16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 31ರಿಂದ ಆರಂಭಆರ್‌ಸಿಬಿ ಅಭ್ಯಾಸ ವೀಕ್ಷಿಸಲು ಟಿಕೆಟ್ ನಿಗದಿ ಪಡಿಸಿದ ಫ್ರಾಂಚೈಸಿಮಾರ್ಚ್ 26ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆಟಗಾರರ ಅಭ್ಯಾಸ
ಬೆಂಗಳೂರು(ಮಾ.18): 16ನೇ ಆವೃತ್ತಿಯ ಐಪಿಎಲ್ನ ತವರಿನ ಪಂದ್ಯಗಳ ವೀಕ್ಷಣೆಗೆ ದುಬಾರಿ ಟಿಕೆಟ್ಗಳನ್ನು ಮಾರಾಟಕ್ಕಿಟ್ಟಆರ್ಸಿಬಿ ತಂಡ ಮಾರ್ಚ್ 26ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆಟಗಾರರ ಅಭ್ಯಾಸ ವೀಕ್ಷಣೆಗೂ ಟಿಕೆಟ್ ನಿಗದಿಪಡಿಸಿದೆ.
ಆರ್‌ಸಿಬಿ ತವರಿನ ಮೊದಲ ಪಂದ್ಯವನ್ನು ಏಪ್ರಿಲ್ 2ಕ್ಕೆ ಮುಂಬೈ ವಿರುದ್ಧ ಆಡಲಿದ್ದು, ಮಾರ್ಚ್ 26ರಂದು ಎಲ್ಲಾ ಆಟಗಾರರು ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಇದಕ್ಕೆ ಟಿಕೆಟ್ ಇಟ್ಟಿರುವ ಫ್ರಾಂಚೈಸಿಯು ಕನಿಷ್ಠ 640 ರುಪಾಯಿನಿಂದ ಗರಿಷ್ಠ 7,500 ರುಪಾಯಿ ವರೆಗೆ ದರ ನಿಗದಿಪಡಿಸಿದೆ. ಟಿಕೆಟ್ಗಳು ಆರ್ಸಿಬಿಯ ಅಧಿಕೃತ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಲಭ್ಯವಿದೆ.
ಗೇಲ್, ಎಬಿಡಿಗೆ ಗೌರವ
ಆಟಗಾರರ ಅಭ್ಯಾಸದ ಜೊತೆಗೆ ದಿಗ್ಗಜ ಕ್ರಿಕೆಟಿಗರಾದ ವೆಸ್ಟ್ಇಂಡೀಸ್ನ ಕ್ರಿಸ್ ಗೇಲ್ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ರನ್ನು ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮವೂ ಇದೆ. ಅಲ್ಲದೇ ಸೋನು ನಿಗಮ್, ಜೇಸನ್ ಡೆರುಲೊ ಸೇರಿದಂತೆ ವಿವಿಧ ಬ್ಯಾಂಡ್ಗಳಿಂದ ಸಂಗೀತ ಕಾರ‍್ಯಕ್ರಮ ಆಯೋಜಿಸಲಾಗುತ್ತದೆ. ಸಂಜೆ 4ರಿಂದ ರಾತ್ರಿ 10ರ ವರೆಗೆ ಅಭ್ಯಾಸ, ಸಂಗೀತ, ಹಾಲ್ ಆಫ್ ಫೇಮ್‌ಗೆ ಸೇರ್ಪಡೆ ಕಾರ‍್ಯಕ್ರಮಗಳು ನಡೆಯಲಿವೆ ಎಂದು ಫ್ರಾಂಚೈಸಿಯು ತಿಳಿಸಿದೆ.
ಆರ್‌ಸಿಬಿ ಆಟಗಾರ ಜ್ಯಾಕ್ಸ್ ಐಪಿಎಲ್ನಿಂದ ಹೊರಕ್ಕೆ
ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿರುವ ಇಂಗ್ಲೆಂಡ್ ಬ್ಯಾಟರ್ ವಿಲ್ ಜ್ಯಾಕ್ಸ್ ಈ ಬಾರಿ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಇತ್ತೀಚೆಗೆ ನಡೆದ ಆಟಗಾರರ ಹರಾಜಿನಲ್ಲಿ 24 ವರ್ಷದ, ಟಿ20 ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್ ಹೊಂದಿರುವ ವಿಲ್ ಜ್ಯಾಕ್ಸ್ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ 3.2 ಕೋಟಿ ರು. ನೀಡಿ ಖರೀದಿಸಿತ್ತು. ಸದ್ಯ ಫ್ರಾಂಚೈಸಿಯು ನ್ಯೂಜಿಲೆಂಡ್ನ ಆಲ್ರೌಂಡರ್ ಮೈಕಲ್ ಬ್ರೇಸ್ವೆಲ್ ಜೊತೆ ಮಾತುಕತೆ ನಡೆಸುತ್ತಿದ್ದು, ತಂಡಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
16ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
WPL 2023: ಆರ್ಸಿಬಿಗೆ ಇಂದು ಡು ಆರ್ ಡೈ ಪಂದ್ಯ
ಮುಂಬೈ: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಪ್ಲೇ-ಆಫ್‌ಗೇರಲು ಹರಸಾಹಸ ಪಡುತ್ತಿರುವ ಆರ್‌ಸಿಬಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಶನಿವಾರ ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಾಡಲಿದೆ. ಮತ್ತೊಂದು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್-ಯು.ಪಿ.ವಾರಿಯರ್ಸ್ ಮುಖಾಮುಖಿಯಾಗಲಿದ್ದು, ಯು.ಪಿ. ಸೋಲಿಗೆ ಆರ್‌ಸಿಬಿ ಪ್ರಾರ್ಥಿಸುತ್ತಿದೆ.
ಈ ಸಲ ಐಪಿಎಲ್‌ನಲ್ಲಿ ಸ್ಟಾರ್ vs ಜಿಯೋ ಸಮರ..! ಟಿವಿ vs ಡಿಜಿಟಲ್: ಖರ್ಚೆಷ್ಟು?
ಆರ್‌ಸಿಬಿ ಹಾಗೂ ಗುಜರಾತ್ಗೆ ಈ ಪಂದ್ಯ ಮಹತ್ವದ್ದೆನಿಸಿದ್ದು, ಗೆಲ್ಲುವ ತಂಡ ನಾಕೌಟ್ ಕನಸನ್ನು ಜೀವಂತವಾಗಿಸಿಕೊಳ್ಳಲಿದೆ. ಸೋಲುವ ತಂಡದ ಪ್ಲೇ-ಆಫ್ ಬಾಗಿಲು ಬಂದ್ ಆಗಲಿದೆ. ಆರಂಭಿಕ 5 ಪಂದ್ಯ ಸೋತು ಕಳೆದ ಪಂದ್ಯ ಜಯಿಸಿದ ಆರ್‌ಸಿಬಿ 2 ಅಂಕಗಳೊಂದಿಗೆ ಕೊನೆ ಸ್ಥಾನದಲ್ಲಿದೆ. ಗುಜರಾತ್ 6 ಪಂದ್ಯದಲ್ಲಿ 2 ಜಯದೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಯುಪಿ ವಿರುದ್ಧ ಮುಂಬೈ ಗೆದ್ದರೆ ಆರ್ಸಿಬಿಯ ನಾಕೌಟ್ ಕನಸು ಜೀವಂತವಾಗಿರಲಿದ್ದು, ಗುಜರಾತ್ ವಿರುದ್ಧ ತಾನು ಗೆಲ್ಲುವುದರ ಜೊತೆಗೆ ಕೊನೆ ಪಂದ್ಯದಲ್ಲಿ ಮುಂಬೈಯನ್ನು ಸೋಲಿಸಬೇಕಿದೆ. ಆಗ ಇತರ ಕೆಲ ಫಲಿತಾಂಶಗಳು ತನ್ನ ಪರವಾಗಿ ಬಂದರೆ ಆರ್ಸಿಬಿಗೆ ಪ್ಲೇ-ಆಫ್ಗೇರುವ ಅವಕಾಶವಿದೆ.
ಪಂದ್ಯ:
ಮುಂಬೈ-ಯುಪಿ, ಮಧ್ಯಾಹ್ನ 3.30ಕ್ಕೆ
ಆರ್‌ಸಿಬಿ-ಗುಜರಾತ್ ಸಂಜೆ 7.30ಕ್ಕೆ
ಪ್ರಸಾರ: ಸ್ಪೋರ್ಟ್ಸ್ 18
