IPL 2023 ಸಾಕಾಗಲಿಲ್ಲ ವಾರ್ನರ್ ಹೋರಾಟ, ಲಖನೌ ವಿರುದ್ಧ ಮುಗ್ಗರಿಸಿದ ಡೆಲ್ಲಿ ಕ್ಯಾಪಿಟಲ್ಸ್!
ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ 2023ರ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವಿನ ಸಂಭ್ರಮ ಆಚರಿಸಿದೆ. ಲಖನೌ ಹೋರಾಟಕ್ಕೆ ಡೆಲ್ಲಿ ತತ್ತರಿಸಿದೆ.

ಲಖನೌ(ಏ.01): ನಾಯಕ ಡೇವಿಡ್ ವಾರ್ನರ್ ದಿಟ್ಟ ಹೋರಾಟ, ರಿಲೆ ರೋಸೊ ನೀಡಿದ ಸಾಥ್ ಲಖನೌ ಸೂಪರ್ ಜೈಂಟ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. ಮಾರ್ಕ್ ವುಡ್ ಹಾಗೂ ರವಿ ಬಿಶ್ನೋಯ್ ದಾಳಿ, ಇತರ ಬೌಲರ್ಸ್‌ಗಳ ಆಕ್ರಮಣಕಾರಿ ಆಟಕ್ಕೆ ಡೆಲ್ಲಿ ತಲೆಬಾಗಿತು. 2023ರ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಲಖನೌ ಸೂಪರ್ ಜೈಂಟ್ಸ್ 50 ರನ್ ಗೆಲುವು ದಾಖಲಿಸಿತು. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
194 ರನ್ ಟಾರ್ಗೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ ಜೊತೆಯಾಟ ಚೇಸಿಂಗ್ ಸುಳಿವು ನೀಡಿತು. ಆದರೆ ಪೃಥ್ವಿ ಶಾ ಕೇವಲ 12 ರನ್ ಸಿಡಿಸಿ ನಿರ್ಗಮಿಸಿದರು. ಅದ್ಭುತ ಫಾರ್ಮ್‌ನಲ್ಲಿರುವ ಮಿಚೆಲ್ ಮಾರ್ಶ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಮಾರ್ಷ್ ಡಕೌಟ್ ಆದರು. ಮಾರ್ಷ್ ವಿಕೆಟ್ ಪತನ ನಾಯಕ ಡೇವಿಡ್ ವಾರ್ನರ್ ಆತಂಕ ಹೆಚ್ಚಿಸಿತು. ಹೀಗಾಗಿ ವಿಕೆಟ್ ಉಳಿಸಿಕೊಂಡು ರನ್ ಗಳಿಸುವ ತಂತ್ರಕ್ಕೆ ವಾರ್ನರ್ ಕೈಹಾಕಿದರು. ಇದರ ಪರಿಣಾಮ ವಾರ್ನರ್ ರನ್ ಗಳಿಕೆ ವೇಗಕ್ಕೆ ಕಡಿವಾಣ ಬಿತ್ತು.
ಈ ಸಲ ಕಪ್ ನಹಿ, ಪಂದ್ಯಕ್ಕೂ ಮೊದಲೇ ಡುಪ್ಲಿಸಿಸ್ ಹೇಳಿಕೆಗೆ ಅಭಿಮಾನಿಗಳು ಶಾಕ್, ನಕ್ಕು ನೀರಾದ ಕೊಹ್ಲಿ!
ವಾರ್ನರ್ ದಿಟ್ಟ ಹೋರಾಟ ನೀಡಿದರೆ, ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಇತ್ತ ವಾರ್ನರ್ ಅಬ್ಬರಿಸಲು ಆಗದೇ ಚಡಪಡಿಸಿದರು. ಸರ್ಫರಾಜ್ ಖಾನ್ ಕೇವಲ 4 ರನ್ ಸಡಿಸಿದರು. ರಿಲೇ ರೂಸೋ ಬ್ಯಾಟಿಂಗ್ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. ವಾರ್ನರ್ ಹಾಫ್ ಸೆಂಚುರಿ ಸಿಡಿಸಿದರು. ಆದರೆ ರೊಸೋ 30 ರನ್ ಸಿಡಿಸಿ ಔಟಾದರು.
ರೋವ್ಮನ್ ಪೊವೆಲ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಅಮನ್ ಹಕೀಮ್ ಖಾನ್ 4 ರನ್ ಸಿಡಿಸಿ ಔಟಾದರು. ಇತ್ತ ಏಕಾಂಗಿ ಹೋರಾಟ ನೀಡಿದ ಡೇವಿಡ್ ವಾರ್ನರ್ 56 ರನ್ ಸಿಡಿಸಿ ಔಟಾದರು. ಸತತ ವಿಕೆಟ್ ಪತನದಿಂದ ಎಚ್ಚರಿಕೆ ಆಟವಾಡಿದ ವಾರ್ನರ್ ಸ್ಟ್ರೈಕ್ ರೇಟ್ 116.67 ಮಾತ್ರ. ವಾರ್ನರ್ ವಿಕೆಟ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೋಲು ಖಚಿತಪಡಿಸಿತು.
IPL 2023 ಎರಡನೇ ಪಂದ್ಯ ಮಳೆಗೆ ಆಹುತಿ, DLS ಮೂಲಕ ಕೆಕೆಆರ್ ವಿರುದ್ಧ ಪಂಜಾಬ್‌ಗೆ 7 ರನ್ ಗೆಲುವು!
ಅಂತಿಮ ಹಂತದಲ್ಲಿ ಅಕ್ಸರ್ ಪಟೇಲ್ ಹೋರಾಟ ನೀಡಿದರು. ಅಷ್ಟರೊಳಗೆ ಲಖನೌ ಸೂಪರ್ ಜೈಂಟ್ಸ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಅಂತಿಮ ಓವರ್‌ನ 6 ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲವಿಗೆ 55 ರನ್ ಅವಶ್ಯಕತೆ ಇತ್ತು. ಅಕ್ಸರ್ ಪಟೇಲ್ 16 ರನ್ ಸಿಡಿಸಿ ಔಟಾದರು. ಚೇತನ್ ಸಕಾರಿಯಾ ಹಾಗೂ ಮುಕೇಶ್ ಕುಮಾರ್ ವಿಕೆಟ್ ಪತನಗೊಂಡಿತು. ಮಾರ್ಕ್ ವುಡ್ 5 ವಿಕೆಟ್ ಕಬಳಿಸಿ ಮಿಂಚಿದರು.ಇತ್ತ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ನಷ್ಟಕ್ಕೆ 143 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.