ರಿಷಬ್ ಪಂತ್ ಖುದ್ದು ಮೈದಾನಕ್ಕೆ ಆಗಮಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಚಿಯರ್ ಅಪ್ ಮಾಡಿದರೂ ಗೆಲುವು ಸಿಗಲಿಲ್ಲ. ಗುಜರಾತ್ ಟೈಟಾನ್ಸ್ ಅಲ್ರೌಂಡರ್ ಆಟಕ್ಕೆ ಡೆಲ್ಲಿ ಸೋಲಿಗೆ ಶರಣಾಗಿದೆ. ಇಷ್ಟೇ ಅಲ್ಲ 6 ವಿಕೆಟ್ ಗೆಲುವು ಸಾಧಿಸಿದೆ ಗುಜರಾತ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ದೆಹಲಿ(ಏ.04): ಐಪಿಎಲ್ 2023ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಸತತ 2ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಇತ್ತ ಡೆಲ್ಲಿ ಸತತ 2ನೇ ಸೋಲು ಕಂಡಿದೆ. ಇಂದಿನ ಪಂದ್ಯಕ್ಕೆ ಅಪಘಾತದಲ್ಲಿ ತೀವ್ರಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ನಾಯಕ ರಿಷಬ್ ಪಂತ್ ಖುದ್ದು ಮೈದಾನಕ್ಕೆ ಆಗಮಿಸಿದ್ದರು. ವಾಕಿಂಗ್ ಸ್ಟಿಕ್ ಹಿಡಿದು ನಿಧಾನವಾಗಿ ನಡೆದುಕೊಂಡು ಕ್ರೀಡಾಂಗಣಕ್ಕೆ ಆಗಮಿಸಿದ ಪಂತ್, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಡೆಲ್ಲಿ ತಂಡವನ್ನು ಹುರಿದುಂಬಿಸಿದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ಸಿಗಲಿಲ್ಲ. ಬ್ಯಾಟಿಂಗ್‌ನಲ್ಲಿ ದಿಟ್ಟ ಹೋರಾಟ ನೀಡಿದರೂ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. 163 ರನ್ ಟಾರ್ಗೆಟ್ ಪಡೆದ ಗುಜರಾತ್ ಟೈಟಾನ್ಸ್ ಅಡ್ಡಿ ಆತಂಕದ ನಡುವೆ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು.
ಚೇಸಿಂಗ್ ವೇಳೆ ಗುಜರಾತ್ ಟೈಟಾನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. 7 ಎಸೆತದಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 14 ರನ್ ಸಿಡಿಸಿದ್ದ ವೃದ್ಧಿಮಾನ್ ಸಾಹ ವಿಕೆಟ್ ಪತನ ಗುಜರಾತ್ ತಂಡಕ್ಕೆ ಆಘಾತ ನೀಡಿತು. ಇದರ ಬೆನ್ನಲ್ಲೇ ಶುಭಮನ್ ಗಿಲ್ 14 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಆಸರೆಯಾದರು. ಇತ್ತ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೇವಲ 5 ರನ್ ಸಿಡಿಸಿ ನಿರ್ಗಮಿಸಿದರು.
ಡೆಲ್ಲಿ-ಗುಜರಾತ್ ನಡುವಿನ ಪಂದ್ಯಕ್ಕೆ ರಿಷಬ್ ಪಂತ್ ಪ್ರತ್ಯಕ್ಷ, ವಾಕ್ ಸ್ಟಿಕ್ ಹಿಡಿದು ಕ್ರೀಡಾಂಗಣಕ್ಕೆ ಆಗಮನ!
ವಿಜಯ್ ಶಂಕರ್ ಹಾಗೂ ಸಾಯಿ ಸುದರ್ಶನ್ ಹೋರಾಟದಿಂದ ಗುಜರಾತ್ ಟೈಟಾನ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. ಅಷ್ಟರಲ್ಲೇ ವಿಜಯ್ ಶಂಕರ್ ವಿಕೆಟ್ ಪತನಗೊಂಡಿತು. ಶಂಕರ್ 29 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಸಾಯಿ ಸುದರ್ಶನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಡೇವಿಡ್ ಮಿಲ್ಲರ್ ಹಾಗೂ ಸಾಯಿ ಸುದರ್ಶನ್ ಜೊತೆಯಾಟದಿಂದ ಗುಜರಾತ್ ಟೈಟಾನ್ಸ್ ಗೆಲುವಿನ ಹಾದಿಯಲ್ಲಿ ಸಾಗಿತು.
ಸಾಯಿ ಸುದರ್ಶನ್ ಅಜೇಯ 62 ರನ್ ಸಿಡಿಸಿದರೆ, ಡೇವಿಡ್ ಮಿಲ್ಲರ್ ಅಜೇಯ 31 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ 18.1 ಓವರ್‌ಗಳಲ್ಲಿ 6 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.
