ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಕೂಡಿಕೊಂಡ ಸಿಸಾಂಡ ಮಗಲಾಕೈಲ್ ಜೇಮಿಸನ್ ಬದಲಿಗೆ ದಕ್ಷಿಣ ಆಫ್ರಿಕಾದ ಡೆತ್‌ ಓವರ್ ಸ್ಪೆಷಲಿಸ್ಟ್ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌-ಚೆನ್ನೈ ಸೂಪರ್ ಕಿಂಗ್ಸ್‌

ಚೆನ್ನೈ(ಮಾ.20): ಗಾಯಗೊಂಡು 16ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದ ನ್ಯೂಜಿಲೆಂಡ್‌ನ ಆಲ್ರೌಂಡರ್‌ ಕೈಲ್‌ ಜೇಮಿಸನ್‌ ಬದಲಿಗೆ ಚೆನ್ನೈ ಸೂಪರ್‌ ಕಿಂಗ್‌್ಸ ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್‌ ಆಲ್ರೌಂಡರ್‌ ಸಿಸಾಂಡ ಮಗಾಲರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಜೇಮಿಸನ್‌ರನ್ನು ಕಳೆದ ವರ್ಷ ಹರಾಜಿನಲ್ಲಿ ಚೆನ್ನೈ 1 ಕೋಟಿ ರು.ಗೆ ಖರೀದಿಸಿತ್ತು. ಇದೀಗ ಮಗಾಲ ತಮ್ಮ ಮೂಲಬೆಲೆ 50 ಲಕ್ಷ ರುಪಾಯಿಗೆ ಚೆನ್ನೈ ತಂಡ ಸೇರಿದ್ದಾರೆ. ಡೆತ್‌ ಓವರ್‌ ಬೌಲಿಂಗ್‌ ಸ್ಪೆಷಲಿಸ್ಟ್‌ ಎನಿಸಿರುವ ಮಗಾಲ, ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಕೈಲ್ ಜೇಮಿಸನ್‌, ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಗೂ ಮುನ್ನ ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಐಪಿಎಲ್‌ನಿಂದ ಹೊರಬಿದ್ದಿದ್ದು, ನೀಳಕಾಯದ ವೇಳೆ ಕೈಲ್ ಜೇಮಿಸನ್, ಇನ್ನು ಕೆಲವು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

32 ವರ್ಷದ ಸಿಸಾಂಡ ಮಗಾಲ, ಕಳೆದ 2021ರ ಏಪ್ರಿಲ್‌ ಬಳಿಕ ದಕ್ಷಿಣ ಆಫ್ರಿಕಾ ಪರ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿಲ್ಲ. ಆದರೆ ಇತ್ತೀಚೆಗಷ್ಟೇ ಮುಕ್ತಾಯವಾದ SA20 ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಈಸ್ಟರ್ನ್‌ಕೇಪ್ ತಂಡವು ಚಾಂಪಿಯನ್‌ ಆಗುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಸಿಸಾಂಡ ಮಗಾಲ, ಸನ್‌ರೈಸರ್ಸ್‌ ಈಸ್ಟರ್ನ್‌ಕೇಪ್‌ ಪರ 14 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಜಂಟಿ 5ನೇ ಸ್ಥಾನವನ್ನು ಪಡೆದಿದ್ದರು.

IPL 2023: ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಧೋನಿ ಹೆಸರಿನಲ್ಲಿವೆ ಯಾರೂ ಮುರಿಯಲಾರದ 4 ದಾಖಲೆಗಳು..!

ಟಿ20 ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಸಿಸಾಂಡ ಮಗಲ 127 ಪಂದ್ಯಗಳನ್ನಾಡಿ 136 ವಿಕೆಟ್ ಕಬಳಿಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಪರ 4 ಪಂದ್ಯಗಳನ್ನಾಡಿ 3 ವಿಕೆಟ್ ಕಬಳಿಸಿದ್ದಾರೆ. ಸಿಸಾಂಡ ಮಗಾಲ, ಡೆತ್ ಓವರ್‌ ಸ್ಪೆಷಲಿಸ್ಟ್‌ ಆಗಿ ಗುರುತಿಸಿಕೊಂಡಿದ್ದಾರೆ. ಇನ್ನು SA20 ಲೀಗ್ ಟೂರ್ನಿಯಲ್ಲಿ ಹೊಸ ಚೆಂಡಿನಲ್ಲೂ ಸಿಸಾಂಡ ಮಗಾಲ ಮಾರಕ ದಾಳಿ ನಡೆಸಿ ಗಮನ ಸೆಳೆದಿದ್ದರು. ಟೂರ್ನಿಯಲ್ಲಿ ಕಬಳಿಸಿದ ಒಟ್ಟು ವಿಕೆಟ್‌ಗಳ ಪೈಕಿ ಅರ್ಧದಷ್ಟು ವಿಕೆಟ್‌ಗಳನ್ನು ಮೊದಲ ಪವರ್‌ಪ್ಲೇನಲ್ಲೇ ಕಬಳಿಸಿ ಮಿಂಚಿದ್ದಾರೆ. ಇನ್ನು ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟರ್‌ ಆಗಿಯೂ ಮಿಂಚಿದ್ದಾರೆ. ಟಿ20 ವೃತ್ತಿಜೀವನದಲ್ಲಿ ಸಿಸಾಂಡ ಮಗಾಲ ಎರಡು ಅರ್ಧಶತಕ ಸಿಡಿಸಿದ್ದಾರೆ.

Scroll to load tweet…

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್‌ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.

2023ನೇ ಸಾಲಿನ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಹೀಗಿದೆ ನೋಡಿ:

ಎಂ ಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಸಿಂಘ್ ಚೌಧರಿ, ಮತೀಶ ಚೌಧರಿ. , ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಬೆನ್ ಸ್ಟೋಕ್ಸ್‌, ಸಿಸಾಂಡ ಮಗಲಾ, ನಿಶಾಂತ್ ಸಿಂಧು, ಅಜಿಂಕ್ಯ ರಹಾನೆ, ಭಗತ್ ವರ್ಮಾ, ಅಜಯ್ ಮಂಡಲ್, ಶೇಕ್ ರಶೀದ್‌.