Asianet Suvarna News Asianet Suvarna News

IPL 2022: ದಿನೇಶ್​ ಕಾರ್ತಿಕ್ ಡಿಫರೆಂಟ್​​ ಹೆಲ್ಮೆಟ್​​ ಹಾಕಿ ಆಡೋದ್ಯಾಕೆ..?

* ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಅಬ್ಬರಿಸುತ್ತಿರುವ ದಿನೇಶ್ ಕಾರ್ತಿಕ್

* ಮ್ಯಾಚ್‌ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ದಿನೇಶ್ ಕಾರ್ತಿಕ್

* ಹೆಲ್ಮೆಟ್ ವಿಚಾರದಲ್ಲೂ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿರುವ ಡಿಕೆ

IPL 2022 Why is RCB Cricketer Dinesh Karthik helmet different from others kvn
Author
Bengaluru, First Published Apr 9, 2022, 4:51 PM IST

ಮುಂಬೈ(ಏ.09): ದಿನೇಶ್ ಕಾರ್ತಿಕ್ (Dinesh Karthik)​​ ಆರ್​ಸಿಬಿ ಸೈನ್ಯ ಸೇರಿಕೊಂಡ ಬಳಿಕ ಫುಲ್​ ವೈಲೆಂಟ್ ಆಗಿದ್ದಾರೆ. ಫಿನಿಶಿಂಗ್​​ ಮೂಲಕ ಎರಡು ಪಂದ್ಯ ಗೆಲ್ಲಿಸಿ ಭಾರೀ ಹವಾ ಎಬ್ಬಿಸಿದ್ದಾರೆ. ಸದ್ಯಕ್ಕೆ ಆರ್​ಸಿಬಿ (RCB) ಮಟ್ಟಿಗೆ ಡಿಕೆನೇ ಬಾಸು. ಡಿಕೆನೇ ಆಪತ್ಬಾಂಧವ. ಇಂತಹ ಡಿಕೆ ಬಾಸು ಈಗ ಫಿನಿಶಿಂಗ್​​ ಮಾತ್ರವಲ್ಲದೇ ಇನ್ನೊಂದು ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಹೌದು, ಐಪಿಎಲ್​​ನಲ್ಲಿ (IPL 2022) ಡಿಕೆ ಸಾಲಿಡ್ ಪರ್ಫಾಮೆನ್ಸ್​ ಜೊತೆ ಅವರ ಹೆಲ್ಮೆಟ್​​​ಗೂ ಅಭಿಮಾನಿಗಳು ಮನಸೋತಿದ್ದಾರೆ. 

ಬ್ಯಾಟಿಂಗ್​-ಕೀಪಿಂಗ್ ವೇಳೆ ಡಿಫರೆಂಟ್​​ ಹೆಲ್ಮೆಟ್​:

ಕ್ರಿಕೆಟ್ ಆಟದಲ್ಲಿ ಆಟಗಾರರು ಭಿನ್ನ ಭಿನ್ನ ಹೆಲ್ಮೆಟ್ ಧರಿಸಿ ಆಡೋದನ್ನ ನೀವೆಲ್ಲರೂ ನೋಡ್ತೀರಾ. ಸಹಜವಾಗಿ ಪ್ಲೇಯರ್ಸ್​ ಟ್ರೆಡಿಶನಲ್​ ಹೆಲ್ಮೆಟ್ ಹಾಕಿಕೊಳ್ಳುತ್ತಾರೆ. ಅಂದ್ರೆ ಟೀಂ​ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಜೋ ರೂಟ್​​, ಕನ್ನಡಿಗ ಕೆಎಲ್ ರಾಹುಲ್, ಡೇವಿಡ್​ ವಾರ್ನರ್ ಸೇರಿದಂತೆ ಬಹುತೇಕ ಸ್ಟಾರ್​ ಕ್ರಿಕೆಟರ್ಸ್​ ‘ಸ್ರೇ’ ಹೆಲ್ಮೆಟ್​ ಹಾಕಿ ಆಡುತ್ತಾರೆ. ಆದ್ರೆ ಇವರೆಲ್ಲಗಿಂತ ಡಿಫರೆಂಟ್​ ಹೆಲ್ಮೆಟ್​​ ಅನ್ನ ಆರ್​ಸಿಬಿ ಫಿನಿಶರ್​ ದಿನೇಶ್​​ ಕಾರ್ತಿಕ್​​ ಬಳಸುತ್ತಿದ್ದಾರೆ.

60 ರಿಂದ 70 ಪರ್ಸಂಟ್ ಪ್ಲೇಯರ್ಸ್​ ಟ್ರೆಡಿಶನಲ್​ ಹೆಲ್ಮೆಟ್ ಹಾಕಿಕೊಳ್ತಿದ್ರೆ, ಡಿಕೆ ಮಾತ್ರ ಏಕೆ ವಿಭಿನ್ನ ಹೆಲ್ಮೆಟ್​ ಧರಿಸಿ ಆಡ್ತಾರೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. ಸದ್ಯ ನಿಮ್ಮ ಪ್ರಶ್ನೆಗೆ ನಾವೀಗ ಉತ್ತರ​​ ಕೊಡ್ತೀವಿ ನೋಡಿ. ಆರಂಭದಲ್ಲಿ ಸಾಂಪ್ರದಾಯಕ ಹೆಲ್ಮೆಟ್ ಧರಿಸ್ತಿದ್ದ ಡಿಕೆ ಬಳಿಕ ಅಮೆರಿಕನ್​​​ ಬೇಸ್​​ ಬಾಲ್​​​​​ ಹಾಗೂ ರಗ್ಬಿಯಲ್ಲಿ ಬಳಸುವ ಹೆಲ್ಮೆಟ್​​ಗಳನ್ನ ಬಳಸಲಾರಂಭಿಸಿದ್ರು. ಸದ್ಯ ಬ್ಯಾಟಿಂಗ್​ ಮಾತ್ರವಲ್ಲ, ವಿಕೆಟ್ ಕೀಪಿಂಗ್​ ವೇಳೆಯೂ ಡಿಫರೆಂಟ್ ಹೆಲ್ಮೆಟ್​ ಹಾಕಿಕೊಳ್ತಿದ್ದಾರೆ. ಇದಕ್ಕೆ ಕಾರಣ ಉಳಿದ ಎಲ್ಲಾ ಹೆಲ್ಮೆಟ್​ಗಳಿಗಿಂತ ಈ ಬಜ್​ ಹೆಲ್ಮೆಟ್​ ಹಗುರವಾಗಿದೆ. ಇದರಿಂದ ಬ್ಯಾಟಿಂಗ್​​ ಮಾಡಲು ಸುಲಭವಾಗಲಿದೆ. ತುಂಬಾ ಫ್ರೀ ಆಗಿ ಕೀಪಿಂಗ್​ ಮಾಡಬಹುದು. ಈ ಕಾರಣಕ್ಕೆ ಡಿಫರೆಂಟ್ ಹೆಲ್ಮೆಟ್​​ ಹಾಕಿಕೊಳ್ಳೋದಾಗಿ ಈ ಹಿಂದೆ ಡಿಕೆ ಹೇಳಿಕೊಂಡಿದ್ರು.

IPL 2022: ಆರ್​ಸಿಬಿ ನಂತರ ಕನ್ನಡಿಗರ ಸಪೋರ್ಟ್ ಯಾವ ತಂಡಕ್ಕೆ ಗೊತ್ತಾ..?

ಇನ್ನು ಡಿಕೆ ಮಾತ್ರವಲ್ಲ ಶ್ರೀಲಂಕಾ ತಂಡದ ದಿಗ್ಗಜ ಕುಮಾರ್ ಸಂಗಕ್ಕರ ಹಾಗೂ ರಾಹುಲ್​ ತ್ರಿಪಾಠಿ ಕೂಡ ಡಿಫರೆಂಟ್​​ ಹೆಲ್ಮೆಟ್​​​​ ಬಳಸಿ ಸುದ್ದಿಯಾಗಿದ್ರು. ಒಟ್ಟಿನಲ್ಲಿ ಬ್ಯಾಟಿಂಗ್​​ ಜೊತೆ ಡಿಫರೆಂಟ್​​ ಹೆಲ್ಮೆಟ್​​​ನಿಂದ ಡಿಕೆ ಸುದ್ದಿಯಲ್ಲಿರೋದು ಆರ್​ಸಿಬಿ ಫ್ಯಾನ್ಸ್​​ಗೆ ನಿಜಕ್ಕೂ ಖುಷಿಯ ವಿಚಾರವೇ.

ಕಳೆದ ಮೂರು ಪಂದ್ಯಗಳಲ್ಲೂ ಅಜೇಯ ಬ್ಯಾಟಿಂಗ್ ನಡೆಸಿರುವ ಡಿಕೆ:

ಆರ್​ಸಿಬಿ ಆಡಿರೋ ಮೂರು ಮ್ಯಾಚ್​​​ನಲ್ಲೂ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಮಾಡಿ ಮ್ಯಾಚ್ ಫಿನಿಶ್ ಮಾಡಿದ್ದಾರೆ. ಮೊದಲ ಪಂದ್ಯದಲ್ಲಿ ಜಸ್ಟ್​ 14 ಬಾಲ್​​ಗೆ ಅಜೇಯ 32 ರನ್ ಬಾರಿಸಿ, ಆರ್​​ಸಿಬಿ 205 ರನ್ ಹೊಡೆಯಲು ಕಾರಣರಾದ್ರು. ಆದರೆ ಪಂಜಾಬ್ ಚೇಸ್ ಮಾಡಿ ಆ ಪಂದ್ಯ ಗೆದ್ದುಕೊಳ್ತು. ಕೆಕೆಆರ್ (KKR)​ ವಿರುದ್ಧ ಅಜೇಯ 14 ಮತ್ತು ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ಅಜೇಯ 44 ರನ್ ಸಿಡಿಸಿ ಮ್ಯಾಚ್ ಫಿನಿಶ್ ಮಾಡಿದ್ರು. ರಾಯಲ್ಸ್ ವಿರುದ್ಧ ಡಿಕೆ ಆಟ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಆರ್​ಸಿಬಿಯಲ್ಲಿ ಫಿನಿಶರ್ ಜವಾಬ್ದಾರಿ ಸಿಕ್ಕಿದೆ. ತನಗೆ ಕೊಟ್ಟ ಜವಾಬ್ದಾರಿಯನ್ನ ಕಾರ್ತಿಕ್ ಅಚ್ಚುಕಟ್ಟಾಗಿ ನಿರ್ವಾಹಿಸುತ್ತಿದ್ದಾರೆ. ಎಬಿ ಡಿವಿಲಿಯರ್ಸ್ ಸ್ಥಾನವನ್ನ ತುಂಬಿ, ಅವರ ಅನುಪಸ್ಥಿತಿ ಕಾಡದಂತೆ ನೋಡಿಕೊಳ್ತಿದ್ದಾರೆ. ಡಿಕೆ ಆಟ ಹೀಗೆ ಮುಂದುವರೆದ್ರೆ, ಆರ್​ಸಿಬಿ ಫಸ್ಟ್​ ಟೈಮ್ ಐಪಿಎಲ್ ಟ್ರೋಫಿ ಹಿಡಿಯೋದು ಗ್ಯಾರಂಟಿ.
 

Follow Us:
Download App:
  • android
  • ios