ಶುಭ್‌ಮನ್‌ ಗಿಲ್‌ ನಾಯಕತ್ವದೊಂದಿಗೆ ಕಣಕ್ಕಿಳಿದಿರುವ ಗುಜರಾತ್‌ ಟೈಟಾನ್ಸ್ 6ರಲ್ಲಿ ತಲಾ 3 ಗೆಲುವು, ಸೋಲು ಕಂಡಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ 6 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿವೆ.

ಅಹಮದಾಬಾದ್‌(ಏ.17): 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಸ್ಥಿರ ಆಟಕ್ಕೆ ಹೆಸರುವಾಸಿಯಾಗಿರುವ 2 ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಇತ್ತಂಡಗಳೂ ಗೆಲುವಿನ ಓಟ ಮುಂದುವರಿಸುವ ಕಾತರದಲ್ಲಿವೆ. ಶುಭ್‌ಮನ್‌ ಗಿಲ್‌ ನಾಯಕತ್ವದೊಂದಿಗೆ ಕಣಕ್ಕಿಳಿದಿರುವ ಗುಜರಾತ್‌ ಟೈಟಾನ್ಸ್ 6ರಲ್ಲಿ ತಲಾ 3 ಗೆಲುವು, ಸೋಲು ಕಂಡಿದೆ. ಅತ್ತ ಡೆಲ್ಲಿ ಕ್ಯಾಪಿಟಲ್ಸ್ 6 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿವೆ.

ಶುಭ್‌ಮನ್‌ ಗಿಲ್ ಮಿಂಚುತ್ತಿದ್ದರೂ ಇತರರು ಕೈಕೊಡುತ್ತಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ. ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಬೌಲಿಂಗ್‌ ವಿಭಾಗ ಸೊರಗಿದಂತೆ ಕಾಣುತ್ತಿದ್ದು, ಉಮೇಶ್‌ ಯಾದವ್‌, ಮೋಹಿತ್‌ ಶರ್ಮಾ ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ರಶೀದ್‌ ಖಾನ್‌ರ ಪ್ರದರ್ಶನ ನಿರ್ಣಾಯಕ ಎನಿಸಿದ್ದು, ಯುವ ಬ್ಯಾಟರ್‌ ಸಾಯಿ ಸುದರ್ಶನ್‌ ದೊಡ್ಡ ಇನ್ನಿಂಗ್ಸ್‌ ಕಟ್ಟಬೇಕಾಗಿದೆ.

IPL 2024 ಬಟ್ಲರ್‌ ಶತಕದ ಜೋಶ್‌ಗೆ ನಡುಗಿದ ಕೋಲ್ಕತಾ ನೈಟ್ ರೈಡರ್ಸ್‌!

ಮತ್ತೊಂದೆಡೆ ರಿಷಭ್‌ ಪಂತ್‌ ಸಾರಥ್ಯದ ಡೆಲ್ಲಿ ಫಿಟ್ನೆಸ್‌, ಗಾಯಾಳುಗಳ ಸಮಸ್ಯೆಯಿಂದ ಬಳಲುತ್ತಿದೆ. ರಿಷಭ್‌ ಲಯಕ್ಕೆ ಮರಳಿದ್ದು ಪ್ಲಸ್‌ ಪಾಯಿಂಟ್‌ ಆಗಿದ್ದರೂ ಇತರರ ಪ್ರದರ್ಶನವೂ ತಂಡದ ಗೆಲುವಿಗೆ ಅಗತ್ಯವಿದೆ. ಡೇವಿಡ್‌ ವಾರ್ನರ್‌ ಕಳಪೆ ಪ್ರದರ್ಶನ ನೀಡುತ್ತಿರುವುದು ತಂಡದ ಹಿನ್ನಡೆಗೆ ಕಾರಣ. ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಮತ್ತೊಮ್ಮೆ ಎದುರಾಳಿಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.

ಒಟ್ಟು ಮುಖಾಮುಖಿ: 03

ಡೆಲ್ಲಿ: 01

ಗುಜರಾತ್‌: 02

T20 ವಿಶ್ವಕಪ್ ತಂಡದಲ್ಲಿ ಸ್ಥಾನ ಬೇಕಾ..? ಪಾಂಡ್ಯಗೆ ಹೊಸ ಟಾರ್ಗೆಟ್ ಕೊಟ್ಟ ದ್ರಾವಿಡ್, ರೋಹಿತ್, ಅಗರ್‌ಕರ್..!

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್‌, ಶಾಯ್ ಹೋಪ್‌, ರಿಷಭ್‌ ಪಂತ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್‌, ಜೇಕ್‌ ಫ್ರೇಸರ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಮುಕೇಶ್‌ ಕುಮಾರ್, ಇಶಾಂತ್‌ ಶರ್ಮಾ, ಖಲೀಲ್‌ ಅಹಮದ್.

ಗುಜರಾತ್‌ ಟೈಟಾನ್ಸ್: ಶುಭ್‌ಮನ್ ಗಿಲ್‌(ನಾಯಕ), ಸಾಯಿ ಸುದರ್ಶನ್‌, ವಿಜಯ್ ಶಂಕರ್‌, ಅಭಿನವ್‌ ಮನೋಹರ್, ಮ್ಯಾಥ್ಯೂ ವೇಡ್‌, ರಾಹುಲ್ ತೆವಾಟಿಯಾ, ರಶೀದ್‌ ಖಾನ್, ಉಮೇಶ್‌ ಯಾದವ್, ಸ್ಪೆನ್ಸರ್‌ ಜಾನ್ಸನ್, ನೂರ್‌ ಅಹಮ್ಮದ್, ಮೋಹಿತ್‌ ಶರ್ಮಾ.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ