ಅದೆಷ್ಟೇ ಸೋಲನ್ನು ಸಹಿಸಿಕೊಳ್ಳುವ ಆರ್‌ಸಿಬಿ, ಸಿಎಸ‌್‌ಕೆ ವಿರುದ್ಧದ ಸೋಲು ಅರಗಿಸಿಕೊಳ್ಳಲು ಕಷ್ಟ. ಈ ಮಹತ್ವದ ಹೋರಾಟದಲ್ಲಿ ಆರ್‌ಸಿಬಿಗೆ ಹಿನ್ನಡೆಯಾಗಿದೆ. ಆದರೆ ಪಂದ್ಯದ ಬಳಿಕ ಸಿಎಸ್‌ಕೆ ನಾಯಕ ಧೋನಿ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರು(ಏ.18): ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ಕುತೂಹಲ, ಅತೀ ಹೆಚ್ಚು ರೋಚಕತೆ, ಅತೀ ಹೆಚ್ಚು ಕಿಚ್ಚು ಹಚ್ಚುವ ಪಂದ್ಯ ಆರ್‌ಸಿಬಿ vs ಸಿಎಸ್‌ಕೆ. ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ರನ್‌ಗಳಿಂದ ಸೋಲು ಕಂಡಿತು. ಈ ಸೋಲು ಅಭಿಮಾನಿಗಳಿಗೆ ಮಾತ್ರವಲ್ಲ ಆರ್‌ಸಿಬಿ ತಂಡಕ್ಕೂ ಅರಗಿಸಿಕೊಳ್ಳಲು ಕಷ್ಟ. ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ, ಮಹತ್ವದ ಹೇಳಿಕೆ ನೀಡಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಕ್ರೀಸ್‌ನಲ್ಲಿದ್ದರೆ, ಇನ್ನೂ ಕೆಲ ಓವರ್ ಬಾಕಿ ಇರುವಂತೆ ಪಂದ್ಯ ಮುಗಿಸುತ್ತಿದ್ದರು ಎಂದು ಧೋನಿ ಹೇಳಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಜೊತೆಯಾಟದಿಂದ ಪಂದ್ಯ ಸಂಪೂರ್ಣವಾಗಿ ಆರ್‌ಸಿಬಿ ತೆಗ್ಗೆಗೆ ವಾಲಿತ್ತು. ಇವರ ಅಬ್ಬರ ಮುದುವರಿದಿದ್ದರೆ, ಸಿಎಸ್‌ಕೆಗೆ ಸೋಲು ಖಚವಾಗುತ್ತಿತ್ತು. ಇಷ್ಟೇ ಅಲ್ಲ ಕೆಲ 18ನೇ ಓವರ್ ವೇಳೆ ಪಂದ್ಯ ಮುಗಿಸುತ್ತಿದ್ದರು ಎಂದು ಧೋನಿ ಹೇಳಿದ್ದಾರೆ. ಇವರಿಬ್ಬರ ವಿಕೆಟ್ ಕಬಳಿಸಲು ಕೆಲ ಪ್ರಯತ್ನಗಳನ್ನು ಮಾಡಿ ಯಶಸ್ವಿಯಾದೆವು. ಇದರಿಂದ ಪಂದ್ಯದಲ್ಲಿ ಹಿಡಿತ ಸಾಧಿಸಿದೆವು. ಗೆಲುವಿನ ಸಿಹಿ ಕಂಡಿದ್ದೇವೆ ಎಂದು ಧೋನಿ ಹೇಳಿದ್ದಾರೆ.
RCB VS CSK: ಖುಷಿ ಪಡಿ, ವಿಶಲ್ ಹೊಡಿ, ಆದ್ರೆ ರೇಗಿಸೋಕೆ ಬರಬೇಡಿ; CSK ಫ್ಯಾನ್ಸ್‌ಗೆ ಸಿಂಪಲ್ ಸುನಿ ತಿರುಗೇಟು
227 ರನ್ ಚೇಸಿಂಗ್ ವೇಳೆ ಫಾಫ್ ಡುಪ್ಲೆಸಿಸ್ 33 ಎಸೆತದಲ್ಲಿ 62 ರನ್ ಸಿಡಿಸಿದ್ದರು. ಇತ್ತ ಗ್ಲೆನ್ ಮ್ಯಾಕ್ಸ್‌ವೆಲ್ 36 ಎಸೆತದಲ್ಲಿ 76 ರನ್ ಸಿಡಿಸಿದರು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದ ಆರ್‌ಸಿಬಿ ಸುಲಭವಾಗಿ ಪಂದ್ಯ ಗೆಲ್ಲುವ ಲೆಕ್ಕಾಚಾರದಲ್ಲಿತ್ತು. ಆದರೆ ಒಂದೇ ಸಮನೆ ವಿಕೆಟ್ ಪತನ. ಆರ್‌ಸಿಬಿ ತಂಡವನ್ನು ಕಟ್ಟಿಹಾಕಿತು.
227 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲೇ ಎಡವಿತು. ಎಡಗೈ ವೇಗಿ ಆಕಾಶ್ ಸಿಂಗ್ ಎಸೆತವೊಂದು ಕೊಹ್ಲಿಯ ಬ್ಯಾಟು, ಕಾಲಿಗೆ ತಗುಲಿ ಉರುಳುತ್ತಾ ವಿಕೆಟ್‌ಗೆ ಬಡಿಯಿತು. 6 ರನ್ ಗಳಿಸಿ ಔಟಾದ ಕೊಹ್ಲಿ ಸ್ಥಾನಕ್ಕೆ ಬಂದ ಲೋಮ್ರೋರ್‌ಗೆ ತೀಕ್ಷಣ ಜೀವದಾನ ನೀಡಿದರೂ, ಅದೇ ಓವರಲ್ಲಿ ತುಷಾರ್ ದೇಶಪಾಂಡೆ ಎಸೆತವನ್ನು ಋುತುರಾಜ್‌ಗೆ ಕ್ಯಾಚಿತ್ತರು. ನಂತರ ಬಂದ ಮ್ಯಾಕ್ಸ್‌ವೆಲ್, ಡು ಪ್ಲೆಸಿ ಜತೆಗೂಡಿ ಆರ್‌ಸಿಬಿ ಇನಿಂಗ್‌್ಸ ದಿಕ್ಕನ್ನೇ ಬದಲಿಸಿದರು. ಇಬ್ಬರೂ ಸೇರಿ 10.1 ಓವರಲ್ಲಿ 126 ರನ್ ಸೇರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಮ್ಯಾಕ್ಸ್‌ವೆಲ್ 36 ಎಸೆತದಲ್ಲಿ 76 ರನ್ ಗಳಿಸಿದ್ದಾಗ ತೀಕ್ಷಣ ಎಸೆತವೊಂದನ್ನು ಸಿಕ್ಸರಿಗೆತ್ತಲು ಹೊಡೆದಾಗ ಚೆಂಡು ಮೇಲಕ್ಕೆ ಚಿಮ್ಮಿ ಸುರಕ್ಷಿತವಾಗಿ ಧೋನಿ ಕೈಸೇರಿತು. ಮೊಯಿನ್ ಅಲಿ ಎಸೆದ 14ನೇ ಓವರಿನಲ್ಲಿ ಡು ಪ್ಲೆಸಿ ಧೋನಿಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 28 ರನ್ ಗಳಿಸಿದ್ದಾಗ ದೇಶಪಾಂಡೆಗೆ ಬಲಿಯಾದರು. ಅದರೊಂದಿಗೆ ಆರ್‌ಸಿಬಿ ಗೆಲುವಿನ ಆಸೆ ಕಮರಿತು. ಶಾಬಾಜ್, ಪಾರ್ನೆಲ್ ಸ್ಕೋರರ್‌ಗಳಿಗೆ ಹೆಚ್ಚು ತೊಂದರೆ ಕೊಡಲಿಲ್ಲ. 12 ಎಸೆತಗಳಲ್ಲಿ 31 ರನ್ ಬೇಕಿದ್ದ ಸನ್ನಿವೇಶದಲ್ಲಿ ಪ್ರಭುದೇಸಾಯಿ ಒಂದೆರಡು ಸಿಕ್ಸರ್ ಸಿಡಿಸಿದರಾದರೂ ಅದು ಆರ್‌ಸಿಬಿಯನ್ನು ಗೆಲುವಿನ ದಡ ತಲುಪಿಸಲಿಲ್ಲ. ಹಲವು ಕ್ಯಾಚ್ ಕೈಚೆಲ್ಲಿದರೂ ಗೆಲುವನ್ನು ಒಲಿಸಿಕೊಂಡ ಸಿಎಸ್‌ಕೆ ಪರ ದೇಶಪಾಂಡೆ 3, ಪತಿರನ 2 ವಿಕೆಟ್ ಗಳಿಸಿದರು.
ಕೊಹ್ಲಿ ಬೇಗನೆ ಔಟಾದರೂ ಸಿಡಿದ ಮ್ಯಾಕ್ಸ್‌ವೆಲ್, ಡುಪ್ಲೆಸಿ ನಿರ್ಗಮನದ ನಂತರ 14 ಎಸೆತಗಳಲ್ಲಿ 28 ರನ್ ಗಳಿಸಿ ಫಿನಿಷರ್ ಪಾತ್ರ ನಿರ್ವಹಿಸುತ್ತಿದ್ದ ದಿನೇಶ್ ಕಾರ್ತಿಕ್ 17ನೇ ಓವರಿನಲ್ಲಿ ದೇಶಪಾಂಡೆಗೆ ಬಲಿಯಾದುದು ಸಮಬಲವಾಗಿ ಸಾಗುತ್ತಿದ್ದ ಪಂದ್ಯದ ದಿಕ್ಕನ್ನೇ ಬದಲಾಯಿಸಿ ಸಿಎಸ್‌ಕೆ ಪರ ವಾಲಿಸಿತು.
