us:
Download App:
  • android
  • ios