ಆರ್‌ಸಿಬಿಗೆ ಒಲಿಯುತ್ತಾ ಟ್ರೋಫಿ, 1 ರನ್ ಸೋಲು ಬಳಿಕ ಸತತ ಗೆಲುವು, ಮಹಿಳಾ ತಂಡದ ಹಾದಿಯಲ್ಲಿ ಬಾಯ್ಸ್!

ಆರ್‌ಸಿಬಿ ಪ್ಲೇ ಆಫ್ ಸಾಧ್ಯತೆ ಕುರಿತು ಲೆಕ್ಕಾಚಾರ ಜೋರಾಗಿದೆ. ಆದರೆ ಕೆಲ ಆರ್‌ಸಿಬಿ ಅಭಿಮಾನಿಗಳು  ಕಪ್ ನಮ್ದೆ ಎನ್ನುತ್ತಿದ್ದಾರೆ. ಇದಕ್ಕೆ ಆರ್‌ಸಿಬಿ ಮಹಿಳಾ ತಂಡದ ಹಾದಿ ಹಾಗೂ ಪುರುಷರ ತಂಡದ ಹಾದಿಯನ್ನು ಹೋಲಿಕೆ ಮಾಡಿದ್ದಾರೆ.ಮಹಿಳಾ ತಂಡದ ರೀತಿಯಲ್ಲೇ ಪುರುಷರ ತಂಡ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

IPL 2024 Fans hope RCB lift trophy this year compare women team road to final journey after 1 run lose ckm

ಬೆಂಗಳೂರು(ಮೇ.13) ಐಪಿಎಲ್ 2024 ಟೂರ್ನಿ ಲೀಗ್ ಪಂದ್ಯಗಳು ರೋಚಕ ಘಟ್ಟ ತಲುಪಿದೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗೆಲ್ಲಬೇಕು, ಜೊತೆಗೆ ನೆಟ್ ರನ್‌ರೇಟ್ ಉತ್ತಮಪಡಿಸಿಕೊಳ್ಳಬೇಕು. ಸೋಲು ಗೆಲುವಿನ ಲೆಕ್ಕಾಚಾರ ಜೋರಾಗುತ್ತಿದೆ. ಆರ್‌ಸಿಬಿ ಅಭಿಮಾನಿಗಳು ಪ್ಲೇ ಆಫ್ ಕುರಿತು ತಲೆಕೆಡಿಸಿಕೊಂಡಿದ್ದಾರೆ. ಆದರೆ ಕೆಲ ಅಭಿಮಾನಿಗಳು ಆರ್‌ಸಿಬಿ ಈ ಬಾರಿ ಟ್ರೋಫಿ ಗೆಲ್ಲಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಆರ್‌ಸಿಬಿ ಮಹಿಳಾ ತಂಡ 1 ರನ್‌ ವಿರೋಚಿತ ಸೋಲು ಕಂಡು ಬಳಿಕ ಸತತ ಗೆಲುವಿನ ಮೂಲಕ ಪ್ಲೇ ಆಫ್ ಪ್ರವೇಶಿಸಿ ಟ್ರೋಫಿ ಗೆದ್ದಿತ್ತು. ಇದೀಗ ಆರ್‌ಸಿಬಿ ಕೂಡ ಕೆಕೆಆರ್ ವಿರುದ್ಧ 1 ರನ್ ಸೋಲಿನ ಬಳಿಕ ಸತತ ಗೆಲುವು ಕಾಣುತ್ತಿದೆ. ಹೀಗಾಗಿ ಟ್ರೋಫಿ ಪಕ್ಕಾ ಎನ್ನುತ್ತಿದ್ದಾರೆ ಫ್ಯಾನ್ಸ್.

ಆರ್‌ಸಿಬಿ ತಂಡ ಟ್ರೋಫಿ ಗೆಲ್ಲುತ್ತೆ ಅನ್ನೋದಕ್ಕೆ ಕೆಲ ಅಂಕಿ ಅಂಶಗಳನ್ನು ಅಭಿಮಾನಿಗಳು ನೀಡಿದ್ದರೆ. ಈ ಕುರಿತು ಆರ್‌ಸಿಬಿ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದು ಇತರ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ನೆನಪಿದೆಯಾ? ಆರ್‌ಸಿಬಿ ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಕೇವಲ 1 ರನ್‌ಗಳಿಂದ ಪಂದ್ಯ ಸೋತಿತ್ತು. ಬಳಿಕ ಸತತ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸಿತ್ತು. ಇಷ್ಟೇ ಅಲ್ಲ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ಆರ್‌ಸಿಬಿ ಪುರುಷರ ತಂಡ ಇದೇ ರೀತಿ ಕೆಕೆಆರ್ ವಿರುದ್ದ ಕೇವಲ 1 ರನ್‌ಗಳಿಂದ ಪಂದ್ಯ ಸೋತಿತ್ತು. ಇದಾದ ಬಳಿಕ ಸತತ ಪಂದ್ಯ ಗೆದ್ದುಕೊಂಡಿದೆ. ಸಾಕಷ್ಟು ದೂರ ಆರ್‌ಸಿಬಿ ಪ್ರಯಾಣಿಸಿದೆ. ನಿರೀಕ್ಷಿತ ಫಲಿತಾಂಶಕ್ಕೆ ಕಾಯೋಣ ಎಂದು ಅಭಿಮಾನಿ ಟ್ವೀಟ್ ಮಾಡಿದ್ದಾರೆ.

ನಾನಾ... ನೀನಾ...?’ ವಿರಾಟ್ ಔಟ್ ಮಾಡಿ ಕಾಲೆಳೆದ ಗೆಳೆಯ ಇಶಾಂತ್ ಶರ್ಮಾ, ಆಮೇಲೆ ಲೆಕ್ಕಾಚುಕ್ತ ಮಾಡಿದ ಕಿಂಗ್ ಕೊಹ್ಲಿ..!

ಐಪಿಎಲ್ 2024 ಟೂರ್ನಿ ಆರಂಭದಿಂದಲೇ ಸೋಲಿನತ್ತ ಮುಖಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಪ್ರಿಲ್ 21ರಂದು ಕೆಕೆಆರ್ ವಿರುದ್ಧ ಮುಖಾಮುಖಿಯಾಗಿತ್ತು. ಕೆಕೆಆರ್ 226 ರನ್ ಸಿಡಿಸಿದರೆ ಆರ್‌ಸಿಬಿ 221 ರನ್ ಸಿಡಿಸಿ ಸೋಲು ಕಂಡಿತ್ತು. ಬಳಿಕ ಆರ್‌ಸಿಬಿ, ಸನ್‌ರೈಸರ್ಸ್ ಹೈದರಾಬಾದ್, ಎರಡು ಬಾರಿ ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಆರ್‌ಸಿಬಿ ಇದೀಗ 5ನೇ ಸ್ಥಾನ ಸಂಪಾದಿಸಿದೆ. ಚೆನ್ನೈ ಮಣಿಸಿ ಪ್ಲೇ ಆಫ್ ಸ್ಥಾನಕ್ಕೇರಲು ಸಿದ್ಧವಾಗಿದೆ.

 

 

ಮಹಿಳಾ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 1 ರನ್ ಸೋಲು ಕಂಡ ಬಳಿಕ, ಎರಡು ಬಾರಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಇದೇ ಪುನಾರವರ್ತನೆಯಾಗಲಿದೆ ಅನ್ನೋದು ಅಭಿಮಾನಿಗಳ ವಿಶ್ವಾಸ.

RCBಗೆ 5ನೇ ದಿಗ್ವಿಜಯ; ಚೆನ್ನೈ ಎದುರು ಕೇವಲ ಇಷ್ಟು ರನ್ ಅಂತರದಲ್ಲಿ ಗೆದ್ರೆ ಬೆಂಗಳೂರು ಪ್ಲೇ ಆಫ್‌ ಫಿಕ್ಸ್..!
 

Latest Videos
Follow Us:
Download App:
  • android
  • ios