* ಭರ್ಜರಿಯಾಗಿ ಸಾಗುತ್ತಿದೆ 15ನೇ ಆವೃತ್ತಿಯ ಐಪಿಎಲ್‌* ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ ಕನ್ನಡಿಗರು* ಆರ್‌ಸಿಬಿ ಬಳಿಕ ಕನ್ನಡಿಗರ ಸಪೋರ್ಟ್‌ ಯಾವ ತಂಡಕ್ಕೆ ಗೊತ್ತಾ..?

ಬೆಂಗಳೂರು(ಏ.09): ಐಪಿಎಲ್​. ಇದು ಫ್ರಾಂಚೈಸಿ ಲೀಗ್​. ಯಾವುದೇ ರಾಜ್ಯ ತಂಡ ಇಲ್ಲಿ ಪ್ರತಿನಿಧಿಸಲ್ಲ. ರಾಜ್ಯದ ಒಂದು ನಗರದ ತಂಡವೊಂದು ಈ ಫ್ರಾಂಚೈಸಿ ಲೀಗ್​​ನಲ್ಲಿ ಭಾಗವಹಿಸುತ್ತೆ. ಆಟಗಾರರು ಅಷ್ಟೆ. ಯಾರು ಎಲ್ಲಿ ಬೇಕಾದರೂ ಆಡಬಹುದು. ಹಾಗಾಗಿ ಇಲ್ಲಿ ಒಂದು ರಾಜ್ಯದ ಕ್ರಿಕೆಟ್ ಫ್ಯಾನ್ಸ್ ಒಂದೇ ತಂಡವನ್ನ ಸಪೋರ್ಟ್​ ಮಾಡಲ್ಲ. ತಮಗೆ ಇಷ್ಟವಾದ ಟೀಮ್​​ಗೆ ಸಪೋರ್ಟ್​ ಮಾಡ್ತಾರೆ. ಆದರೆ ಹೆಚ್ಚಿನ ಮಂದಿ ತಮ್ಮ ರಾಜ್ಯದ ತಂಡವನ್ನ ಬೆಂಬಲಿಸುತ್ತಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore). ಇದು ಬೆಂಗಳೂರು ಟೀಮ್ ಆದ್ರೂ ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ಸಂಪೂರ್ಣ ಸಪೋರ್ಟ್​ ಆರ್​ಸಿಬಿಗೆ ಇರಲ್ಲ. ಅರ್ಧ ಮಂದಿ ಆರ್​ಸಿಬಿಗೆ ಜೈ ಅಂದ್ರೆ ಉಳಿದ ಅರ್ಧ ಮಂದಿ ಉಳಿದ 9 ತಂಡಗಳಿಗೆ ಜೈ ಅಂತಾರೆ. ಎಂಎಸ್ ಧೋನಿ ಇರೋ ಕಾರಣಕ್ಕೆ ಅದೆಷ್ಟೋ ಮಂದಿ ಸಿಎಸ್​ಕೆಗೆ ಸಪೋರ್ಟ್​ ಮಾಡ್ತಾರೆ. ಸಚಿನ್ ತೆಂಡುಲ್ಕರ್ ಮೆಂಟರ್ ಆಗಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಅವರ ಡೈ ಹಾರ್ಡ್​ ಫ್ಯಾನ್ಸ್ ಎಲ್ಲ ಮುಂಬೈ ಇಂಡಿಯನ್ಸ್ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಒಂದೊಂದು ಕಾರಣಕ್ಕೆ ಒಂದೊಂದು ತಂಡಕ್ಕೆ ಸಪೋರ್ಟ್​ ಮಾಡ್ತಾರೆ.

ಲಖನೌ ಹಿಂದೆ ಕನ್ನಡಿಗರು ಬಿದ್ದಿರೋದ್ಯಾಕೆ..?:

ಹೌದು, ಕರ್ನಾಟಕ ಕ್ರಿಕೆಟ್ ಫ್ಯಾನ್ಸ್​ಗಳಲ್ಲಿ ಕೆಲವರು ಆರ್​​ಸಿಬಿಗಿಂತ ಲಖನೌ ಸೂಪರ್ ಜೈಂಟ್ಸ್​ಗೆ (Lucknow Supergiants) ಸಪೋರ್ಟ್​ ಮಾಡ್ತಿದ್ದಾರೆ. ಅಯ್ಯೋ, ಕನ್ನಡಿಗ ಕೆಎಲ್ ರಾಹುಲ್ (KL Rahul) ಕ್ಯಾಪ್ಟನ್ ಆಗಿದ್ದಾರೆ. ಟೀಮ್​ನಲ್ಲಿ ರಾಹುಲ್ ಸೇರಿದಂತೆ ಮೂವರು ಕನ್ನಡಿಗರಿದ್ದಾರೆ. ಹಾಗಾಗಿ ಲಖನೌಗೆ ಕನ್ನಡಿಗರ ಸಪೋರ್ಟ್​ ಮಾಡ್ತಾರೆ ಅಂತ ನೀವು ಅಂದುಕೊಳ್ಳಬಹುದು. ನೋ ಚಾನ್ಸ್. ಹಾಗಾದರೆ ಪಂಜಾಬ್ ಕಿಂಗ್ಸ್ ಕೋಚ್ ಅನಿಲ್ ಕುಂಬ್ಳೆ ಮತ್ತು ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ (Mayank Agarwal) ಕನ್ನಡಿಗರೇ. ಆ ತಂಡಕ್ಕೆ ಯಾಕೆ ಸಪೋರ್ಟ್​ ಮಾಡಲ್ಲ. ರಾಜಸ್ಥಾನ ರಾಯಲ್ಸ್ (Rajasthan Royals) ಟೀಮ್​ನಲ್ಲಿ ನಾಲ್ವರು ಕನ್ನಡಿಗರಿದ್ದಾರೆ. ಆದ್ರೂ ರಾಯಲ್ಸ್​​ಗೆ ಕನ್ನಡಿಗರ ಬೆಂಬಲವಿಲ್ಲ. ಲಖನೌಗೆ ಏನು ಅಂತಾ ಸ್ಪೆಷಾಲಿಟಿ.

IPL 2022: ಮುಂಬೈಯನ್ನು ಮುಳುಗಿಸುತ್ತಾ ಆರ್‌ಸಿಬಿ..?

ಲಖನೌ ಚಾಂಪಿಯನ್ ಆದ್ರೆ ರಾಹುಲ್ ಭವಿಷ್ಯದ ಟೀಂ ಇಂಡಿಯಾ ನಾಯಕ:

ಭಾರತ ಮೂರು ಮಾದರಿ ತಂಡಕ್ಕೆ ಉಪನಾಯಕನಾಗಿರುವ ರಾಹುಲ್, ರೋಹಿತ್​ ಶರ್ಮಾ (Rohit Sharma) ನಂತರ ಟೀಂ ಇಂಡಿಯಾ (Team India) ನಾಯಕನಾಗೋ ಕನಸು ಕಾಣ್ತಿದ್ದಾರೆ. ಈ ಕನಸು ನನಸಾಗಬೇಕಾದರೆ ಈ IPLನಲ್ಲಿ ನಾಯಕನಾಗಿ ರಾಹುಲ್ ಸಕ್ಸಸ್ ಆಗಬೇಕು. ಈ ಸಲ ಲಖನೌ ಟೀಮ್​​​​ಗೆ IPL ಟ್ರೋಫಿ ಗೆಲ್ಲಿಸಿಕೊಟ್ಟರೆ ಆಗ ರಾಹುಲ್ ನಾಯಕತ್ವದ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಲಿದ್ದಾರೆ. ಆಗ ರಾಹುಲ್​​​ ಟೀಂ ಇಂಡಿಯಾ ನಾಯಕನಾಗಲಿದ್ದಾರೆ.

ದ್ರಾವಿಡ್​-ಕುಂಬ್ಳೆ ಬಿಟ್ಟರೆ ಕರ್ನಾಟಕದ ಆಟಗಾರರು ನಾಯಕರಾಗಿಲ್ಲ:

ಹೌದು, ಇದೇ ರೀಸನ್​​​ಗೆ ಕನ್ನಡಿಗರು ಆರ್​​ಸಿಬಿಗಿಂತ ಲಖನೌ ಟೀಮ್​ಗೆ ಸಪೋರ್ಟ್​ ಮಾಡ್ತಿರೋದು. ಕರ್ನಾಟಕದ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕಾಯಂ ನಾಯಕರಾಗಿದ್ದರು. ಜಿಆರ್ ವಿಶ್ವನಾಥ್ ಒಂದೆರಡು ಪಂದ್ಯಕ್ಕೆ ಹಂಗಾಮಿ ನಾಯಕರಾಗಿದ್ದು, ಬಿಟ್ರೆ ಮತ್ಯಾವ ಕನ್ನಡಿಗನೂ ನಾಯಕನಾಗಿಲ್ಲ. ದ್ರಾವಿಡ್​-ಕುಂಬ್ಳೆ ನಂತರ ಟೀಂ ಇಂಡಿಯಾ ಕಾಯಂ ನಾಯಕ ಆಗೋ ಅವಕಾಶ ಇರೋದು ರಾಹುಲ್​ಗೆ ಮಾತ್ರ. ರಾಹುಲ್ ಬಿಟ್ಟರೆ ಭವಿಷ್ಯದಲ್ಲಿ ಕರ್ನಾಟಕದ ಆಟಗಾರನೊಬ್ಬ ಟೀಂ ಇಂಡಿಯಾ ಕ್ಯಾಪ್ಟನ್ ಆಗ್ತಾರೋ ಇಲ್ವೋ ಗೊತ್ತಿಲ್ಲ. ಹಾಗಾಗಿ ರಾಹುಲ್ ಈ ಸಲ ಐಪಿಎಲ್ ಕಪ್ ಗೆಲ್ಲಲಿ, ಮುಂದೆ ಟೀಂ ಇಂಡಿಯಾ ನಾಯಕನಾಗಲಿ ಅಂತ ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ಲಖನೌ ಟೀಮ್​ಗೆ ಸಪೋರ್ಟ್​ ಮಾಡ್ತಿದ್ದಾರೆ. ಆರ್​​ಸಿಬಿಯಷ್ಟೇ ಲಕ್ನೋ ಟೀಮ್ ಅನ್ನ ಪ್ರೀತಿಸ್ತಿದ್ದಾರೆ.