Asianet Suvarna News Asianet Suvarna News

ವಿವಾದಾತ್ಮಕ ತೀರ್ಪು, ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಮತ್ತೊಂದು ಶಾಕ್, ಶೇ.50 ರಷ್ಟು ದಂಡ!

ಆರ್‌ಸಿಬಿ ಸೋಲಿನಿಂದ ಕಂಗೆಟ್ಟಿದೆ. ಇದರ ಜೊತೆಗೆ ವಿವಾದಾತ್ಮಕ ತೀರ್ಪುಗಳು ಕೂಡ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ಸೋಲಿನ ನೋವಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಮತ್ತೊಂದು ಶಾಕ್ ಎದುರಾಗಿದೆ.
 

IPL 2024 KKR vs RCB Virat Kohli fined 50 percent of match fee for argument with Umpire on Out decision ckm
Author
First Published Apr 22, 2024, 7:30 PM IST

ಕೋಲ್ಕತಾ(ಏ.22) ಐಪಿಎಲ್ 2024 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತು ಕಂಗಾಲಾಗಿದೆ. ಕಳೆದ ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಕೇವಲ 1 ರನ್‌ಗಳಿಂದ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಕೆಲ ವಿವಾದಗಳು ಸೃಷ್ಟಿಯಾಗಿದೆ. ಈ ಸೋಲಿನ ನೋವಿನಲ್ಲಿರುವ ವಿರಾಟ್ ಕೊಹ್ಲಿಗೆ ಮತ್ತೊಂದು ಆಘಾತ ಎದುರಾಗಿದೆ. ಔಟ್ ತೀರ್ಪಿಗೆ ಅಂಪೈರ್ ಜೊತೆ ವಾಗ್ವಾದ ನಡೆಸಿದ ವಿರಾಟ್ ಕೊಹ್ಲಿಗೆ ಪಂದ್ಯದ ಶೇಕಡಾ 50 ರಷ್ಟು ಮೊತ್ತ ದಂಡ ವಿಧಿಸಲಾಗಿದೆ. 

ವಿರಾಟ್ ಕೊಹ್ಲಿ ಲೆವೆಲ್ 1 ಕೋಡ್ ಉಲ್ಲಂಘಿಸಿದ್ದಾರೆ. ಕೊಹ್ಲಿ ತಮ್ಮ ತಪ್ಪನ್ನು ಮ್ಯಾಚ್ ರೆಫ್ರಿ ಬಳಿ ಒಪ್ಪಿಕೊಂಡಿದ್ದಾರೆ. ಇದೀಗ ಕೊಹ್ಲಿ ಪಂದ್ಯದ ಶೇಕಡಾ 50 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಲು ಸೂಚಿಸಿದೆ. ನಾಯಕ ಫಾಫ್ ಡುಪ್ಲಸಿಸ್‌ಗೆ ನಿಧಾನಗತಿಯ ಓವರ್ ರೇಟ್‌ನಿಂದ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಕೊಹ್ಲಿಗೂ ದಂಡ ವಿಧಿಸಲಾಗಿದೆ.

IPL 2024 ದಿನೇಶ್ ಕಾರ್ತಿಕ್ ಒಂದು ನಿರ್ಧಾರದಿಂದ ಆರ್‌ಸಿಬಿ ಸೋಲು ಕಂಡಿತಾ? ಏನಿದು ವಿವಾದ!

ಕೋಲ್ಕತಾದ ಈಡನ್ ಗಾರ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ 223 ರನ್ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಚೇಸಿಂಗ್ ವೇಳೆ 3ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಔಟಾಗಿದ್ದರು. ಹರ್ಷಿತ್ ರಾಣಾ ಫುಲ್ ಟಾಸ್ ಎಸೆತ ನೋ ಬಾಲ್ ಆಗಿತ್ತು ಅನ್ನೋದು ಕೊಹ್ಲಿ ವಾದ. ಫುಲ್ ಟಾಸ್ ಎಸೆತದ ಕೊಹ್ಲಿ ಸೊಂಟದ ಮೇಲಿತ್ತು.  ತೀರ್ಪು ವಿವಾದವಾಗುತ್ತಿದ್ದಂತೆ ಥರ್ಡ್ ಅಂಪೈರ್‌ಗೆ ಪರಿಶೀಲನೆಗೆ ನೀಡಲಾಗಿತ್ತು. ಆದರೆ ಅಂಪೈರ್ ನೀಡಿದ ಔಟ್ ತೀರ್ಪಿಗೆ ಕೊಹ್ಲಿ ಗರಂ ಆಗಿದ್ದರು. ಪೆವಿಲಿಯನ್ ಸಾಗುತ್ತಿದ್ದ ವೇಳೆ ಅಂಪೈರ್ ಬಳಿ ತೆರಳಿ ವಾಗ್ವಾದ ನಡೆಸಿದ್ದಾರೆ. ಹೀಗಾಗಿ ದಂಡ ವಿಧಿಸಲಾಗಿದೆ.

ರೋಚಕ ಪಂದ್ಯದಲ್ಲಿ ಕೆಕೆಆರ್ 222ರನ್ ಸಿಡಿಸಿದ್ದರೆ, ಆರ್‌ಸಿಬಿ 221 ರನ್ ಸಿಡಿಸಿತ್ತು. ಈ ಮೂಲಕ ಕೇವಲ 1ರನ್‌ಗಳ ಸೋಲು ಕಂಡಿತ್ತು. ವಿರಾಟ್ ಕೊಹ್ಲಿ ಕೇವಲ 18 ರನ್ ಸಿಡಿಸಿ ಔಟಾಗಿದ್ದರು. ದಿಟ್ಟ ಹೋರಾಟ ನೀಡಿದ ಆರ್‌ಸಿಬಿ ಬ್ಯಾಟ್ಸ್‌ಮನ್ ಪಂದ್ಯದ ರೋಚಕತೆ ಹೆಚ್ಚಿಸಿದ್ದರು. ಅಂತಿಮ ಎಸೆತದವರೆಗೂ ಪಂದ್ಯ ಸಾಗಿತ್ತು. ಆದರೆ ಗೆಲುವು ಸಿಗಲಿಲ್ಲ.

ಐಪಿಎಲ್ 2024ರ ಟೂರ್ನಿಯಲ್ಲಿ ಆರ್‌ಸಿಬಿ ಕೇವಲ 1 ಪಂದ್ಯ ಮಾತ್ರ ಗೆದ್ದುಕೊಂಡಿದೆ. ಇನ್ನುಳಿದ 7 ಪಂದ್ಯದಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಆರ್‌ಸಿಬಿ ಕೊನೆಯ ಸ್ಥಾನದಲ್ಲಿದೆ. 

ಆರ್‌ಸಿಬಿ ಸೋಲಿಗೆ ಚಿಂತೆ ಬೇಡ, ಡೆಫ್ ಐಪಿಎಲ್‌ನಲ್ಲಿ ಕಪ್ ಗೆದ್ದ ಬೆಂಗಳೂರು ತಂಡ!
 

Follow Us:
Download App:
  • android
  • ios