ಹೈದರಾಬಾದ್‌ನಲ್ಲಿಂದು ಸನ್‌ರೈಸರ್ಸ್‌ ಹೈದರಾಬಾದ್‌-ರಾಜಸ್ಥಾನ ರಾಯಲ್ಸ್‌ ಫೈಟ್ಟೂರ್ನಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿ ಉಭಯ ತಂಡಗಳುಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮುನ್ನಡೆಸಲಿರುವ ಭುವನೇಶ್ವರ್ ಕುಮಾರ್

ಹೈ​ದ​ರಾ​ಬಾ​ದ್‌(ಏ.02): ಕಳೆದ ಆವೃ​ತ್ತಿಯ ಅಭೂ​ತ​ಪೂರ್ವ ಪ್ರದರ್ಶನ ಮುಂದು​ವ​ರಿ​ಸುವ ನಿರೀ​ಕ್ಷೆ​ಯ​ಲ್ಲಿ​ರುವ ರಾಜ​ಸ್ಥಾನ ರಾಯಲ್ಸ್‌ ಭಾನು​ವಾರ ಸನ್‌​ರೈ​ಸ​ರ್ಸ್‌ ವಿರುದ್ಧ ಆಡುವ ಮೂಲಕ 16ನೇ ಆವೃತ್ತಿ ಐಪಿ​ಎ​ಲ್‌​ನಲ್ಲಿ ಅಭಿ​ಯಾನ ಆರಂಭಿ​ಸ​ಲಿದೆ. 

ಸಂಜು ಸ್ಯಾಮ್ಸನ್‌ ನಾಯ​ಕ​ತ್ವ​ದಲ್ಲಿ ಆಡ​ಲಿ​ರುವ ರಾಜ​ಸ್ಥಾ​ನಕ್ಕೆ ಕಳೆದ ಬಾರಿಯ ಪರ್ಪಲ್‌ ಕ್ಯಾಪ್‌ ವಿಜೇತ ಯುಜುವೇಂದ್ರ ಚಹಲ್‌, ಆರೆಂಜ್‌ ಕ್ಯಾಪ್‌ ವಿಜೇತ ಜೋಸ್ ಬಟ್ಲರ್‌ ಸೇರಿ​ದಂತೆ ತಜ್ಞ ಟಿ20 ಆಟ​ಗಾ​ರರ ಬಲ​ವಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡವು ಜೇಸನ್‌ ಹೋಲ್ಡರ್ ಅವರಂತದ ವೇಗದ ಬೌಲಿಂಗ್ ಆಲ್ರೌಂಡರ್ ಅವರನ್ನು ಹೊಂದಿದೆ. ಹೀಗಾಗಿ ಹೋಲ್ಡರ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿಯೂ ಬಳಸಿಕೊಳ್ಳಬಹುದು. 

ಇನ್ನೊಂದೆಡೆ ಸನ್‌​ರೈ​ಸರ್ಸ್‌ ಹೈದರಾಬಾದ್‌ ತಂಡಕ್ಕೆ ಮೊದಲ ಪಂದ್ಯದಲ್ಲಿ ನಾಯಕ ಏಯ್ಡನ್‌ ಮಾರ್ಕ್ರಮ್‌ ಸೇವೆ ಅಲಭ್ಯವಾಗಲಿದ್ದು, ಅನುಣವಿ ವೇಗಿ ಭುವನೇಶ್ವರ್‌ ಕುಮಾರ್‌ ತಂಡ ಮುನ್ನಡೆಸಲಿದ್ದಾರೆ. ಮಯಾಂಕ್‌ ಅಗರ್‌ವಾಲ್‌, ಗ್ಲೆನ್‌ ಫಿಲಿಫ್ಸ್‌, ಹ್ಯಾರಿ ಬ್ರೂಕ್‌ರಂತಹ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ತಂಡದಲ್ಲಿ ವೇಗಿಗಳೇ ದಂಡೇ ಇದೆ.

IPL 2023 ಡೆಲ್ಲಿಯ ಡಗೌ​ಟ್‌​ನಲ್ಲಿ ರಿಷಭ್‌ ಪಂತ್‌ ಜೆರ್ಸಿ! ಫೋಟೋ ವೈರಲ್

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಒಟ್ಟು 16 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಉಭಯ ತಂಡಗಳು ಸಮಾನ ಹೋರಾಟವನ್ನು ನಡೆಸಿವೆ. 16 ಪಂದ್ಯಗಳ ಪೈಕಿ ರಾಜಸ್ಥಾನ ರಾಯಲ್ಸ್ ತಂಡವು 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ರಾಜ​ಸ್ಥಾ​ನ ರಾಯಲ್ಸ್: ಯಶಸ್ವಿ ಜೈಸ್ವಾಲ್‌, ಜೋಶ್ ಬಟ್ಲರ್‌, ಸಂಜು ಸ್ಯಾಮ್ಸನ್‌ ​(​ನಾ​ಯ​ಕ), ದೇವ​ದ​ತ್‌ ಪಡಿಕ್ಕಲ್, ಶಿಮ್ರಾನ್ ಹೆಟ್ಮೇ​ಯರ್‌, ರಿಯಾನ್‌ ಪರಾಗ್, ಜೇಸನ್ ಹೋಲ್ಡರ್‌, ರವಿಚಂದ್ರನ್ ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಕುಲ್ದೀಪ್‌ ಸೇನ್‌, ಯುಜುವೇಂದ್ರ ಚಹ​ಲ್‌

ಸನ್‌ರೈಸರ್ಸ್‌ ಹೈದ್ರಾ​ಬಾ​ದ್‌: ಮಯಾಂಕ್‌ ಅಗರ್‌ವಾಲ್‌, ಅಭಿಷೇಕ್‌ ಸಿಂಗ್, ಹ್ಯಾರಿ ಬ್ರೂಕ್‌, ರಾಹುಲ್ ತ್ರಿಪಾಠಿ, ಅಬ್ದುಲ್ ಸಮದ್‌, ವಾಷಿಂಗ್ಟನ್‌ ಸುಂದರ್, ಗ್ಲೆನ್‌ ಫಿಲಿಫ್ಸ್‌, ಟಿ ನಟರಾಜನ್‌, ಅಕಿಲ್‌ ಹೊಸೈನ್‌, ಭುವನೇಶ್ವರ್‌ ಕುಮಾರ್(ನಾಯಕ), ಉಮ್ರಾನ್‌ ಮಲಿಕ್.

ಪಂದ್ಯ: ಮಧ್ಯಾಹ್ನ 3.30ರಿಂದ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣ 64 ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದು, 2ನೇ ಇನ್ನಿಂಗ್ಸಲ್ಲಿ ಬ್ಯಾಟ್‌ ಮಾಡುವ ತಂಡ ಹೆಚ್ಚು ಯಶಸ್ಸು ಕಂಡಿದೆ. ಇಲ್ಲಿ ಕಳೆದ 5 ಟಿ20 ಪಂದ್ಯದಲ್ಲಿ ಸರಾಸರಿ ಮೊದಲ ಇನ್ನಿಂಗ್‌್ಸ ಸ್ಕೋರ್‌ 183 ರನ್‌. ಬ್ಯಾಟರ್‌ಗಳಿಗೆ ಪಿಚ್‌ ಹೆಚ್ಚು ನೆರವು ಒದಗಿಸಲಿದೆ.