Asianet Suvarna News Asianet Suvarna News

ಬೆಂಗಳೂರಿನಲ್ಲಿ ಟಾಸ್ ಗೆದ್ದ ಡೆಲ್ಲಿ, ಪ್ಲೇ ಅಫ್ ಆಸೆ ಜೀವಂತವಾಗಿರಿಸಲು ಸಜ್ಜಾದ ಆರ್‌ಸಿಬಿ!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದುಕೊಂಡಿದೆ. ಪ್ಲೇ ಆಫ್ ಕಾರಣದಿಂದ ಈ ಪಂದ್ಯ ಆರ್‌ಸಿಬಿಗೆ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯಕ್ಕಾಗಿ ತಂಡದಲ್ಲಿ ಸ್ಥಾನ ಪಡೆದವರು ಯಾರು
 

IPL 2024 Delhi Capitals win toss and opt bowl against RCB in Bengaluru ckm
Author
First Published May 12, 2024, 7:09 PM IST

ಬೆಂಗಳೂರು(ಮೇ.12) ಪ್ಲೇ ಆಫ್ ಲೆಕ್ಕಾಚಾರ ಜೋರಾಗುತ್ತಿದೆ. ಸತತ ಗೆಲುವಿನ ಮೂಲಕ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿರುವ ಆರ್‌ಸಿಬಿ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಹೋರಾಟಕ್ಕೆ ಇಳಿದಿದೆ. ಆದರೆ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಬೃಹತ್ ಮೊತ್ತ ಸಿಡಿಸಲು ಆರ್‌ಸಿಬಿ ಸಜ್ಜಾಗಿದೆ. ರಿಷಬ್ ಪಂತ್‌ಗೆ ಬಿಸಿಸಿಐ ನಿಷೇಧ ಹೇರಿರುವ ಕಾರಣ ಡೆಲ್ಲಿ ತಂಡವನ್ನು ಅಕ್ಸರ್ ಪಟೇಲ್ ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಆದರೆ ಆರ್‌ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.

ಆರ್‌ಸಿಬಿ ಪ್ಲೇಯಿಂಗ್ 11
ಫಾಫ್ ಡುಪ್ಲಿಸಿಸ್(ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲ್ಯೂಕಿ ಫರ್ಗ್ಯೂಸನ್, ಯಶ್ ದಯಾಳ್

ರಾಜಸ್ಥಾನಕ್ಕೆ ಸೋಲುಣಿಸಿ ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾದ ಚೆನ್ನೈ ಸೂಪರ್ ಕಿಂಗ್ಸ್
 
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಜೇಕ್ ಫ್ರೇಸರ್ ಮೆಕ್‌ಗರ್ಕ್, ಅಭಿಷೇಕ್ ಪೊರೆಲ್, ಶೈ ಹೋಪ್, ಕುಮಾರ್ ಕುಶಾಗ್ರ, ತ್ರಿಸ್ಚನ್ ಸ್ಟಬ್ಲ್, ಅಕ್ಸರ್ ಪಟೇಲ್(ನಾಯಕ), ಕುಲ್ದೀಪ್ ಯಾದವ್, ರಿಶಿಕ್ ದಾರ್, ಮುಕೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹಮ್ಮದ್ 

ಇಂದು ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಲೇಬೇಕು. ಇನ್ನು ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಅಂತಿಮ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೋರಾಟ ನಡೆಲಿದೆ. ಈ ಪಂದ್ಯದಲ್ಲೂ ಆರ್‌ಸಿಬಿ ಗೆಲುವು ಸಾಧಿಸಬೇಕು. ಹೀಗಾದರೆ ಮಾತ್ರ ಆರ್‌ಸಿಬಿ ಪ್ಲೇ ಆಫ್ ಅವಕಾಶದ ಬಾಗಿಲು ತೆರಯಲಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ ವಿರುದ್ಧ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಹೋರಾಟದಲ್ಲಿ ಗೇರ್ ಬದಲಾಯಿಸಿದೆ. ಇದರಿಂದ ಆರ್‌ಸಿಬಿ ಹೋರಾಟ ಮತ್ತಷ್ಟು ಕಠಿಣಗೊಂಡಿದೆ. ಆರ್‌ಸಿಬಿ ಎರಡೂ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ.

ಕೆಕೆಆರ್ ಈಗಾಗಲೇ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಇತ್ತ ರಾಜಸ್ಥಾನ ರಾಯಲ್ಸ್ ಕೂಡ ಸ್ಥಾನ ಬಹುತೇಕ ಖಚಿತವಾಗಿದೆ. ಚೆನ್ನೈ ಹಾಗೂ ಹೈದರಾಬಾದ್ 14 ಅಂಕಗಳೊಂದಿಗೆ 3 ಮತ್ತು ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ 7ನೇ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ ನೆಟ್ ರನ್‌ರೇಟ್ ಪ್ಲಸ್ ಆಗಿದೆ. 10 ಅಂಕ ಸಂಪಾದಿಸಿರುವ ಆರ್‌ಸಿಬಿ 2 ಪಂದ್ಯ ಗೆದ್ದರೆ 14 ಅಂಕ ಸಂಪಾದಿಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ 5 ಹಾಗೂ ಲಖನೌ ಸೂಪರ್ ಜೈಂಟ್ಸ್ 6ನೇ ಸ್ಥಾನದಲ್ಲಿದೆ.

ಏನೋ ವಿಶೇಷತೆ ನಿಮಗಾಗಿ ಕಾದಿದೆ, ಮ್ಯಾಚ್ ಮುಗಿದ ಮೇಲೆ ಮೈದಾನದಲ್ಲೇ ಇರಿ: ಚೆನ್ನೈ ಫ್ರಾಂಚೈಸಿ ಮಾತಿನ ಮರ್ಮವೇನು?
 

Latest Videos
Follow Us:
Download App:
  • android
  • ios