ಪಂಜಾಬ್ ಎದುರು ಆಕರ್ಷಕ ಅರ್ಧಶತಕ ಸಿಡಿಸಿದ ಫಾಫ್, ವಿರಾಟ್ಪಂದ್ಯ ಗೆಲ್ಲಲು ಪಂಜಾಬ್‌ಗೆ 175 ರನ್ ಗುರಿಮತ್ತೆ ಕೈಕೊಟ್ಟ ಆರ್‌ಸಿಬಿ ಮಧ್ಯಮ ಕ್ರಮಾಂಕ

ಮೊಹಾಲಿ(ಏ.20): ಆರಂಭಿಕ ಬ್ಯಾಟರ್‌ಗಳಾದ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದ್ದು, ಆತಿಥೇಯ ಪಂಜಾಬ್ ಕಿಂಗ್ಸ್‌ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್‌ ಶತಕದ ಜತೆಯಾಟವಾಡುವ ಮೂಲಕ ಭದ್ರಬುನಾದಿ ಹಾಕಿ ಕೊಟ್ಟರು. ಮೊದಲ ಎರಡು ಓವರ್‌ ಎಚ್ಚರಿಯಿಂದ ಆಡಿದ ಈ ಜೋಡಿ ಆ ಬಳಿಕ ಮೈದಾನಕ್ಕೆ ಹೊಂದಿಕೊಳ್ಳುತ್ತಿದ್ದಂತೆಯೇ ಸ್ಪೋಟಕ ಬ್ಯಾಟಿಂಗ್‌ಗೆ ಮೊರೆ ಹೋಯಿತು. ಪರಿಣಾಮ ಮೊದಲ ಪವರ್‌ ಪ್ಲೇನಲ್ಲಿ ಈ ಜೋಡಿ 59 ರನ್‌ಗಳ ಜತೆಯಾಟವಾಡಿತು.

Scroll to load tweet…

ಪವರ್‌ಪ್ಲೇ ಬಳಿಕವೂ ಆರ್‌ಸಿಬಿ ತಂಡವು ರನ್‌ ಗಳಿಕೆಯಲ್ಲಿ ಹಿಂದೆ ಬೀಳಲಿಲ್ಲ. ಮೊದಲ 10 ಓವರ್‌ಗಳಲ್ಲಿ ಆರ್‌ಸಿಬಿ 91 ರನ್‌ ಕಲೆಹಾಕಿತು. ಫಾಫ್ ಡು ಪ್ಲೆಸಿಸ್‌ ಕೇವಲ 31 ಎಸೆತಗಳನ್ನು ಎದುರಿಸಿ ಐಪಿಎಲ್ ವೃತ್ತಿಜೀವನದ 29ನೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇದಷ್ಟೇ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 300+ ರನ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಇನ್ನು ಫಾಫ್‌ಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ, ಟೂರ್ನಿಯಲ್ಲಿ 4ನೇ ಅರ್ಧಶತಕ ಸಿಡಿಸಿ ಮಿಂಚಿದರು. ವಿರಾಟ್ 40 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ವಿರಾಟ್ ಹಾಗೂ ಫಾಫ್ ಜೋಡಿ 97 ಎಸೆತಗಳನ್ನು ಎದುರಿಸಿ 137 ರನ್‌ಗಳ ಜತೆಯಾಟವಾಡಿತು.

IPL ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರನ್ನು ಹೆಸರಿಸಿದ ವಿರಾಟ್ ಕೊಹ್ಲಿ..! ಧೋನಿ, ರೋಹಿತ್ ಅಲ್ಲವೇ ಅಲ್ಲ

ದಿಢೀರ್ ವಿಕೆಟ್ ಕಳೆದುಕೊಂಡ ಆರ್‌ಸಿಬಿ: ಉತ್ತಮವಾಗಿ ಆಡುತ್ತಿದ್ದ ಫಾಫ್ ಹಾಗೂ ವಿರಾಟ್ ಜೋಡಿಯನ್ನು ಬೇರ್ಪಡಿಸುವಲ್ಲಿ ಹಪ್ರೀತ್ ಬ್ರಾರ್ ಯಶಸ್ವಿಯಾದರು. ವಿರಾಟ್ ಕೊಹ್ಲಿ 47 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 59 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮರು ಎಸೆತದಲ್ಲೇ ಗ್ಲೆನ್‌ ಮ್ಯಾಕ್ಸ್‌ವೆಲ್‌ ದೊಡ್ಡ ಹೊಡೆತಕ್ಕೆ ಯತ್ನಿಸಿ ಅಥರ್ವ ಟೈಡೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. 

ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಫಾಫ್ ಡು ಪ್ಲೆಸಿಸ್‌ 56 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 84 ರನ್‌ ಬಾರಿಸಿ ನೇಥನ್ ಎಲ್ಲಿಸ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಕೇವಲ 7 ರನ್‌ಗೆ ಸೀಮಿತವಾಯಿತು.