ಮುಂಬೈ vs ಚೆನ್ನೈ ಹೈವೋಲ್ಟೇಜ್‌ ಪಂದ್ಯಕ್ಕೆ ಕ್ಷಣಗಣನೆಧೋನಿ-ರೋಹಿತ್ ಪಡೆ ನಡುವಿನ ಪಂದ್ಯಕ್ಕೆ ವಾಂಖೇಡೆ ಮೈದಾನ ಆತಿಥ್ಯಐಪಿಎಲ್‌ನ ಎರಡು ಯಶಸ್ವಿ ತಂಡಗಳ ನಡುವೆ ಕಾದಾಟ

ಮುಂಬೈ(ಏ.08): ಐಪಿ​ಎಲ್‌ನ ಅತ್ಯಂತ ಯಶಸ್ವಿ ತಂಡಗಳಾದ 5 ಬಾರಿಯ ಚಾಂಪಿ​ಯನ್‌ ಮುಂಬೈ ಇಂಡಿ​ಯನ್ಸ್‌ ಹಾಗೂ 4 ಸಲ ಪ್ರಶಸ್ತಿ ವಿಜೇತ ಚೆನ್ನೈ ಸೂಪರ್‌ ಕಿಂಗ್ಸ್‌ ನಡು​ವಿನ ರೋಚಕ ಪೈಪೋ​ಟಿಗೆ ಶನಿ​ವಾರ ಮುಂಬೈನ ವಾಂಖೇಡೆ ಕ್ರೀಡಾಂಗಣ ಸಾಕ್ಷಿ​ಯಾ​ಗ​ಲಿದೆ. ಈ ಬಾರಿ ಸೋಲಿನೊಂದಿಗೆ ಎರಡೂ ತಂಡ​ಗಳು ಟೂರ್ನಿಗೆ ಕಾಲಿಟ್ಟಿದ್ದವು. ಆದರೆ ಚೆನ್ನೈ ತನ್ನ 2ನೇ ಪಂದ್ಯ​ದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಗೆಲುವು ಸಾಧಿ​ಸಿ, ಖಾತೆ ತೆರೆದಿದ್ದು ಜಯದ ಲಯ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ.

ಆರ್‌​ಸಿಬಿ ವಿರುದ್ಧ ಹೀನಾಯ ಸೋಲಿನ ಬಳಿಕ 5 ದಿನಗಳ ವಿಶ್ರಾಂತಿ ಪಡೆ​ದಿ​ರುವ ಮುಂಬೈ ಈ ಪಂದ್ಯ ಗೆದ್ದು ತವ​ರಿ​ನ ಅಭಿ​ಮಾ​ನಿ​ಗ​ಳಿಗೆ ಸಿಹಿ​ಯು​ಣಿ​ಸುವ ನಿರೀ​ಕ್ಷೆ​ಯ​ಲ್ಲಿದೆ. ರೋಹಿತ್‌ ಶರ್ಮಾ ಜೊತೆಗೆ ಸ್ಫೋಟಕ ಬ್ಯಾಟ​ರ್‌​ಗ​ಳಾದ ಸೂರ್ಯಕು​ಮಾರ್‌ ಯಾದವ್, ಇಶಾನ್‌ ಕಿಶನ್, ತಿಲಕ್‌ ವರ್ಮಾ, ಟಿಮ್‌ ಡೇವಿ​ಡ್‌​ ತಂಡದ ಪ್ರಮುಖ ಶಕ್ತಿ. ತಾರಾ ಆಲ್ರೌಂಡರ್‌ ಕ್ಯಾಮರೋನ್ ಗ್ರೀನ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ವೇಗಿ ಜೋಫ್ರಾ ಆರ್ಚರ್‌ ಜೊತೆ ಬೆಹ್ರ​ನ್‌​ಡ್ರಾಫ್‌, ಅರ್ಶದ್‌ ಖಾನ್‌ ಮೇಲೆ ಚೆನ್ನೈ ಬ್ಯಾಟ​ರ್‌​ಗ​ಳನ್ನು ಕಟ್ಟಿ​ ಹಾ​ಕ​ಬೇ​ಕಾದ ಹೊಣೆ​ಗಾರಿಕೆ ಇದೆ.

IPL 2023: ಹ್ಯಾಟ್ರಿಕ್ ಸೋಲಿನಿಂದ ಪಾರಾಗುತ್ತಾ ಡೆಲ್ಲಿ ಕ್ಯಾಪಿಟಲ್ಸ್‌?

ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ನಾಯ​ಕ​ತ್ವದ ಚೆನ್ನೈ ಋುತು​ರಾಜ್‌ ಗಾಯಕ್ವಾಡ್‌, ಡೆವೊನ್‌ ಕಾನ್‌ವೇ ಅವ​ರಂತಹ ಬ್ಯಾಟ​ರ್‌​ಗಳು, ಬೆನ್ ಸ್ಟೋಕ್ಸ್‌, ಮೋಯಿನ್ ಅಲಿ, ರವೀಂದ್ರ ಜಡೇಜಾರಂತಹ ತಾರಾ ಆಲ್ರೌಂಡ​ರ್‌​ಗ​ಳನ್ನು ಹೊಂದಿ​ದ್ದರೂ ಅನು​ಭವಿ ವೇಗಿ​ಗಳ ಕೊರತೆ ಅನು​ಭ​ವಿ​ಸು​ತ್ತಿದೆ. ಮಿಚೆಲ್ ಸ್ಯಾಂಟ್ನರ್‌ ಬದಲು ಸಿಸಾಂಡ ಮಗಾಲ ಕಣ​ಕ್ಕಿ​ಳಿ​ಯುವ ನಿರೀಕ್ಷೆ ಇದೆ.

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಒಟ್ಟು 34 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ ಎದುರು ಮುಂಬೈ ಸ್ಪಷ್ಟ ಮೇಲುಗೈ ಸಾಧಿಸಿದೆ. 34 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್‌ ತಂಡವು ಒಟ್ಟು 20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 14 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್‌: ಡೆವೊನ್‌ ಕಾನ್‌ವೇ, ಋತುರಾಜ್ ಗಾಯಕ್ವಾಡ್‌, ಮೋಯಿನ್ ಅಲಿ, ಬೆನ್‌ ಸ್ಟೋಕ್ಸ್‌, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ಶಿವಂ ದುಬೆ, ಮಿಚೆಲ್‌ ಸ್ಯಾಂಟ್ನರ್‌/ ಸಿಸಾಂಡ ಮಗಾ​ಲ, ದೀಪಕ್‌ ಚಹರ್‌, ಹಂಗ್ರೇಕರ್‌.

ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ(ನಾ​ಯ​ಕ​), ಇಶಾನ್‌ ಕಿಶನ್‌, ಕ್ಯಾಮರೋನ್ ಗ್ರೀನ್‌, ಸೂರ್ಯ​ಕು​ಮಾ​ರ್‌ ಯಾದವ್, ತಿಲಕ್‌ ವರ್ಮಾ, ಟಿಮ್ ಡೇವಿಡ್‌, ಶೊಕೀನ್‌, ಜೇಸನ್ ಬೆಹ್ರ​ನ್‌​ಡ್ರಾ​ಫ್‌, ಪೀಯೂಸ್ ಚಾವ್ಲಾ, ಜೋಫ್ರಾ ಆರ್ಚರ್‌, ಅರ್ಶ​ದ್‌ ಖಾನ್.

ಪಂದ್ಯ: ಸಂಜೆ 7.30ರಿಂದ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋ​ರ್ಚ್‌

ವಾಂಖೇಡೆ ಕ್ರೀಡಾಂಗ​ಣದ ಪಿಚ್‌ ಬ್ಯಾಟರ್‌​ಗ​ಳಿಗೆ ಹೆಚ್ಚಿನ ನೆರವು ನೀಡ​ಲಿದ್ದು, ದೊಡ್ಡ ಮೊತ್ತ ನಿರೀಕ್ಷಿಸಬಹುದು. ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.