Asianet Suvarna News Asianet Suvarna News

IPL 2023: ಗ್ಲೆನ್‌ ಮ್ಯಾಕ್ಸ್‌​ವೆ​ಲ್‌ ಆರ್‌​ಸಿ​ಬಿ​ಯ ಕೆಲ ಪಂದ್ಯಗಳಿಗೆ ಡೌಟ್‌?

16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 31ರಿಂದ ಆರಂಭ
ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಗ್ಲೆನ್‌ ಮ್ಯಾಕ್ಸ್‌
ಆರ್‌ಸಿಬಿ ತಂಡದ ಆರಂಭಿಕ ಪಂದ್ಯಗಳಿಗೆ ಮ್ಯಾಕ್ಸಿ ಅಲಭ್ಯ ಸಾಧ್ಯತೆ

IPL 2023 Leg okay but Glenn Maxwell not yet 100 per cent fit likely to miss first few matches kvn
Author
First Published Mar 26, 2023, 11:29 AM IST

ಬೆಂಗ​ಳೂ​ರು(ಮಾ.26): ಮೊಣ​ಕಾ​ಲಿನ ಗಾಯ​ದಿಂದ ಇನ್ನಷ್ಟೇ ಸಂಪೂ​ರ್ಣ​ ಚೇತ​ರಿ​ಸಿ​ಕೊ​ಳ್ಳ​ಬೇ​ಕಿ​ರುವ ಆಸ್ಪ್ರೇ​ಲಿ​ಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌​ವೆಲ್‌ರ ಸೇವೆ ಈ ಬಾರಿ ಐಪಿ​ಎ​ಲ್‌​ನ​ಲ್ಲಿ ಆರ್‌​ಸಿಬಿಗೆ ಸಂಪೂ​ರ್ಣ​ವಾಗಿ ಲಭ್ಯ​ವಾ​ಗು​ವುದು ಅನು​ಮಾ​ನ​ವೆ​ನಿ​ಸಿದೆ. ಆರ್‌​ಸಿ​ಬಿಯ ವಿಡಿ​ಯೋ​ದಲ್ಲಿ ತಮ್ಮ ಗಾಯದ ಪ್ರಮಾಣದ ಬಗ್ಗೆ ಮಾಹಿತಿ ನೀಡಿ​ರುವ ಮ್ಯಾಕ್ಸ್‌​ವೆಲ್‌, ‘ಸಂಪೂರ್ಣ ಫಿಟ್‌ ಆಗಲು ತಿಂಗ​ಳು​ಗಳು ಬೇಕಾ​ಗ​ಬ​ಹುದು. ಆದರೆ ಟೂರ್ನಿ​ಯಲ್ಲಿ ಆಡಲು ತೊಂದ​ರೆ​ಯಿ​ಲ್ಲ’ ಎಂದಿ​ದ್ದಾರೆ. 

ಈಗಾ​ಗಲೇ ಅವರು ತಂಡ ಸೇರಿ​ಕೊಂಡಿ​ದ್ದರೂ ಟೂರ್ನಿಯ ಆರಂಭಿಕ ಕೆಲ ಪಂದ್ಯ​ಗ​ಳಿಗೆ ಗೈರಾ​ಗ​ಬ​ಹುದು ಎಂದು ಹೇಳ​ಲಾ​ಗು​ತ್ತಿ​ದೆ. ಟಿ20 ವಿಶ್ವ​ಕಪ್‌ ಬಳಿಕ ಕಾಲಿನ ಗಾಯಕ್ಕೆ ತುತ್ತಾ​ಗಿ​ರುವ ಮ್ಯಾಕ್ಸ್‌​ವೆಲ್‌ ಇತ್ತೀ​ಚೆ​ಗಷ್ಟೇ ಸ್ಪರ್ಧಾ​ತ್ಮಕ ಕ್ರಿಕೆ​ಟ್‌ಗೆ ಮರ​ಳಿ​ದ್ದರು. ಆದರೆ ಭಾರತ ವಿರುದ್ಧ ಮೊದಲ ಏಕ​ದಿನ ಪಂದ್ಯ​ವಾ​ಡಿದ ಬಳಿಕ ಮತ್ತೆ​ರಡು ಪಂದ್ಯ​ದಿಂದ ಹೊರ​ಗು​ಳಿ​ದಿ​ದ್ದರು.

ಕಳೆದ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಆಟಗಾರರ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು, ರೀಸೆ ಟೋಪ್ಲೆ, ವಿಲ್ ಜ್ಯಾಕ್ಸ್ ಅವರಂತಹ ತಾರಾ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸಿತ್ತು. ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ವಿಲ್ ಜ್ಯಾಕ್ಸ್‌, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ವಿಲ್ ಜ್ಯಾಕ್ಸ್ ಬದಲಿಗೆ ನ್ಯೂಜಿಲೆಂಡ್ ತಾರಾ ಆಲ್ರೌಂಡರ್‌ ಮಿಚೆಲ್ ಬ್ರೇಸ್‌ವೆಲ್‌ಗೆ ಆರ್‌ಸಿಬಿ ತಂಡದಲ್ಲಿ ಮಣೆಹಾಕಿದೆ. 

IPL 2023 'ಎಂಟರ್‌ಟೈನ್‌ಮೆಂಟ್ ಅಧಿಕೃತ ಆರಂಭ': ಆರ್‌ಸಿಬಿ ಕೂಡಿಕೊಂಡ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್‌..!

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಏಪ್ರಿಲ್ 02ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಐಪಿಎಲ್ ಅಭಿಯಾನವನ್ನು ಆರಂಭಿಸಲಿದೆ.

ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್‌ಗೇರುವಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮಹತ್ತರ ಪಾತ್ರವನ್ನು ನಿಭಾಯಿಸಿದ್ದಾರೆ. ಈ ಬಾರಿ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಟ್ರೋಫಿ ಬರವನ್ನು ನೀಗಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

16ನೇ ಆವೃತ್ತಿಯ ಐಪಿಎಲ್‌ಗೆ ಆರ್‌ಸಿಬಿ ತಂಡ ಹೀಗಿದೆ ನೋಡಿ:

ಫಾಫ್ ಡುಪ್ಲಸಿಸ್(ನಾಯಕ), ವಿರಾಟ್ ಕೊಹ್ಲಿ,  ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್, ಹರ್ಷಲ್ ಪಟೇಲ್, ವಾನಿಂಡು ಹಸರಂಗ, ದಿನೇಶ್ ಕಾರ್ತಿಕ್, ಶಹಬಾಜ್ ಅಹಮ್ಮದ್, ಅನೂಜ್ ರಾವತ್, ಅಕಾಶ್ ದೀಪ್, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಕರಣ್ ಶರ್ಮಾ, ಸಿದ್ದಾರ್ಥ್ ಕೌಲ್, ಡೇವಿಡ್ ವಿಲೆ, ರಜತ್ ಪಾಟಿದಾರ್, ಮಿಚೆಲ್ ಬ್ರೇಸ್‌ವೆಲ್, ರೀಸ್ ಟಾಪ್ಲೆ,  ಹಿಮಾಂಶು ಶರ್ಮಾ, ಮನೋಜ್ ಬಾಂಡಗೆ, ರಾಜನ್ ಕುಮಾರ್, ಸೋನು ಯಾದವ್, ಅವಿನಾಶ್ ಸಿಂಗ್,

Follow Us:
Download App:
  • android
  • ios