ಗುಜರಾತ್ ಟೈಟಾನ್ಸ್ ಎದುರು ರೋಚಕ ಗೆಲುವು ದಾಖಲಿಸಿದ ಕೆಕೆಆರ್‌ಕೆಕೆಆರ್‌ ಪರ ಸತತ 5 ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದಿತ್ತ ರಿಂಕು ಸಿಂಗ್ರಿಂಕು ಸಿಂಗ್-ಯಶ್ ದಯಾಳ್ ನಡುವಿನ ಹಳೆಯ ಚಾಟ್ ವೈರಲ್

- ಆತ್ಮ ವೈ ಆನಂದ್‌, ಮೈಸೂರಿನ ಮಹಾಜನ ಕಾಲೇಜ್‌ ಪತ್ರಿಕೋದ್ಯಮ ವಿದ್ಯಾರ್ಥಿ

ಹೈದರಾಬಾದ್(ಏ.10) ಗುಜರಾತ್ ಟೈಟಾನ್ಸ್‌ನ ವೇಗಿ ಯಶ್ ದಯಾಳ್ ಎಸೆದ ಅಂತಿಮ ಓವರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಬ್ಯಾಟರ್ ರಿಂಕು ಸಿಂಗ್ ಸತತ 5 ಸಿಕ್ಸರ್‌ಗಳನ್ನು ಸಿಡಿಸಿದ ನಂತರ ಅವರಿಬ್ಬರ ನಡುವಿನ ಹಳೆಯ ಚಾಟ್ ಒಂದು ವೈರಲ್ ಆಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 16ನೇ ಆವ್ರುತ್ತಿಯಲ್ಲಿ ಭಾನುವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್(KKR} ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್(GT) ವಿರುದ್ಧದ ಪಂದ್ಯದಲ್ಲಿ ನಿತೀಶ್ ರಾಣಾ ಪಡೆ 3 ವಿಕೆಟ್ ಅದ್ಭುತ ಜಯ ಸಾಧಿಸಿತು. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಿಂಕು ಸಿಂಗ್ KKR ಪರ ಕೊನೆಯ ಓವರ್ ನಲ್ಲಿ 5 ಸಿಕ್ಸರ್‌ ಬಾರಿಸಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು .

ಗುಜರಾತ್ ನೀಡಿದ 205ರನ್ ಗಳ ಬ್ರಹತ್ ಗುರಿಯನ್ನು ಬೆನ್ನತ್ತಿದ KKR ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ.ಇದರ ಹೊರತಾಗಿಯೂ ವೆಂಕಟೇಶ್ ಐಯ್ಯರ್ (84) ಅವರ ಸ್ಫೋಟಕ ಆಟದಿಂದ ತಂಡ ಚೇತರಿಸಿಕೊಂಡಿತು. ಆದರೆ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಗುಜರಾತ್ ತಂಡವನ್ನು ಮುನ್ನಡೆಸುತ್ತಿದ್ದ ನಾಯಕ ರಶೀದ್ ಖಾನ್ ಅವರು 17ನೇ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಉರಳಿಸುವ ಮೂಲಕ KKR ಗೆ ಶಾಕ್ ನೀಡಿದರು.

ಮೊದಲ ಗೆಲುವು ಕಂಡ ಸನ್‌ರೈಸರ್ಸ್‌: 'ಹೋಗಲ್ಲೇ ಆ ಕಡೆ', ಕ್ಯಾಮರಾಮೆನ್ ಮೇಲೆ ಕಿಡಿ ಕಾರಿದ ಕಾವ್ಯ ಮಾರನ್..!

ಕೊನೆಯ ಓವರ್‌ನಲ್ಲಿ ಜಯಕ್ಕಾಗಿ KKR ಗೆ 29 ರನ್ ಗಳಿಸುವ ಅನಿವಾರ್ಯತೆ ಎದುರಾದಾಗ ಬ್ಯಾಟರ್ ರಿಂಕು ಸಿಂಗ್ ಗುಜರಾತ್ ನ ವೇಗಿ ಯಶ್ ದಯಾಳ್ ಅವರನ್ನು ಹಿಗ್ಗಾಮುಗ್ಗ ಥಳಿಸಿದರು. ಎಡಗೈ ವೇಗಿ ದಯಾಳ್ ಎಸೆದ ಕೊನೆಯ ಓವರ್ ನಲ್ಲಿ ಐದು ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ ಬಾರಿಸುವ ಮೂಲಕ ಜಯವನ್ನು ಗುಜರಾತ್ ತಂಡದಿಂದ ಕಸಿದುಕೊಂಡರು. ಇದರಿಂದ ರಿಂಕು ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಕೂಡ ಭಾಜನರಾದರು. ಅಂತಿಮ ಓವರ್‌ನಲ್ಲಿ 31 ರನ್‌ ನೀಡಿದ ದಯಾಳ್ ಐಪಿಎಲ್ ಪಂದ್ಯವೊಂದರ ಕೊನೆಯ ಓವರ್‍ ನಲ್ಲಿ ಅತಿಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಎಂಬ ಕುಖ್ಯಾತಿಗೆ ಒಳಗಾದರು.

Scroll to load tweet…

ಆದರೆ ಇದೀಗ ಗುಜರಾತ್ ಟೈಟಾನ್ಸ್‌ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಪಂದ್ಯಕ್ಕೂ ಮುನ್ನ ರಿಂಕು ಹಾಗು ಯಶ್ ದಯಾಳ್ ಅವರ ನಡುವಿನ ಸೋಷಿಯಲ್ ಮೀಡಿಯಾ ಚಾಟ್‌ ಈಗ ವೈರಲ್ ಆಗಿದೆ.

ಹೌದು, ಏಪ್ರಿಲ್ 7 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವನ್ನು ಕೋಲ್ಕತಾ ಭರ್ಜರಿಯಾಗಿಯೇ ಜಯಭೇರಿ ಬಾರಿಸುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿತ್ತು. ಇದಾದ ಬಳಿಕ ರಿಂಕು ಸಿಂಗ್ “ಇದೊಂದು ಸ್ಮರಣೀಯ ಗೆಲುವು, ಅಪಾರ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ನಮ್ಮನ್ನೆಲ್ಲ ಬೆಂಬಲಿಸಿದ್ದಕ್ಕೆ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು” ಎಂದು ಬರೆದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದಕ್ಕೆ ಗುಜರಾತ್ ನ ವೇಗಿ ಯಶ್ ದಯಾಳ್ "ಬಿಗ್ ಪ್ಲೇಯರ್ ಭಾಯ್" (ಅಣ್ಣ ನೀವೊಬ್ಬರು ದೊಡ್ಡ ಆಟಗಾರ) ಎಂದು ಕಮೆಂಟ್ ಮಾಡಿದ್ದರು ಇದಕ್ಕೆ “ಭಾಯ್” ಎಂದು ಹಾರ್ಟ್‌ ಎಮೋಜಿಯೊಂದಿಗೆ ರಿಂಕು ರಿಪ್ಲೈ ನೀಡಿದ್ದರು. ಈ ಚಾಟ್‌ ಸ್ಕ್ರೀನ್‌ಶಾಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Scroll to load tweet…

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್‌ ತಂಡವು ಮೊದಲ ಸೋಲು ಅನುಭವಿಸಿದರೆ, ನಿತೀಶ್ ರಾಣಾ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಸತತ ಎರಡು ಗೆಲುವುಗಳನ್ನು ದಾಖಲಿಸಿ ಮುನ್ನುಗ್ಗುತ್ತಿದೆ.