IPL 2023 ಫೈನಲ್‌ ಟಿಕೆ​ಟ್‌​ಗಾಗಿ ಚೆನ್ನೈ-ಗುಜ​ರಾತ್‌ ಫೈಟ್‌

ಇಂದು ಚೆನ್ನೈ​ ಕ್ರೀಡಾಂಗ​ಣ​ದಲ್ಲಿ ಮೊದಲ ಕ್ವಾಲಿ​ಫೈ​ಯರ್‌ ಪಂದ್ಯ
ಗೆದ್ದ ತಂಡ ನೇರ ಫೈನ​ಲ್‌ಗೆ, ಸೋತ ತಂಡ​ಕ್ಕಿದೆ ಮತ್ತೊಂದು ಚಾನ್ಸ್‌
ಚಾಂಪಿ​ಯನ್‌ ಟೈಟಾ​ನ್ಸ್‌ಗೆ ಸತತ 2ನೇ ಫೈನಲ್‌ ಗುರಿ

IPL 2023 Chennai Super Kings take on Gujarat Titans in 1st Qualifier Clash at MA Chidambaram Stadium kvn

ಚೆನ್ನೈ(ಮೇ.23): 16ನೇ ಆವೃತ್ತಿ ಐಪಿ​ಎ​ಲ್‌ನ ನಾಕೌಟ್‌ ಹಣಾ​ಹ​ಣಿಗೆ ವೇದಿಕೆ ಸಜ್ಜು​ಗೊಂಡಿದ್ದು, ಮಂಗ​ಳವಾರ ಮೊದಲ ಕ್ವಾಲಿ​ಫೈ​ಯ​ರ್‌ನಲ್ಲಿ ಹಾಲಿ ಚಾಂಪಿ​ಯನ್‌ ಗುಜ​ರಾತ್‌ ಟೈಟಾನ್ಸ್‌ ಹಾಗೂ 4 ಬಾರಿ ಚಾಂಪಿ​ಯನ್‌ ಚೆನ್ನೈ ಸೂಪರ್‌ ಕಿಂಗ್‌್ಸ ತಂಡ​ಗಳು ಸೆಣ​ಸಾ​ಡ​ಲಿವೆ. ಇದ​ರಲ್ಲಿ ಗೆಲ್ಲುವ ತಂಡ ನೇರ​ವಾಗಿ ಫೈನ​ಲ್‌ ಪ್ರವೇ​ಶಿ​ಸ​ಲಿದ್ದು, ಸೋಲುವ ತಂಡಕ್ಕೆ ಫೈನ​ಲ್‌​ಗೇ​ರಲು ಮತ್ತೊಂದು ಅವ​ಕಾಶ ಸಿಗ​ಲಿದೆ. ಕ್ವಾಲಿ​ಫೈ​ಯ​ರ್‌-2ರಲ್ಲಿ ಗೆದ್ದು ತಂಡ ಫೈನಲ್‌ ಪ್ರವೇ​ಶಿ​ಸ​ಬ​ಹು​ದು. ಪಂದ್ಯಕ್ಕೆ ಸಿಎಸ್‌ಕೆ ತಂಡದ ತವರು ಚೆಪಾಕ್‌ ಕ್ರೀಡಾಂಗ​ಣ ಆತಿಥ್ಯ ವಹಿ​ಸ​ಲಿ​ದೆ.

ದಾಖ​ಲೆಯ 12ನೇ ಬಾರಿ ಪ್ಲೇ-ಆಫ್‌ ಆಡು​ತ್ತಿ​ರುವ ಎಂ ಎಸ್ ಧೋನಿ ನಾಯ​ಕ​ತ್ವದ ಚೆನ್ನೈ 10ನೇ ಬಾರಿ ಫೈನ​ಲ್‌​ಗೇ​ರುವ ನಿರೀ​ಕ್ಷೆ​ಯ​ಲ್ಲಿದ್ದರೆ, ಹಾರ್ದಿಕ್‌ ನೇತೃ​ತ್ವದ ಗುಜ​ರಾತ್‌ ಟೈಟಾನ್ಸ್ ಸತತ 2ನೇ ಬಾರಿ ಪ್ರಶಸ್ತಿ ಸುತ್ತು ಪ್ರವೇ​ಶಿ​ಸುವ ಕಾತ​ರ​ಲ್ಲಿ​ದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ವಿರು​ದ್ಧ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಗುಜ​ರಾತ್‌ ಲೀಗ್‌ ಹಂತ​ದಲ್ಲಿ ಆಡಿದ 14 ಪಂದ್ಯ​ಗ​ಳಲ್ಲಿ 10ರಲ್ಲಿ ಗೆದ್ದು ಅಗ್ರ​ಸ್ಥಾನ ಪಡೆ​ದರೆ, 8 ಪಂದ್ಯ​ಗ​ಳಲ್ಲಿ ಗೆದ್ದಿರುವ ಚೆನ್ನೈ 17 ಅಂಕ​ದೊಂದಿಗೆ 2ನೇ ಸ್ಥಾನ ಪಡೆ​ದಿದೆ.

ಚೆನ್ನೈಗೆ ಗಿಲ್‌ ಭಯ: ಎರಡೂ ತಂಡಗಳು ಸಮಬಲ ಹೊಂದಿದ್ದು, ಉಭಯ ಪಡೆಗಳ ತಂಡ ಸಂಯೋ​ಜ​ನೆಯೂ ಉತ್ತ​ಮ​ವಾ​ಗಿದೆ. ಶುಭ್‌ಮನ್‌ ಗಿಲ್‌ ವೃತ್ತಿಬದುಕಿನ ಶ್ರೇಷ್ಠ ಫಾರ್ಮ್‌ನಲ್ಲಿದ್ದು, 2 ಭರ್ಜರಿ ಶತಕ ಸೇರಿ​ ಬರೋ​ಬ್ಬರಿ 680 ರನ್‌ ಸಿಡಿಸಿ ಗರಿಷ್ಠ ರನ್‌ ಸರ​ದಾ​ರರ ಪಟ್ಟಿ​ಯಲ್ಲಿ 2ನೇ ಸ್ಥಾನ​ದ​ಲ್ಲಿ​ದ್ದಾರೆ. ಅವ​ರನ್ನು ಕಟ್ಟಿ​ಹಾ​ಕುವುದು ಸಿಎಸ್‌ಕೆ ಮುಂದಿರುವ ಮೊದಲ ಸವಾಲು. ತಂಡದ ಇತರ ಯಾವುದೇ ಬ್ಯಾಟರ್‌ 300+ ರನ್‌ ಸೇರಿ​ಸ​ದಿ​ದ್ದರೂ ನಿರ್ಣಾ​ಯಕ ಹಂತ​ದಲ್ಲಿ ಕೈಕೊಟ್ಟ ಉದಾ​ಹ​ರಣೆ ಕಡಿಮೆ.

ಡೇವಿಡ್ ಮಿಲ್ಲರ್‌, ವಿಜಯ್ ಶಂಕರ್‌, ಹಾರ್ದಿಕ್‌ ಪಾಂಡ್ಯ, ವೃದ್ದಿಮಾನ್ ಸಾಹ ಯಾವ ಕ್ಷಣ​ದಲ್ಲೂ ಸ್ಫೋಟಿ​ಸ​ಬ​ಲ್ಲರು. ಅತ್ತ ರಶೀದ್‌ ಖಾನ್‌ರ ಸ್ಥಿರತೆ ಕೂಡಾ ಸ್ವಲ್ಪ​ವೂ ಕಡಿಮೆಯಾಗಿಲ್ಲ. ಮೊಹಮ್ಮದ್ ಶಮಿ, ರಶೀದ್‌ ಖಾನ್ ಇಬ್ಬರೂ ತಲಾ 24 ವಿಕೆಟ್‌ ಕಬ​ಳಿ​ಸಿದ್ದು, ಇವ​ರಿ​ಬ್ಬ​ರನ್ನು ಎದು​ರಿ​ಸು​ವುದೇ ಎದು​ರಾಳಿ ಬ್ಯಾಟ​ರ್‌​ಗ​ಳಿಗೆ ತಲೆ​ನೋ​ವಾಗಿ ಪರಿ​ಣ​ಮಿ​ಸಿದೆ. ಮೋಹಿತ್‌ ಶರ್ಮಾ, ನೂರ್‌ ಅಹ್ಮದ್‌ ಕೂಡಾ ತಂಡದ ಟ್ರಂಪ್‌ಕಾರ್ಡ್‌ಗಳೆನಿಸಿದ್ದಾರೆ.

ಮತ್ತೊಂದೆಡೆ ಕಳೆದ ಆವೃ​ತ್ತಿ​ಯಲ್ಲಿ 9ನೇ ಸ್ಥಾನಿ​ಯಾಗಿ, ಈ ಬಾರಿ ಹಲ​ವು ಸಮ​ಸ್ಯೆ​ಗ​ಳನ್ನು ಮೆಟ್ಟಿ ನಿಂತು ಪ್ಲೇ-ಆಫ್‌​ಗೇ​ರಿ​ರುವ ಚೆನ್ನೈ ಪಯ​ಣವೇ ರೋಚಕ. ತಂಡ​ದಲ್ಲಿ ಈಗಲೂ ಹಲವು ಸಮ​ಸ್ಯೆ​ಗ​ಳಿ​ದ್ದರೂ ಸಂಘ​ಟಿತ ಪ್ರದ​ರ್ಶನ ತಂಡ​ವನ್ನು ನಾಕೌಟ್‌ ತಲು​ಪಿ​ಸಿದೆ. ಡೆವೊನ್‌ ಕಾನ್ವೇ, ಋತುರಾಜ್ ಗಾಯ​ಕ್ವಾಡ್‌, ಶಿವಂ ದುಬೆ ಅತ್ಯು​ತ್ತಮ ಫಾರ್ಮ್‌​ನ​ಲ್ಲಿದ್ದು, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ ಕೂಡಾ ಉಪ​ಯುಕ್ತ ಕೊಡುಗೆ ನೀಡು​ತ್ತಿ​ದ್ದಾರೆ. ದೀಪಕ್‌ ಚಹರ್‌, ಪತಿ​ರನ, ದೇಶ​ಪಾಂಡೆ ವೇಗದ ಬೌಲಿಂಗ್‌ಗೆ ಬಲ ತುಂಬು​ತ್ತಿದ್ದು, ಚೆನ್ನೈನ ಸ್ಪಿನ್‌ ಪಿಚ್‌​ನಲ್ಲಿ ಜಡೇಜಾ, ಅಲಿ, ತೀಕ್ಷಣ ಮತ್ತೊಮ್ಮೆ ನಿರ್ಣಾ​ಯಕ ಪಾತ್ರ ವಹಿ​ಸುವ ನಿರೀ​ಕ್ಷೆ​ಯ​ಲ್ಲಿ​ದ್ದಾ​ರೆ.

ಮುಖಾಮುಖಿ: 03

ಚೆನ್ನೈ: 00

ಗುಜರಾತ್‌: 03

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್‌: ಡೆವೊನ್‌ ಕಾನ್‌ವೇ, ಋುತುರಾಜ್‌ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಎಂ ಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ದೀಪಕ್‌ ಚಹರ್‌, ತುಷಾರ್ ದೇಶ​ಪಾಂಡೆ, ಮಹೀಶ್ ತೀಕ್ಷಣ, ಮತೀಶ್ ಪತಿ​ರ​ನ.

ಗುಜರಾತ್‌ ಟೈಟಾನ್ಸ್: ಶುಭ್‌ಮನ್‌ ಗಿಲ್‌, ವೃದ್ದಿಮಾನ್ ಸಾಹ, ಹಾರ್ದಿಕ್‌ ಪಾಂಡ್ಯ(ನಾ​ಯ​ಕ​), ವಿಜಯ್‌ ಶಂಕ​ರ್‌, ಡೇವಿಡ್ ಮಿಲ್ಲರ್‌, ದಶುನ್ ಶಾನಕ, ರಾಹುಲ್ ತೆವಾ​ಟಿಯಾ, ರಶೀ​ದ್‌ ಖಾನ್, ಮೋಹಿತ್‌ ಶರ್ಮಾ, ನೂರ್‌ ಅಹಮ್ಮದ್, ಮೊಹಮ್ಮದ್ ಶಮಿ, ಯಶ್‌ ದಯಾಳ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಹಾಗೂ ಜಿಯೋ ಸಿನಿಮಾ

ಪಿಚ್‌ ರಿಪೋ​ರ್ಟ್‌

ಚೆಪಾಕ್‌ ಕ್ರೀಡಾಂಗ​ಣದ ಪಿಚ್‌ ಸ್ಪಿನ್‌ ಸ್ನೇಹಿ​ಯಾ​ಗಿ​ದ್ದರೂ ಈ ಬಾರಿ ಬ್ಯಾಟ​ರ್‌​ಗಳೂ ಮಿಂಚಿ​ದ್ದಾರೆ. ಲೀಗ್‌ ಹಂತದ 7 ಪಂದ್ಯ​ಗ​ಳಲ್ಲಿ 4ರಲ್ಲಿ ಚೇಸ್‌ ಮಾಡಿದ ತಂಡ ಗೆಲುವು ಸಾಧಿ​ಸಿದೆ. ರಾತ್ರಿ​ ವೇಳೆ ಇಬ್ಬನಿ ಬೀಳುವ ಸಾಧ್ಯ​ತೆ ಇದ್ದು, ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿ​ಕೊ​ಳ್ಳ​ಬ​ಹು​ದು.

Latest Videos
Follow Us:
Download App:
  • android
  • ios