ಡೆಲ್ಲಿಯಲ್ಲಿ ಪಂಜಾಬ್ ಕಿಂಗ್ಸ್-ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಪಂಜಾಬ್ ಕಿಂಗ್ಸ್ ಪಾಲಿಗೆ ಮಹತ್ವದ ಪಂದ್ಯದೊಡ್ಡ ಅಂತರದ ಗೆಲುವಿನ ನಿರೀಕ್ಷೆಯಲ್ಲಿ ಪಂಜಾಬ್ ಕಿಂಗ್ಸ್
ನವದೆಹಲಿ(ಮೇ.13): ಈಗಾಗಲೇ 7 ಸೋಲಿನೊಂದಿಗೆ 16ನೇ ಆವೃತ್ತಿ ಪ್ಲೇ-ಆಫ್ ರೇಸ್ನಿಂದ ಎರಡೂ ಕಾಲನ್ನು ಹೊರಗಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪ್ಲೇ-ಆಫ್ ಸ್ಥಾನಕ್ಕೆ ಇನ್ನೂ ಹೋರಾಟ ನಡೆಸುತ್ತಿರುವ ಪಂಜಾಬ್ ಕಿಂಗ್ಸ್ ಶನಿವಾರ ಪರಸ್ಪರ ಮುಖಾಮುಖಿಯಾಗಲಿವೆ. ಕೊನೆ ಸ್ಥಾನದಲ್ಲಿರುವ ಡೆಲ್ಲಿಗಿದು ಪ್ರತಿಷ್ಠೆಯ ಪಂದ್ಯವಾಗಿದ್ದರೆ, ಪಂಜಾಬ್ ಕಿಂಗ್ಸ್ ಪಾಲಿಗೆ ನಾಕೌಟ್ ರೇಸ್ನ ಅಳಿವು ಉಳಿವನ್ನು ನಿರ್ಧರಿಸುವ ನಿರ್ಣಾಯಕ ಪಂದ್ಯ.
11ರಲ್ಲಿ 4 ಪಂದ್ಯಗಳನ್ನಷ್ಟೇ ಗೆದ್ದಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಹಾಗಂತ ತಂಡ ಇನ್ನು ಮೂರು ಪಂದ್ಯ ಗೆದ್ದರೂ ಪ್ಲೇ-ಆಫ್ಗೇರುವುದು ಸದ್ಯಕ್ಕೆ ಅಸಾಧ್ಯದ ಮಾತು. 8 ತಂಡಗಳಿದ್ದಾಗ 7 ಪಂದ್ಯ ಗೆದ್ದರೂ ಪ್ಲೇ-ಆಫ್ಗೇರಬಹುದಿತ್ತು. ಆದರೆ ಈಗ 10 ತಂಡಗಳಿರುವ ಕಾರಣ 8 ಪಂದ್ಯಗಳಲ್ಲಿ ಜಯಿಸಿದರೂ ಅಗ್ರ-4ರಲ್ಲಿ ಸ್ಥಾನ ಸಿಗುವುದು ಕಷ್ಟ. ಮತ್ತೊಂದೆಡೆ ಪಂಜಾಬ್ಗೆ ಇನ್ನೂ 16 ಅಂಕ ತಲುಪಲು ಅವಕಾಶವಿದ್ದರೂ ನೆಟ್ ರನ್ರೇಟ್ನಲ್ಲಿ ಇತರೆ ತಂಡಗಳನ್ನು ಹಿಂದಿಕ್ಕಬಹುದೇ ಎನ್ನುವ ಕುತೂಹಲವಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬ್ಯಾಟಿಂಗ್‌ನಲ್ಲಿ ನಾಯಕ ಡೇವಿಡ್ ವಾರ್ನರ್, ಫಿಲ್ ಸಾಲ್ಟ್, ಮನೀಶ್ ಪಾಂಡೆ, ರಿಲೇ ರೊಸ್ಸೌ, ಮಿಚೆಲ್ ಮಾರ್ಷ್ ಅವರನ್ನು ನೆಚ್ಚಿಕೊಂಡಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹಮ್ಮದ್ ಜವಾಬ್ದಾರಿಯುತ ಪ್ರದರ್‍ಶನ ತೋರಬೇಕಿದೆ.
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಪರ ನಾಯಕ ಶಿಖರ್ ಧವನ್, ಭಾನುಕಾ ರಾಜಪಕ್ಸಾ, ಪ್ರಭ್‌ಸಿಮ್ರನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಜಿತೇಶ್ ಅವರನ್ನು ಬ್ಯಾಟಿಂಗ್‌ನಲ್ಲಿ ನೆಚ್ಚಿಕೊಂಡಿದೆ. ಇನ್ನು ಸ್ಯಾಮ್ ಕರ್‍ರನ್, ಹಪ್ರೀತ್ ಬ್ರಾರ್, ರಾಹುಲ್ ಚಹರ್, ಆರ್ಶದೀಪ್ ಸಿಂಗ್, ನೇಥನ್ ಎಲ್ಲಿಸ್ ಮಾರಕ ದಾಳಿ ಸಂಘಟಿಸಿದರಷ್ಟೇ ಡೆಲ್ಲಿ ಬ್ಯಾಟರ್‍ಗಳನ್ನು ಕಟ್ಟಿಹಾಕಲು ಸಾಧ್ಯ.
IPL 2023 ಲಖನೌಗೆ ಸನ್‌ರೈಸರ್ಸ್ ಹೈದರಾಬಾದ್ ಸವಾಲು
ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು 30 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಉಭಯ ತಂಡಗಳು ಸಮಾನ ಗೆಲುವು ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಪಂಜಾಬ್ ಕಿಂಗ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇಂದಿನ ಪಂದ್ಯದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಒಟ್ಟು ಮುಖಾಮುಖಿ: 30
ಡೆಲ್ಲಿ: 15
ಪಂಜಾಬ್: 15
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್(ನಾಯಕ), ಫಿಲ್ ಸಾಲ್ಟ್, ಮನೀಶ್ ಪಾಂಡೆ, ರಿಲೇ ರೊಸ್ಸೌ, ಮಿಚೆಲ್ ಮಾರ್ಷ್, ಅಕ್ಷರ್ ಪಟೇಲ್, ರಿಪಲ್ ಪಟೇಲ್, ಅಮನ್ ಖಾನ್, ಲಲಿತ್ ಯಾದವ್, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹಮ್ಮದ್.
ಪಂಜಾಬ್ ಕಿಂಗ್ಸ್: ಶಿಖರ್ ಧವನ್(ನಾಯಕ), ಪ್ರಭ್‌ಸಿಮ್ರನ್ ಸಿಂಗ್, ಭಾನುಕಾ ರಾಜಪಕ್ಸೆ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರ್ರನ್, ರಿಷಿ ಧವನ್, ಹಪ್ರೀತ್ ಬ್ರಾರ್, ರಾಹುಲ್ ಚಹರ್, ಆರ್ಶದೀಪ್ ಸಿಂಗ್, ನೇಥನ್ ಎಲ್ಲಿಸ್.
ಪಂದ್ಯ: ಸಂಜೆ 7.30ರಿಂದ, ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಇಲ್ಲಿ ನಡೆದ ಕಳೆದೆರಡು ಪಂದ್ಯಗಳ 4 ಇನ್ನಿಂಗ್್ಸನಲ್ಲೂ 180+ ರನ್ ದಾಖಲಾಗಿದೆ. ಹೀಗಾಗಿ ಮತ್ತೊಮ್ಮೆ ದೊಡ್ಡ ಮೊತ್ತ ನಿರೀಕ್ಷಿಸಬಹುದು. ಇಲ್ಲಿನ 4 ಪಂದ್ಯಗಳಲ್ಲಿ 4ರಲ್ಲಿ ಚೇಸ್ ಮಾಡಿದ ತಂಡ ಜಯಗಳಿಸಿದೆ.
