ರಾಜಸ್ಥಾನ ರಾಯಲ್ಸ್ ಮಣಿಸಿ ಡೆಲ್ಲಿಯ ಪ್ಲೇ-ಆಫ್‌ ಕನಸು ಜೀವಂತ!

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಯುವ ತಾರೆಗಳಾದ ಜೇಕ್‌ ಫ್ರೇಸರ್‌-ಪೊರೆಲ್‌ ಅಬ್ಬರದಿಂದಾಗಿ 20 ಓವರಲ್ಲಿ 8 ವಿಕೆಟ್‌ಗೆ 221 ರನ್‌ ಕಲೆಹಾಕಿತು. ಸ್ಫೋಟಕ ಆಟದ ಮೂಲಕ ರಾಜಸ್ಥಾನ ಗುರಿಯನ್ನು ಬೆನ್ನತ್ತುವ ನಿರೀಕ್ಷೆಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಎಡವಿತು. ತಂಡ 8 ವಿಕೆಟ್‌ಗೆ 201 ರನ್‌ ಸೋಲೊಪ್ಪಿಕೊಂಡಿತು.

IPL 2024 Delhi Capitals keep playoffs hope alive after win against Rajasthan Royals kvn

ಡೆಲ್ಲಿ: ನಿರ್ಣಾಯಕ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್‌ನ್ನು 20 ರನ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್‌ 17ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಎಡವಿದ ರಾಜಸ್ಥಾನ ಟೂರ್ನಿಯಲ್ಲಿ 3ನೇ ಸೋಲು ಕಂಡರೂ, 16 ಅಂಕದೊಂದಿಗೆ 2ನೇ ಸ್ಥಾನದಲ್ಲೇ ಬಾಕಿಯಾಗಿದೆ. 12ರಲ್ಲಿ 6ನೇ ಗೆಲುವು ಕಂಡ ಡೆಲ್ಲಿ ಪ್ಲೇ-ಆಫ್‌ ರೇಸನ್ನು ಮತ್ತಷ್ಟು ರೋಚಕಗೊಳಿಸಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಯುವ ತಾರೆಗಳಾದ ಜೇಕ್‌ ಫ್ರೇಸರ್‌-ಪೊರೆಲ್‌ ಅಬ್ಬರದಿಂದಾಗಿ 20 ಓವರಲ್ಲಿ 8 ವಿಕೆಟ್‌ಗೆ 221 ರನ್‌ ಕಲೆಹಾಕಿತು. ಸ್ಫೋಟಕ ಆಟದ ಮೂಲಕ ರಾಜಸ್ಥಾನ ಗುರಿಯನ್ನು ಬೆನ್ನತ್ತುವ ನಿರೀಕ್ಷೆಯಲ್ಲಿದ್ದರೂ ಕೊನೆ ಕ್ಷಣದಲ್ಲಿ ಎಡವಿತು. ತಂಡ 8 ವಿಕೆಟ್‌ಗೆ 201 ರನ್‌ ಸೋಲೊಪ್ಪಿಕೊಂಡಿತು.

'ಮೊದಲು ನೀನು ಹೋಗು': 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಧೋನಿ, ಟ್ರೋಲ್ ಮಾಡಿದ ನೆಟ್ಟಿಗರು..!

ಯಶಸ್ವಿ ಜೈಸ್ವಾಲ್‌(04), ಜೋಸ್‌ ಬಟ್ಲರ್‌(19) ಬೇಗನೇ ಔಟಾದರೂ ಡೆಲ್ಲಿ ಸಂಭ್ರಮಕ್ಕೆ ಸ್ಯಾಮ್ಸನ್‌ ಅಡ್ಡಿಯಾದರು. ಅವರು ರಿಯಾನ್‌ ಪರಾಗ್‌(27) ಹಾಗೂ ಶುಭಂ ದುಬೆ(12 ಎಸೆತಗಳಲ್ಲಿ 25) ಜೊತೆಗೂಡಿ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಆದರೆ 46 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್‌ನೊಂದಿಗೆ 86 ರನ್ ಚಚ್ಚಿದ ಸ್ಯಾಮ್ಸನ್‌, 16ನೇ ಓವರ್‌ನಲ್ಲಿ ವಿವಾದಿತ ರೀತಿಯಲ್ಲಿ ಔಟಾದರು. ಬಳಿಕ ಪೊವೆಲ್‌(13) ಹೋರಾಡಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಖಲೀಲ್‌, ಕುಲ್ದೀಪ್‌, ಮುಕೇಶ್‌ ತಲಾ 2 ವಿಕೆಟ್‌ ಕಿತ್ತರು.

ಪೊರೆಲ್‌, ಫ್ರೇಸರ್‌ ಅಬ್ಬರ: ಇದಕ್ಕೂ ಮುನ್ನ ಡೆಲ್ಲಿ ಅಕ್ಷರಶಃ ಆರ್ಭಟಿಸಿತು. ಆರಂಭಿಕರಾದ ಅಭಿಷೇಕ್‌ ಪೊರೆಲ್‌ ಹಾಗೂ ಜೇಕ್‌ ಫ್ರೇಸರ್‌ 4.2 ಓವರಲ್ಲೇ 62 ರನ್‌ ಜೊತೆಯಾಟವಾಡಿದರು. ಚೆಂಡನ್ನು ಮೈದಾನದ ಮೂಲೆಮೂಲೆಗೆ ಅಟ್ಟಿದ ಫ್ರೇಸರ್‌ 20 ಎಸೆತಗಳಲ್ಲೇ 7 ಬೌಂಡರಿ, 3 ಸಿಕ್ಸರ್‌ನೊಂದಿಗೆ 50 ರನ್‌ ಚಚ್ಚಿದರು. ಪೊರೆಲ್‌ 36 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ನೊಂದಿಗೆ 65 ರನ್‌ ಸಿಡಿಸಿದರು. ಬಳಿಕ ಸತತ ವಿಕೆಟ್‌ ವಿಕೆಟ್‌ ಕಳೆದುಕೊಂಡರೂ ಕೊನೆಯಲ್ಲಿ ಅಬ್ಬರಿಸಿದ ಟ್ರಿಸ್ಟನ್ ಸ್ಟಬ್ಸ್(20 ಎಸೆತಗಳಲ್ಲಿ 41) ತಂಡವನ್ನು 220ರ ಗಡಿ ದಾಟಿಸಿದರು. ಇತರೆಲ್ಲಾ ಬೌಲರ್‌ಗಳು ಚಚ್ಚಿಸಿಕೊಂಡರೂ ಮೊನಚು ದಾಳಿ ಸಂಘಟಿಸಿ ಆರ್‌.ಅಶ್ವಿನ್‌ 4 ಓವರಲ್ಲಿ 24ಕ್ಕೆ 3 ವಿಕೆಟ್‌ ಕಿತ್ತರು.

ಮೊದಲ ಬಾರಿಗೆ ಬುಮ್ರಾ ಮಗನ ಮುಖ ರಿವೀಲ್; ವಾಂಖೇಡೆಯಲ್ಲಿ ಅಪ್ಪನ ಆಟ ಎಂಜಾಯ್ ಮಾಡಿದ ಅಂಗದ್

ಸ್ಕೋರ್: 
ಡೆಲ್ಲಿ 20 ಓವರಲ್ಲಿ 221/8 (ಪೊರೆಲ್‌ 65, ಫ್ರೇಸರ್‌ 50, ಅಶ್ವಿನ್‌ 2-24) 
ರಾಜಸ್ಥಾನ 20 ಓವರಲ್ಲಿ 201/8 (ಸ್ಯಾಮ್ಸನ್‌ 86, ಕುಲ್ದೀಪ್‌ 2-25)

350 ಟಿ20 ವಿಕೆಟ್‌: ಚಹಲ್‌ ದಾಖಲೆ

ರಾಜಸ್ಥಾನ ತಂಡದ ಚಹಲ್‌ ಟಿ20 ಕ್ರಿಕೆಟ್‌ನಲ್ಲಿ 350 ವಿಕೆಟ್‌ ಪೂರ್ಣಗೊಳಿಸಿದರು. ಅವರು ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್‌. ಒಟ್ಟಾರೆ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಚಹಲ್‌ 11ನೇ ಸ್ಥಾನದಲ್ಲಿದ್ದಾರೆ.

200 ಸಿಕ್ಸರ್‌: ಸಂಜು ಸ್ಯಾಮ್ಸನ್‌ ಐಪಿಎಲ್‌ನಲ್ಲಿ 200 ಸಿಕ್ಸರ್‌ ಸಿಡಿಸಿದರು. ಈ ಸಾಧನೆ ಮಾಡಿದ 10ನೇ ಬ್ಯಾಟರ್‌.

01ನೇ ಬ್ಯಾಟರ್‌: ಐಪಿಎಲ್‌ನಲ್ಲಿ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ 3 ಬಾರಿ ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್‌ ಜೇಕ್‌ ಫ್ರೇಸರ್‌.

Latest Videos
Follow Us:
Download App:
  • android
  • ios