ಐಪಿಎಲ್ 2023 ಟೂರ್ನಿಗೆ ಅತ್ಯುತ್ತಮ ತಂಡ ರೆಡಿ ಮಾಡಲು 10 ಫ್ರಾಂಚೈಸಿ ತಯಾರಿ ಆರಂಭಿಸಿದೆ. ಈಗಾಗಲೇ ಕೆಲ ತಂಡಗಳು ಟ್ರೇಡಿಂಗ್ ಮೂಲಕ ಆಟಾಗರ ಖರೀದಿಸಿದೆ. ನಾಳೆ ತಂಡದಲ್ಲಿ ಉಳಿಯುವ ಆಟಗಾರರು ಯಾರು? ತಂಡದಿಂದ ಬಿಡುಗಡೆ ಮಾಡುವ ಆಟಾಗಾರರು ಯಾರು ಅನ್ನೋ ಪಟ್ಟಿ ಪ್ರಕಟಗೊಳ್ಳಲಿದೆ. ಇದೀಗ ಆರ್‌ಸಿಬಿಯಲ್ಲಿ ಯಾರು ಉಳಿಯುತ್ತಾರೆ? ಯಾರು ಹೊರಹೋಗುತ್ತಾರೆ ಅನ್ನೋ ಚರ್ಚೆ ಜೋರಾಗಿದೆ. ತಂಡದ ರೀಟೇನ್ ಹಾಗೂ ರಿಲೀಸ್ ಆಗಲಿರುವ ಸಂಭಾವ್ಯ ಪಟ್ಟಿ ಇಲ್ಲಿದೆ.
ಬೆಂಗಳೂರು(ನ.14); IPL 2023ರ ಹರಾಜಿಗೆ ಅಂತಿಮ ತಯಾರಿಗಳು ನಡೆಯುತ್ತಿದೆ. ನ.15ಕ್ಕೆ 10 ತಂಡಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಬೇಕಿದೆ. ಇಷ್ಟೇ ಅಲ್ಲ ಟ್ರೇಡಿಂಗ್ ಮೂಲಕ ಆಟಗಾರರ ಖರೀದಿಗೂ ನಾಳೆ ಅಂತಿಮ ದಿನವಾಗಿದೆ. ಹೀಗಾಗಿ ನಾಳೆ ತಂಡದಲ್ಲಿ ಯಾರಿದ್ದಾರೆ, ಯಾರು ಹೊರಹೋಗಿದ್ದಾರೆ ಅನ್ನೋ ಅಧಿಕೃತಪಟ್ಟಿ ಸಿಗಲಿದೆ. ಆದರೆ ಈಗಾಗಲೇ ತಂಡದಿಂದ ಕೊಕ್ ನೀಡುವ ಕೆಲ ಆಟಗಾರರ ಮಾಹಿತಿ ಹೊರಬಿದ್ದಿದೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಟ್ಟಿ ತೀವ್ರ ಚರ್ಚೆಯಾಗುತ್ತಿದೆ. ಆರ್‌ಸಿಬಿ ತಂಡದಿಂದ ಟ್ರೇಡ್ ಮೂಲಕ ಈಗಾಗಲೇ ಜೇಸನ್ ಬೆಹ್ರೆನ್‌ಡ್ರಾಫ್ ಮುಂಬೈ ಇಂಡಿಯನ್ಸ್ ಸೇರಿಕೊಂಡಿದ್ದಾರೆ. ಇನ್ನುಳಿದಿರುವ ಆಟಗಾರರಲ್ಲಿ ತಂಡದಲ್ಲಿ ಉಳಿಯುವ ಹಾಗೂ ತಂಡ ಕೈಬಿಡಲಿರುವ ಆಟಗಾರರ ಸಂಭವನೀಯ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ತಂಡದಲ್ಲಿ ಉಳಿಯುವ ಸಂಭವನೀಯ ಆಟಗಾರರ ಪಟ್ಟಿ
ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಫಾಫ್ ಡುಪ್ಲೆಸಿಸ್, ವಾನಿಂಡು ಹಸರಂಗ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಫಿನ್ ಅಲೆನ್, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹಮ್ಮದ್, ಮಹಿಪಾಲ್ ಲೊಮ್ರೊರ್, ಅನೂಜ್ ರಾವತ್, ಸೂಯಾಂಶ್ ಪ್ರಭುದೇಸಾಯಿ,
ತಂಡದಿಂದ ಕೈಬಿಡಲಿರುವ ಸಂಭವನೀಯ ಆಟಗಾರರ ಪಟ್ಟಿ
IPL 2023 ನ.15ಕ್ಕೆ 10 ಫ್ರಾಂಚೈಸಿಯಿಂದ ರಿಲೀಸ್, ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ!...
ತಂಡದಿಂದ ಕೈಬಿಡಲಿರುವ ಸಂಭವನೀಯ ಆಟಗಾರರ ಪಟ್ಟಿ
ಶೆರ್ಫಾನೆ ರುದರ್ಫೋರ್ಡ್, ಸಿದ್ದಾರ್ಥ್ ಕೌಲ್, ಕರಣ್ ಶರ್ಮಾ, ಡೇವಿಡ್ ವಿಲೆ, ಆಕಾಶ್ ದೀಪ್
ಟ್ರೇಡಿಂಗ್:
ಆರ್‌ಸಿಬಿ ತಂಡದಿಂದ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡ ಜೇಸನ್ ಬೆಹ್ರೆನ್‌ಡ್ರಾಫ್
IPL 2023 ಟ್ರೇಡ್ ಮೂಲಕ ಆರ್‌ಸಿಬಿ ವೇಗಿ ಖರೀದಿಸಿದ ಮುಂಬೈ ಇಂಡಿಯನ್ಸ್!
ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್-2ರಲ್ಲಿ(IPL 2022) ಮುಗ್ಗರಿಸಿತ್ತು. ಕ್ವಾಲಿಫೈಯರ್-2 ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತ ಆರ್‌ಸಿಬಿ, 15ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿತ್ತು. ಬಳಿಕ ನಾಯಕ ಫಾಫ್ ಡುಪ್ಲೆಸಿಸ್(Faf Du plessis) ಅಭಿಮಾನಿಗಳಿಗೆ ಭರವಸೆ ನೀಡಿದ್ದರು.. ‘ಆರ್‌ಸಿಬಿ ಜೊತೆಗಿನ ಮೊದಲ ಆವೃತ್ತಿಯ ಪಯಣ ಅದ್ಭುತವಾಗಿತ್ತು. ತಂಡದ ಭಾಗವಾಗಿರುವುದಕ್ಕೆ ತುಂಬಾ ಹೆಮ್ಮೆ ಅನಿಸುತ್ತಿದೆ. ಎಲ್ಲೇ ಹೋದರೂ ಅಭಿಮಾನಿಗಳು ತೋರಿಸುತ್ತಿದ್ದ ಪ್ರೀತಿ, ಅಭಿಮಾನ ವಿಶೇಷವಾದದ್ದು. ತಂಡದ ಜೊತೆಗಿನ ಪಯಣವನ್ನು ಅವಿಸ್ಮರಣೀಯಗೊಳಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಕಾಲ ಇರಲಿ’ ಎಂದು ತಿಳಿಸಿದ್ದಾರೆ. ಮುಂದಿನ ಬಾರಿ ಮುಂದಿನ ವರ್ಷ ಮತ್ತಷ್ಟುಉತ್ಸಾಹ, ಹೊಸ ಗುರಿಯೊಂದಿಗೆ ಮರಳುತ್ತೇವೆ ಎಂದಿದ್ದರು.
ಎಬಿಡಿ ಆರ್‌ಸಿಬಿ ಕೋಚ್?
ದಿಗ್ಗಜ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್(AB Devillers) ಆರ್‌ಸಿಬಿ ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಗುರುವಾರ ಬೆಂಗಳೂರಿಗೆ ಆಗಮಿಸಿದರು. ವಿಲಿಯರ್ಸ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಡಿಯೋವನ್ನು ಆರ್‌ಸಿಬಿ ತನ್ನ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ‘ಮುಂದಿನ ವರ್ಷದ ಐಪಿಎಲ್ ಬಗ್ಗೆ ಮಾತನಾಡಲು ಬೆಂಗಳೂರಿಗೆ ಆಗಮಿಸಿದ್ದೇನೆ’ ಎಂದು ವಿಲಿಯರ್ಸ್ ಹೇಳಿದ್ದಾರೆ. ಅವರು ತಂಡದ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
