Asianet Suvarna News Asianet Suvarna News

ಲಖನೌ ವಿರುದ್ಧ ಮುಗ್ಗರಿಸಿದ ಆರ್‌ಸಿಬಿ ಟ್ರೋಲ್ ಮಾಡಿದ ಮುಂಬೈ ಇಂಡಿಯನ್ಸ್ ಫ್ಯಾನ್ಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2023 ಟೂರ್ನಿಯಲ್ಲಿ ಸತತ 2ನೇ ಸೋಲು ಕಂಡಿದೆ. ಪಂದ್ಯ ಸೋತರೂ ಆರ್‌ಸಿಬಿ ಅಭಿಮಾನಿಗಳು ಬೆಂಗಳೂರು ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ಹಾಗೂ ಇತರ ತಂಡದ ಅಭಿಮಾನಿಗಳು ಆರ್‌ಸಿಬಿ ತಂಡವನ್ನು ಟ್ರೋಲ್ ಮಾಡಿದ್ದಾರೆ. ಮುಂಬೈ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವೇನು?

IPL 2023 Karma hits Fans trolls RCB after lost against Lucknow Super Giants ckm
Author
First Published Apr 11, 2023, 3:10 PM IST

ಬೆಂಗಳೂರು(ಏ.11): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಲು ಹೊಸದಲ್ಲ. ಇಷ್ಟೇ ಅಲ್ಲ ಸೋಲಿನಿಂದ ಕೈಕಟ್ಟಿ ಕೂರುವ ತಂಡವೂ ಅಲ್ಲ. ಇದಕ್ಕೆ ಮುಖ್ಯ ಕಾರಣ ಆರ್‌ಸಿಬಿ ಅಭಿಮಾನಿಗಳು. ಅದೆಷ್ಟೇ ಪಂದ್ಯದಲ್ಲಿ ಸೋತರೂ ಆರ್‌ಸಿಬಿ ಅಭಿಮಾನಿಗಳು ತಂಡಕ್ಕೆ ಬೆಂಬಲ ನೀಡುವುದು ನಿಲ್ಲಿಸಿಲ್ಲ. ಲಖನೌ ಸೂಪರ್ ಜೈಂಟ್ಸ್ ವಿರುದ್ಧ ತವರಿನಲ್ಲಿನ ಸೋಲು ಕಂಡ ಆರ್‌ಸಿಬಿಯನ್ನು ಟ್ರೋಲ್ ಮಾಡಲಾಗುತ್ತಿದೆ. ಇದರಲ್ಲಿ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಮುಂಚೂಣಿಯಲ್ಲಿದ್ದಾರೆ. ಇದು ಕರ್ಮಫಲ, ಚೋಕರ್ಸ್ ಎಂದು ಟ್ರೋಲ್ ಮಾಡಿದ್ದಾರೆ.

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ತಂಡ ಸೋಲು ಅನುಭವಿಸುತ್ತಿದ್ದಂತೆ ಲಖನೌ ಅಭಿಮಾನಿಗಳು ಸುಮ್ಮನಿದ್ದರು. ಆದರೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಇದು ಕರ್ಮಫಲ ಎಂದು ಟ್ರೋಲ್ ಶುರುಮಾಡಿದ್ದಾರೆ. ಎಪ್ರಿಲ್ 2 ರಂದು ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಹೋರಾಟ ಮಾಡಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿ ಶುಭಾರಂಭ ಮಾಡಿತ್ತು. ಇದೇ ವೇಳೆ ಕೆಲ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾರನ್ನು ವಡಾಪಾವ್ ಎಂದು ಕರೆದಿದ್ದರು. ಇದೀಗ ಮುಂಬೈ ಇಂಂಡಿಯನ್ಸ್ ಅಭಿಮಾನಿಗಳು, ವಡಾಪಾವ್ ಎಂದು ಕರೆದ ಆರ್‌ಸಿಬಿ ಅಭಿಮಾನಿಗಳು ಕರ್ಮಫಲ ಅನುಭವಿಸುತ್ತಿದ್ದಾರೆ. ಇಂದು ಪಂದ್ಯ ಸೋತು ಅಳುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

ಗೆಲುವಿನ ಬಳಿಕ ಆರ್‌ಸಿಬಿ ಫ್ಯಾನ್ಸ್‌ಗೆ ಬಾಯಿ ಮುಚ್ಚಲು ಸೂಚಿಸಿದ ಗಂಭೀರ್, ಶುರುವಾಯ್ತು ಜಟಾಪಟಿ!

ಮಂಕಡ್ ಸೇರಿದಂತೆ ಮೋಸದಿಂದ ಪಂದ್ಯ ಗೆಲ್ಲಲು ಆರ್‌ಸಿಬಿ ಪ್ರಯತ್ನಿಸಿತು. ಆದರೆ ಮಾಡಿದ ಕರ್ಮ ಬಿಡಲ್ಲ. ಮೋಸದಾಟ ನಡೆಯಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಮೋಸದಾಟ ಆಡಿ ಗೆಲ್ಲಲು ಸಾಧ್ಯವಾಗದೆ ಚೋಕರ್ಸ್, ಚೋಕ್ಲಿ ಟೀಂ ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಇನ್ನು ಆರ್‌ಸಿಬಿ ಅಭಿಮಾನಿ ಪಂದ್ಯ ಸೋಲುತ್ತಿದ್ದಂತೆ ಅತ್ತಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ಫೋಟೋವನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ಆರ್‌ಸಿಬಿ ಪ್ರತಿ ಪಂದ್ಯದ ಫಲಿತಾಂಶದ ಬಳಿಕ ಮೈದಾನದಲ್ಲಿ ಸಾಮಾನ್ಯವಾಗಿ ಕಾಣುವ ದೃಶ್ಯ ಎಂದು ಟ್ರೋಲ್ ಮಾಡಿದ್ದಾರೆ.

IPL 2023: ಮೋಸದಾಟವಾಡಿ ಕೊಹ್ಲಿಯನ್ನು ಔಟ್ ಮಾಡಿದ್ರಾ ಅಮಿತ್ ಮಿಶ್ರಾ..? ಇಲ್ಲಿದೆ ನೋಡಿ ವಿಡಿಯೋ ಸಾಕ್ಷಿ..!

ಆರ್‌ಸಿಬಿ ವಿರುದ್ದ ಲಖನೌ ಸೂಪರ್ ಜೈಂಟ್ಸ್ ಗೆಲುವು ದಾಖಲಿಸಿದ ಬೆನ್ನಲ್ಲೇ ಲಖನೌ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಆರ್‌ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಚಲು ಸೂಚನೆ ನೀಡಿದ್ದರು.ಗಂಭೀರ್ ನಡೆ ಆರ್‌ಸಿಬಿ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮೈದಾನದಲ್ಲಿ ಸಂಭ್ರಮ ಆಚರಿಸಿದ ಗೌತಮ್ ಗಂಭೀರ್, ಚಿಯರ್ ಅಪ್ ಮಾಡುತ್ತಿದ್ದ ಆರ್‌ಸಿಬಿ ಅಭಿಮಾನಿಗಳತ್ತ ತಿರುಗಿ ಕೈ ಸನ್ನೆ ಮೂಲಕ ಬಾಯಿ ಮುಚ್ಚಲು ಸೂಚಿಸಿದ್ದರು. 

 

 

ಲಖನೌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 2 ವಿಕೆಟ್ ನಷ್ಡಕ್ಕೆ 212 ರನ್ ಸಿಡಿಸಿತ್ತು. ವಿರಾಟ್ ಕೊಹ್ಲಿ 44 ಎಸೆತದಲ್ಲಿ 61 ರನ್ ಸಿಡಿಸಿದ್ದರು. ಇತ್ತ ನಾಯಕ ಫಾಫ್ ಡುಪ್ಲೆಸಿಸ್ 46 ಎಸೆತದಲ್ಲಿ 79 ರನ್ ಸಿಡಿಸಿದ್ದರು. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ 29 ಎಸೆತದಲ್ಲಿ 59 ರನ್ ಸಿಡಿಸಿದ್ದರು. ಈ ಮೂಲಕ ಆರ್‌ಸಿಬಿ 212 ರನ್ ಸಿಡಿಸಿತ್ತು. ಆದರೆ ಆರ್‌ಸಿಬಿ ತವರಿನಲ್ಲಿ ಈ ಮೊತ್ತ ಸಾಕಾಗಲಿಲ್ಲ. ಬೃಹತ್ ಮೊತ್ತವನ್ನು ಲಖನೌ ಸೂಪರ್ ಜೈಂಟ್ಸ್ 9 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. 

 

 

Follow Us:
Download App:
  • android
  • ios