ಚೆನ್ನೈ ಸೂಪರ್ ಕಿಂಗ್ಸ್ ದಾಳಿಗೆ ಮುಂಬೈ ಇಂಡಿಯನ್ಸ್ ಅಬ್ಬರಿಸಲು ವಿಫಲವಾಗಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಟಿಮ್ ಡೇವಿಡ್ ಅಲ್ಪ ಹೋರಾಟದಿಂದ ಚೆನ್ನೈ ತಂಡಕ್ಕೆ 158 ರನ್ ಟಾರ್ಗೆಟ್ ನೀಡಿದೆ.

ಮುಂಬೈ(ಏ.08): ಆರ್‌ಸಿಬಿ ವಿರುದ್ದ ಮುಗ್ಗರಿಸಿದ್ದ ಮುಂಬೈ ಇಂಡಿಯನ್ಸ್ ದ್ವಿತೀಯ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳು ವಿಶ್ವಾಸದಲ್ಲಿ ಕಣಕ್ಕಿಳಿದಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಅಬ್ಬರಿಸಲು ವಿಫಲವಾಗಿದೆ. ನಾಯಕ ರೋಹಿತ್ ಶರ್ಮಾ, ಟಿಮ್ ಡೇವಿಡ್ ಕಾಣಿಕೆಯಿಂದ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 158 ರನ್ ಸಿಡಿಸಿದೆ. ಈ ಮೂಲಕ ಚೆನ್ನೈ ತಂಡಕ್ಕೆ 158 ರನ್‌ಗೆ ಟಾರ್ಗೆಟ್ ನೀಡಲಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಇಶನ್ ಕಿಶನ್ ಜೊತೆಯಾಟ ಮುಂಬೈ ತಂಡದಲ್ಲಿ ಹೊಸ ವಿಶ್ವಾಸ ಮೂಡಿಸಿತು. ಆದರೆ ಇವರ ಜೊತೆಯಾಟ 38 ರನ್‌ಗೆ ಅಂತ್ಯವಾಯಿತು. ನಾಯಕ ರೋಹಿತ್ ಶರ್ಮಾ 13 ಎಸೆತದಲ್ಲಿ 21 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಇಶಾನ್ ಕಿಶನ್ 21 ಎಸೆತದಲ್ಲಿ 32 ರನ್ ಸಿಡಿಸಿ ಔಟಾದರು .

ಮನೀಷ್‌ ಪಾಂಡೆ ಫರ್ಸ್ಟ್‌ ಬಾಲ್‌ ಡಕ್, ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್‌ ಸೋಲು!

ಮುಂಬೈ ಇಂಡಿಯನ್ಸ್ ತಂಡ ಬೃಹತ್ ಮೊತ್ತದ ಕನಸು ಆರಂಭಿಕ ಹಂತದಲ್ಲಿ ಕುಸಿಯತೊಡಗಿತು. ಸೂರ್ಯಕುಮಾರ್ ಯಾದವ್ ಕೇವಲ 1 ರನ್ ಸಿಡಿಸಿ ಔಟಾದರು. ಇತ್ತ ಕ್ಯಾಮರೂನ್ ಗ್ರೀನ್ 12 ರನ್ ಸಿಡಿಸಿ ಔಟಾದರು. 73 ರನ್‌ಗೆ ಮುಂಬೈ ಇಂಡಿಯನ್ಸ್ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಅರ್ಶದ್ ಖಾನ್ 2 ರನ್ ಸಿಡಿಸಿ ಔಟಾದರು. ತಿಲಕ್ ವರ್ಮಾ 22 ರನ್ ಸಿಡಿಸಿ ಔಟಾದರು.

ಟಿಮ್ ಡೇವಿಡ್ ಹೋರಾಟ 31 ರನ್‌ಗೆ ಅಂತ್ಯವಾಯಿತು. ತಿಸ್ಟನ್ ಸ್ಟಬ್ಸ್ 1 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಹೃತಿಕ್ ಶೋಕಿನ್ ಸಿಡಿಸಿದ ಅಜೇಯ 18 ರನ್ ಹಾಗೂ ಪಿಯೂಷ್ ಪಿಯೂಷ್ ಚಾವ್ಲಾ ಅಜೇಯ 5 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿತು.

IPL 2023 ರಜತ್ ಪಾಟೀದಾರ್ ಔಟ್‌, ಆರ್‌ಸಿಬಿ ತಂಡದಲ್ಲಿ ಕನ್ನಡಿಗನಿಗೆ ಜಾಕ್‌ಪಾಟ್‌..!

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯ್ 11
ಡೇವೋನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂ.ಎಸ್ ಧೋನಿ(ನಾಯಕ), ಶಿವಂ ದುಬೆ, ಡ್ವೇನ್ ಪ್ರೆಟೋರಿಯಸ್, ದೀಪಕ್ ಚಹಾರ್, ಮಿಚೆಲ್ ಸ್ಯಾಂಟ್ನರ್, ಸಿಸಾಂಡ ಮಗಲಾ, ತುಷಾರ್ ದೇಶಪಾಂಡೆ

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ತ್ರಿಸ್ಟನ್ ಸ್ಟಬ್ಸ್, ಅರ್ಶದ್ ಖಾನ್, ಹೃತಿಕ್ ಶೋಕಿನ್, ಪಿಯೂಷ್ ಚಾವ್ಲಾ, ಜೇಸನ್ ಬೆಹೆನ್‌ಡ್ರಾಫ್