2023ರ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಗೆಲುವು ಕಾಣದ ಡೆಲ್ಲಿ ಕ್ಯಾಪಿಟಲ್ಸ್ ಇಂದು ಮೊದಲ ಗೆಲುವಿನ ವಿಶ್ವಾಸದಲ್ಲಿದೆ. ಮಳೆಯಿಂದಾಗಿ ಪಂದ್ಯ ವಿಳಂಭವಾಗಿ ಆರಂಭಗೊಳ್ಳುತ್ತಿದೆ. 7 ಗಂಟೆಗೆ ನಡೆಯಬೇಕಿದ್ದ ಟಾಸ್, 8.15ಕ್ಕೆ ನಡೆದಿದೆ. ಈ ಪಂದ್ಯದಲ್ಲಿ ಡೆಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ದೆಹಲಿ(ಏ.20): ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ನಡುವಿನ ಪಂದ್ಯಕ್ಕೆ ಕೊನೆಗೂ ಮಳೆರಾಯ ಅನುವು ಮಾಡಿಕೊಟ್ಟಿದ್ದಾನೆ. 7.30 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ 8.30ಕ್ಕೆ ಆರಂಭಗೊಳ್ಳುತ್ತಿದೆ. ತಂಡವಾಗಿ ಆರಂಭಗೊಂಡ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಡೆಲ್ಲಿ ತಂಡದಲ್ಲಿ 2 ಬದಲಾವಣೆ ಮಾಡಿದ್ದರೆ, ಕೆಕೆಆರ್ ತಂಡದಲ್ಲಿ 4 ಬದಲಾವಣೆ ಮಾಡಲಾಗಿದೆ. ಐಪಿಎಲ್ 2023 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅದೃಷ್ಠ ನೆಟ್ಟಗಿಲ್ಲ. 5 ಪಂದ್ಯ ಆಡಿದರೂ ಒಂದೂ ಗೆಲುವು ಕಂಡಿಲ್ಲ. ಇಂದು ಕೆಕೆಆರ್ ವಿರುದ್ಧ ಗೆಲುವಿಗಾಗಿ ಹೊಸ ಪ್ರಯೋಗ ಮಾಡುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆಡಿದ 5 ಪಂದ್ಯದಲ್ಲಿ 5ರಲ್ಲೂ ಸೋಲು ಕಂಡಿದೆ. ಇತ್ತ 7ನೇ ಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್ ಆಡಿದ 5 ಪಂದ್ಯದಲ್ಲಿ 2ರಲ್ಲಿ ಗೆಲುವು ದಾಖಲಿಸಿದೆ. ಇಂದಿನ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣಾಗಿದ್ದು, ಡೆಲ್ಲಿ ಮೊದಲ ಗೆಲುವಿಗಾಗಿ ಹಾತೊರೆಯುತ್ತಿದೆ.
ಐಪಿಎಲ್ ಅಂಕಪಟ್ಟಿ 2023
ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ ಮೊದಲ ಸ್ಥಾನದಲ್ಲಿದೆ. 6 ಪಂದ್ಯದಲ್ಲಿ 4 ಗೆಲುವು ದಾಖಲಿಸಿದೆ. ದ್ವಿತೀಯ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್ 6 ರಲ್ಲಿ 4 ಗೆಲುವು ದಾಖಲಿಸಿದೆ. ನೆಟ್ ರನ್‌ರೇಟ್ ಕಾರಣ 2ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 5ರಲ್ಲಿ 3 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ 5 ಪಂದ್ಯದಲ್ಲಿ 3 ಪಂದ್ಯದಲ್ಲಿ ಗೆಲುವು ದಾಖಲಿಸಿ 4ನೇ ಸ್ಥಾನದಲ್ಲಿದೆ. ಆರ್‌ಸಿಬಿ 8ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. 6ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ 5 ಪಂದ್ಯದಲ್ಲಿ 3 ಗೆಲುವು ದಾಖಲಿಸಿದೆ. ಪಂಜಾಬ್ ಕಿಂಗ್ಸ್ 6 ಪಂದ್ಯದಲ್ಲಿ 3ರಲ್ಲಿ ಗೆಲುವು ದಾಖಲಿಸಿ 7ನೇ ಸ್ಥಾನದಲ್ಲಿದೆ. ಕೋಲ್ಕತಾ 8ನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 9 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 10ನೇ ಸ್ಥಾನದಲ್ಲಿದೆ.
