IPL 2022: ಟೀಂ​ ಇಂಡಿಯಾಗೆ ಸಿಕ್ಕೇ ಬಿಟ್ಟ ಸ್ಲಾಗ್​ ಓವರ್ ಸ್ಪೆಶಲಿಸ್ಟ್​..!

* ಪಂಜಾಬ್ ಕಿಂಗ್ಸ್‌ ಪರ ಸ್ಲಾಗ್ ಓವರ್‌ನಲ್ಲಿ ಮಿಂಚುತ್ತಿದ್ದಾರೆ ಆರ್ಶದೀಪ್ ಸಿಂಗ್

* 16 ರಿಂದ 20 ಓವರ್​​ಗಳಲ್ಲಿ ಮಾರಕ ದಾಳೀ ನಡೆಸುತ್ತಿದ್ದಾರೆ ಯುವ ವೇಗಿ

* 23 ವರ್ಷದ ಅರ್ಶ​ದೀಪ್ ಭಾರತದ ಭರವಸೆಯ ಸ್ಲಾಗ್ ಓವರ್ ಸ್ಪೆಷಲಿಸ್ಟ್ ಅಗಬಲ್ಲರು

IPL 2022 Young Pacer Arshdeep Singh become India death over specialist kvn

ಮುಂಬೈ(ಮೇ.03): ಐಪಿಎಲ್ (IPL 2022)​​​, ವಿಶ್ವದ ಜನಪ್ರಿಯ ಟಿ20 ಲೀಗ್ ಅನ್ನಿಸಿಕೊಂಡ್ರೂ ಈ ಟೂರ್ನಿಗೆ ಬಗ್ಗೆ ಒಂದು ಅಪವಾದವಿದೆ. ಇದು ಬ್ಯಾಟರ್​​​ಗಳ ಕ್ರೀಡೆ. ಇಲ್ಲಿ ಬೌಲರ್ಸ್​ ಮ್ಯಾಜಿಕ್​ ಕಮ್ಮಿ. ಬ್ಯಾಟರ್​ಗಳ ರೋರಿಂಗ್ ಹೆಚ್ಚು. ಬೌಲರ್​​ಗಳ ಮಾರಣ ಹೋಮ ನಡೆಯುತ್ತೆ. ಅದ್ರಲ್ಲೂ ಕೊನೆಯ ಐದು ಓವರ್​​ ಅಂದ್ರೆ ಸ್ಲಾಗ್ ಓವರ್​​ಗಳಲ್ಲಿ  ಬೌಲರ್ಸ್​ಗೆ ​ದೊಡ್ಡ ಚಾಲೆಂಜ್ ಇರುತ್ತೆ. 16 ರಿಂದ 20 ಓವರ್​​ಗಳಲ್ಲಿ ಬೇಕಾಬಿಟ್ಟಿ ದಂಡಿಸಿಕೊಂಡು ಸರಾಗವಾಗಿ ರನ್ ಬಿಟ್ಟು ಕೊಡ್ತಾರೆ.

ಇಂತಹ ಬ್ಯಾಟರ್​ಗಳ ನೆಚ್ಚಿನ ಕ್ರೀಡೆಯಲ್ಲಿ ಬೌಲರ್​​​ ಓಬ್ಬ ಸಕ್ಸಸ್​ ಸಾಧಿಸೋದು ನಿಜಕ್ಕೂ ಸುಲಭವಲ್ಲ. ಆತ ನಿಜಕ್ಕೂ ಎಂಟೆದೆಯ ಬೌಲರ್ ಆಗಿರಬೇಕು. ಅದ್ರಲ್ಲೂ ಸ್ಲಾಗ್​ ಓವರ್​​ಗಳಲ್ಲಿ ಯಶಸ್ವಿಯಾಗೋದಂತೂ ಇನ್ನೂ ಕಠಿಣ. ಅಂತರದಲ್ಲಿ ಪಂಜಾಬ್​ ಕಿಂಗ್ಸ್​ (Punjab Kings) ತಂಡದ ಓರ್ವ ಬೌಲರ್​ ಸ್ಲಾಗ್​​​​ನಲ್ಲಿ ಅದ್ಭುತ ದಾಳಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಕರಾರುವಕ್​ ಬೌಲಿಂಗ್​ ಮಾಡಿ ಬ್ಯಾಟರ್​​ಗಳ ಆರ್ಭಟಕ್ಕೆ ಫುಲ್ ಸ್ಟಾಪ್​​ ಹಾಕಿದ್ದಾರೆ. ನಿಜಕ್ಕೂ ಬೌಲರ್​ ಅಂದ್ರೆ ಹೀಗಿರ್ಬೇಕು. ಸ್ಲಾಗ್​​​​​​​​ ಓವರ್​​​ಗಳಲ್ಲಿ ಈತನಂತೆ ರನ್​ಗೆ ಕಡಿವಾಣ ಹಾಕಬೇಕು ಎಂದು ಫ್ಯಾನ್ಸ್​ ಮಾತನಾಡಿಕೊಳ್ತಿದ್ದಾರೆ. ಅಂದಹಾಗೇ ಆ ಸ್ಲಾಗ್ ಓವರ್​ ಸ್ಪೆಶಲಿಸ್ಟ್ ಮತ್ಯಾರು ಅಲ್ಲ, ಆತನೇ ಪಂಜಾಬ್​​ ತಂಡದ ಅರ್ಶ​ದೀಪ್ ಸಿಂಗ್ (Arshdeep Singh)​​.

ಅರ್ಶ​ದೀಪ್​​​​​​​ ಸಿಂಗ್ ಸ್ಲಾಗ್ ಓವರ್​ ಪಂಟರ್​​:

ಯೆಸ್​​​, ಪಂಜಾಬ್​ ಕಿಂಗ್ಸ್​  ತಂಡದ ಯುವ ಬೌಲರ್ ಅರ್ಶ​ದೀಪ್ ಸಿಂಗ್ ಸ್ಲಾಗ್​​​​ ಸ್ಪೆಶಲಿಸ್ಟ್​ ಆಗಿ ಹೊರಹೊಮ್ಮಿದ್ದಾರೆ. ಪ್ರಸಕ್ತ ಸೀಸನ್​​ನಲ್ಲಿ ಯಾವಗೆಲ್ಲಾ ಡೆತ್ ಓವರ್ಸ್​ನಲ್ಲಿ ದಾಳಿಗಿಳಿದಿದ್ದಾರೋ ಆವಾಗಲೆಲ್ಲಾ ಪರಿಣಾಮಕಾರಿ ಸ್ಪೆಲ್​ ಮಾಡಿದ್ದಾರೆ. ಘಟನಾನುಘಟಿ ಬ್ಯಾಟರ್​​​ಗಳು ಈತನ ಬೌಲಿಂಗ್​​​ನಲ್ಲಿ ರನ್​ ಗಳಿಸಲು ಫೇಲಾಗಿದ್ದಾರೆ. ಬರೀ ರನ್​​ ಕಡಿಣವಾಣ ಮಾತ್ರವಲ್ಲದೇ, ವಿಕೆಟ್​ ಬೇಟೆಯಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಯಸ್​​, ಇದು ನಿಮಗೆ ಅಚ್ಚರಿ ಅನ್ನಿಸಿದ್ರೂ ಸತ್ಯ. 16 ರಿಂದ 20ನೇ ಓವರ್​​ನಲ್ಲಿ ಖ್ಯಾತ ಬೌಲರ್ಸ್​ಗಳೇ ಮನಬಂದಂತೆ ಚಚ್ಚಿಸಿಕೊಂಡಿದ್ದಾರೆ. ಆದ್ರೆ 23 ವರ್ಷದ ಅರ್ಶ​ದೀಪ್ ಮಾತ್ರ ಅವರಿಗೆ ತದ್ವಿರುದ್ಧ. ಅಂತರಾಷ್ಟ್ರೀಯ ಪಂದ್ಯವಾಡಿದ ಅನುಭವವಿಲ್ಲದಿದ್ರೂ ಸ್ಟಾರ್​​ ಬೌಲರ್​​ಗಳನ್ನೇ ಮೀರಿಸಿದ್ದಾರೆ. ಈವರೆಗೆ ಆಡಿದ 9 ಪಂದ್ಯಗಳನ್ನ ಆಡಿದ್ದು, ಅದರಲ್ಲಿ ಸ್ಲಾಗ್​​ನಲ್ಲಿ 10 ಓವರ್​​​ ಬೌಲಿಂಗ್​ ಮಾಡಿದ್ದು ಬರೀ 66 ರನ್​​​​​​​​​​ ಅಷ್ಟೇ ಬಿಟ್ಟುಕೊಟ್ಟಿದ್ದಾರೆ. ಇದು ಪ್ರಸಕ್ತ ಐಪಿಎಲ್​​ನ ಸ್ಲಾಗ್​ ಓವರ್​​ಗಳಲ್ಲಿ ಅರ್ಶ​ದೀಪ್​ ಬಿಟ್ಟುಕೊಟ್ಟ ಅತೀ ಕಮ್ಮಿ ರನ್​ ಆಗಿದೆ. ಇನ್ನು ರನ್​​ಗೆ ಕಡಿವಾಣ ಮಾತ್ರವಲ್ಲ, 2 ವಿಕೆಟ್​​​ ಕೂಡ ಪಡೆದು ಸೈ ಅನ್ನಿಸಿಕೊಂಡಿದ್ದಾರೆ. 

ಅರ್ಶ​ದೀಪ್​​ಗೆ ಟೀಂ​ ಇಂಡಿಯಾದಲ್ಲಿ ಚಾನ್ಸ್ ಸಿಗುತ್ತಾ..?: 

ಐಪಿಎಲ್​​ನಲ್ಲಿ ಅರ್ಶ​ದೀಪ್​ ಸಿಂಗ್ ರ ಇಂಪ್ರೆಸ್ಸಿವ್​​ ದಾಳಿ ನೋಡಿದೋರಿಗೆಲ್ಲಾ ಈ ಪ್ರಶ್ನೆ ಖಂಡಿತ ಕಾಡಿರುತ್ತೆ. ಇಂತಹ ಟ್ಯಾಲೆಂಟ್​ ಬೌಲರ್​​​​​​​ಗೆ ಟೀಂ​ ಇಂಡಿಯಾ ಸ್ಥಾನ ನೀಡಬೇಕು. ಆಗ ಭಾರತ ತಂಡದ ಬೌಲಿಂಗ್​​ ವಿಭಾಗ ಮತ್ತಷ್ಟ್ರ ಸಾಂಗ್ ಆಗಲಿದೆ ಅನ್ನೋ ಟಾಕ್ಸ್ ಕೇಳಿ ಬರ್ತಿದೆ. ಕ್ರಿಕೆಟ್​​ ಎಕ್ಸ್​ಫರ್ಟ್ಸ್ ಸೇರಿದಂತೆ ಅಭಿಮಾನಿಗಳು ಲೆಫ್ಟಿ ಬೌಲರ್​ ಪರ ಬ್ಯಾಟ್​ ಬೀಸ್ತಿದ್ದಾರೆ. 

IPL 2022: ಈತನಿಗೆ ಕುಟುಂಬಕ್ಕಿಂತ ಕ್ರಿಕೆಟ್​​ ಆಟವೇ ದೊಡ್ಡದಾಯ್ತು..!

ಸದ್ಯ ಮೆನ್​​​ ಇನ್​ ಬ್ಲೂ ಪಡೆಯಲ್ಲಿ ಬುಮ್ರಾ ಬಿಟ್ರೆ ಮತ್ತೊಮ್ಮ ಸ್ಲಾಗ್ ಓವರ್​ ಸ್ಪೆಶಲಿಸ್ಟ್ ಇಲ್ಲ. ಇದು ತಂಡದ ಹಿನ್ನೆಡೆಗೆ ಕಾರಣವಾಗ್ತಿದೆ. ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಈ ವೇಳೆಗಾದ್ರು ಅರ್ಶ​ದೀಪ್​ಗೆ ತಂಡದಲ್ಲಿ ಚಾನ್ಸ್ ಕೊಟ್ರೆ ರೋಹಿತ್​ ಪಡೆಯ ನಸೀಬು ಬದಲಾಗಲಿದೆ. ಅದೃಷ್ಟ ಬದಲಿಸೋ ತಾಕತ್ತು, ಕೆಪಾಸಿಟಿ ಕೂಡ ಪಂಜಾಬಿ ಬೌಲರ್​ಗಿದೆ. ಸೆಲೆಕ್ಟರ್ಸ್​ ಮುಂಬರೋ ದಕ್ಷಿಣ ಆಫ್ರಿಕಾ ಟಿ20 ಸರಣಿಯಲ್ಲಾದ್ರು ಸ್ಲಾಗ್ ಓವರ್ ಸ್ಪೆಷಲಿಸ್ಟ್​​​ಗೆ ಮಣೆ ಹಾಕ್ತಾರಾ ಅನ್ನೋದನ್ನ ಕಾದು ನೋಡಬೇಕು.

Latest Videos
Follow Us:
Download App:
  • android
  • ios