Asianet Suvarna News Asianet Suvarna News

IPL Auction ಚೆನ್ನೈ ತೆಕ್ಕೆಗೆ ಬೆನ್‌ ಸ್ಟೋಕ್ಸ್‌, ಮಿನಿ ಹರಾಜಿನ ಬಳಿಕ ಧೋನಿ ಪಡೆ ಮತ್ತಷ್ಟು ಸ್ಟ್ರಾಂಗ್‌..!

ಮಿನಿ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್‌
ದಾಖಲೆಯ ಮೊತ್ತ ನೀಡಿ ಬೆನ್ ಸ್ಟೋಕ್ಸ್ ಸೆಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ
ಮೂಲ ಬೆಲೆಗೆ ಕೈಲ್ ಜೇಮಿಸನ್, ಅಜಿಂಕ್ಯ ರಹಾನೆ ಚೆನ್ನೈ ತೆಕ್ಕೆಗೆ

IPL 2023 Chennai Super Kings Pics Ben Stokes to Ajinkya Rahane CSK Full Squad after Mini Auction kvn
Author
First Published Dec 23, 2022, 9:45 PM IST

ಕೊಚ್ಚಿ(ಡಿ.23):  ಐಪಿಎಲ್‌ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವೆಂಬ ಹಿರಿಮೆಗೆ ಪಾತ್ರವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯ ಮಿನಿ ಹರಾಜಿನಲ್ಲಿ ಸಾಕಷ್ಟು ಅಳೆದು ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಇದು ಕಡೆಯ ಐಪಿಎಲ್‌ ಟೂರ್ನಿಯಾಗುವ ಸಾಧ್ಯತೆಯಿದ್ದು, ಸಿಎಸ್‌ಕೆ ತಂಡವು ಭವಿಷ್ಯದ ನಾಯಕತ್ವದ ಬಗ್ಗೆ ಗಮನ ಹರಿಸುವಲ್ಲಿ ಯಶಸ್ವಿಯಾಗಿದೆ.

ಹೌದು, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಈ ಬಾರಿಯ ಹರಾಜಿನಲ್ಲಿ ದಾಖಲೆಯ 16.25 ಕೋಟಿ ರುಪಾಯಿ ನೀಡಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಅವರನ್ನು  ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಷ್ಟೇ ಅಲ್ಲದೇ ಮೂಲ ಬೆಲೆಗೆ ನ್ಯೂಜಿಲೆಂಡ್ ನೀಳಕಾಯದ ವೇಗಿ ಕೈಲ್ ಜೇಮಿಸನ್ ಹಾಗೂ ಮುಂಬೈ ಮೂಲದ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಕೂಡಾ ಚೆನ್ನೈ ಸೂಪರ್ ಕಿಂಗ್ಸ್ ತೆಕ್ಕೆಗೆ ಜಾರಿದ್ದಾರೆ.

ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಖರೀದಿಯ ವಿವರ ಹೀಗಿದೆ ನೋಡಿ

* ಬೆನ್ ಸ್ಟೋಕ್ಸ್‌ - ಆಲ್ರೌಂಡರ್‌- 16.25 ಕೋಟಿ ರುಪಾಯಿ
* ಕೈಲ್ ಜೇಮಿಸನ್ - ವೇಗದ ಬೌಲರ್ -1 ಕೋಟಿ ರುಪಾಯಿ
* ನಿಶಾಂತ್ ಸಿಂಧು - ಬ್ಯಾಟರ್ - 60 ಲಕ್ಷ ರುಪಾಯಿ
* ಅಜಿಂಕ್ಯ ರಹಾನೆ - ಬ್ಯಾಟರ್ - 50 ಲಕ್ಷ ರುಪಾಯಿ
* ಭಗತ್ ವರ್ಮಾ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಅಜಯ್ ಮಂಡಲ್ - ಆಲ್ರೌಂಡರ್ - 20 ಲಕ್ಷ ರುಪಾಯಿ
* ಶೇಕ್ ರಶೀದ್‌ - ಬ್ಯಾಟರ್ - 20 ಲಕ್ಷ ರುಪಾಯಿ.

IPL 2023 ಹರಾಜಿನ ಬಳಿಕ ಆರ್‌ಸಿಬಿ ತಂಡ ಹೀಗಿದೆ, ಈ ಬಾರಿ ಇದೆಯಾ ಟ್ರೋಫಿ ಅವಕಾಶ?

ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ರೀಟೈನ್‌ ಮಾಡಿಕೊಂಡ ವಿವರ:  

ಎಂ ಎಸ್ ಧೋನಿ (ನಾಯಕ), ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಖೇಶ್ ಚೌಧರಿ, ಸಿಂಘ್ ಚೌಧರಿ, ಮತೀಶ ಚೌಧರಿ. , ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.

Follow Us:
Download App:
  • android
  • ios