Asianet Suvarna News Asianet Suvarna News

IPL 2022: ಆ ಲಕ್ಕಿ ಪ್ಲೇಯರ್​​ ಕೈಬಿಟ್ಟು ತಪ್ಪು ಮಾಡ್ತಾ ಸಿಎಸ್​ಕೆ..?

* ಪ್ಲೇ ಆಫ್‌ಗೇರಲು ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್‌

* ಹಾಲಿ ಚಾಂಪಿಯನ್‌ ತಂಡಕ್ಕೆ ಕಾಡಿದ ಸುರೇಶ್ ರೈನಾ

* ಚೆನ್ನೈ ತಂಡ ಹಿಂದೆಂದೂ ಕಾಣದಷ್ಟು ಘನಘೋರ ವೈಫಲ್ಯ ಅನುಭವಿಸಿದೆ

IPL 2022 Chennai Super Kings nothing without Suresh Raina CSK fails Qualify Play offs kvn
Author
Bengaluru, First Published May 14, 2022, 5:44 PM IST

ಬೆಂಗಳೂರು(ಮೇ.14): ಸಿಎಸ್​ಕೆ (CSK), ಈ ಹೆಸರನ್ನ ಕೇಳಿದ್ರೆ ಎದುರಾಳಿ ತಂಡಗಳು ಬೆಚ್ಚಿ ಬೀಳುವ ಕಾಲವೊಂದಿತ್ತು. ಎಂತಹ ತಂಡವಾದ್ರು ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಹೆಸರು ಕೇಳಿದ್ರೆ ಸಾಕು ಥಂಡಾ ಹೊಡಿತಿತ್ತು. ಅಂತಹ ಬಲಿಷ್ಠ ಮತ್ತು ಡೇಂಜರಸ್​​​ ತಂಡವೆನಿಸಿಕೊಂಡಿತ್ತು ಚೆನ್ನೈ. ಧೋನಿ & ಟೀಮ್​​ ಒಮ್ಮೆ ಅಂಗಳಕ್ಕಿಳಿದ್ರೆ ಪ್ಲೇ ಆಫ್​​ ಟಿಕೆಟ್​​ ಫಿಕ್ಸ್ ಅನ್ನೋ ಮಾತಿತ್ತು. ಆದ್ರೆ ಇಂತಹ ತಂಡಕ್ಕೆ ಈಗ ಅದೇನಾಗಿಯೋ ಗೊತ್ತಿಲ್ಲ. ಐಪಿಎಲ್​ ಆರಂಭವಾದಾಗಿನಿಂದ ಕಾಯಂ ಆಗಿ ಪ್ಲೇ ಆಫ್​​ಗೆ ಎಂಟ್ರಿಕೊಡ್ತಿದ್ದ ಚೆನ್ನೈ, ಗ್ರೂಪ್​ ಸ್ಟೇಜ್​ನಲ್ಲೇ ಹೊರಬಿದ್ದು ನಿರಾಸೆ ಅನುಭವಿಸ್ತಿದೆ.

ಪ್ರಸಕ್ತ ಐಪಿಎಲ್​​​ನಲ್ಲಿ ಚೆನ್ನೈ ತಂಡ ಹಿಂದೆಂದೂ ಕಾಣದಷ್ಟು ಘನಘೋರ ವೈಫಲ್ಯ ಅನುಭವಿಸಿದೆ. 4 ಬಾರಿ ಚಾಂಪಿಯನ್​​ ಟೀಂ, ಮುಂಬೈ ವಿರುದ್ಧದ ಸೋಲಿನೊಂದಿಗೆ ಪ್ರಸಕ್ತ ಆವೃತ್ತಿಯಿಂದ ಎಲಿಮಿನೇಟ್ ಆಗಿದೆ. ಅದು ಲೀಗ್​ ಹಂತದ ಇನ್ನೂ ಎರಡು ಪಂದ್ಯ ಬಾಕಿ ಇರುವಂತೆಯೇ. ಇದು ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಾದ ದೊಡ್ಡ ಮುಖಭಂಗ ಮತ್ತು ದೊಡ್ಡ ಪಾಠ. ಸಿಎಸ್​ಕೆ ಕಳಪೆ ಪರ್ಫಾಮೆನ್ಸ್​​ಗೆ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ. ಅದ್ರೆ ಆ ಮ್ಯಾಚ್ ವಿನ್ನರ್​ ತಂಡದಲ್ಲಿ ಇಲ್ಲದಿರೋದೆ ಅಸಲಿಗೆ ಚೆನ್ನೈಗೆ ಈ ದುಸ್ಥಿತಿ ಬಂದೊಂದಗಿದೆ. ಆತ ನಿಜಕ್ಕೂ ಸಿಎಸ್​​ಕೆಗೆ ಲಕ್ಕಿ ಪ್ಲೇಯರ್​​. ಆತ ಇಲ್ಲದಿದ್ದಾಗಲೆಲ್ಲಾ ಧೋನಿ ಪಡೆ ಗ್ರೂಪ್ ಸ್ಟೇಜ್​​ನಲ್ಲಿ ಪ್ರಯಾಣ ಅಂತ್ಯಗೊಳಿಸಿದೆ.

2020-22ನೇ IPLನಿಂದ ರೈನಾ ಔಟ್​​, ಚೆನ್ನೈಗೆ ಶಾಕ್​​:

ವೀಕ್ಷಕರೇ, ಇದು ಕಾಕತಾಳೀಯಾವೋ ಅಥವಾ ಸಂದರ್ಭನೋ ಗೊತ್ತಿಲ್ಲ. ಯಾವಗೆಲ್ಲಾ ಚೆನ್ನೈ ತಂಡ ಪವರ್​ ಹಿಟ್ಟರ್​ ಸುರೇಶ್​ ರೈನಾರನ್ನ ಬಿಟ್ಟು ಐಪಿಎಲ್ ಆಡಿದೆಯೋ ಆವಾಗೆಲ್ಲಾ ಚಾಂಪಿಯನ್​ ತಂಡಕ್ಕೆ ಬ್ಯಾಡ್​​ಲಕ್ ವಕ್ಕರಿಸಿದೆ. ಮ್ಯಾಚ್ ವಿನ್ನರ್​ ರೈನಾ ಅಲಭ್ಯರಾದಾಗ ಚೆನ್ನೈ ತಂಡ ಐಪಿಎಲ್​ ಟೂರ್ನಿಯಲ್ಲಿ ಗ್ರೂಪ್ ಸ್ಟೇಜ್​​ನಲ್ಲೇ ಕಿಕೌಟಾಗಿ ತೀವ್ರ ಮುಖಭಂಗ ಅನುಭವಿಸಿದೆ. 

2020ನೇ ಐಪಿಎಲ್ ಆರಂಭಕ್ಕೂ ಮುನ್ನ ರೈನಾ ವೈಯಕ್ತಿಕ ಕಾರಣವೊಡ್ಡಿ ಟೂರ್ನಿಯಿಂದ ಹಿಂದೆ ಸರಿದ್ರು. ಪವರ್​ ಹಿಟ್ಟರ್​​ ಟೂರ್ನಿಯಿಂದ ಹೊರಬಿದ್ದಿದ್ದೆ ತಡ ಚೆನ್ನೈಗೆ ಶಾಕ್​ ಕಾದಿತ್ತು. ಟೂರ್ನಿ ಪೂರ್ತಿ ಕಳಪೆ ಆಟವಾಡಿದ ಮಹಿ ಸೈನ್ಯ, ಐಪಿಎಲ್​ ಹಿಸ್ಟರಿಯಲ್ಲಿ ಫಸ್ಟ್ ಟೈಮ್​​​ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಆಡಿದ 14 ಪಂದ್ಯಗಳಲ್ಲಿ ಬರೀ ಆರು ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನ ಸಂಪಾದಿಸಿತ್ತು.

IPL 2022: ವೃದ್ದ ಅಭಿಮಾನಿಯ ತಲೆಗೆ ಅಪ್ಪಳಿಸಿದ ಪಾಟೀದಾರ್ ಬಾರಿಸಿದ ಸಿಕ್ಸ್‌..! ವಿಡಿಯೋ ವೈರಲ್

ಇನ್ನು ಈ ಸಲ ಟೂರ್ನಿ ಆರಂಭಕ್ಕೂ ಮುನ್ನ ಚಿನ್ನ ತಲಾರನ್ನ ಚೆನ್ನೈಕೈಬಿಡ್ತು. ರಿಟೆನ್ಷನ್​ ವೇಳೆ ಸೀನಿಯರ್ ಆಟಗಾರರನ್ನ ತಂಡ ಉಳಿಸಿಕೊಳ್ಳಲಿಲ್ಲ. ಆಕ್ಷನ್​ ವೇಳೆಯೂ ಖರೀದಿಸೋ ಮನಸ್ಸು ಮಾಡ್ಲಿಲ್ಲ. ಹೀಗೆ ರೈನಾರನ್ನ ಕೈಬಿಟ್ಟು ಕಣಕ್ಕಿಳಿದ ಚೆನ್ನೈಗೆ 2020 ಪರಿಸ್ಥಿತಿ ಬಂದಿದೆ. ಈಗಲೇ ಧೋನಿ ಪಡೆ ಈ ಸೀಸನ್​​ನಿಂದ ಹೊರಬಿದ್ದಿದ್ದು, 5ನೇ ಬಾರಿ ಟ್ರೋಫಿ ಎತ್ತಿಹಿಡಿಯುವ ಕನಸು  ನುಚ್ಚುನೂರಾಗಿದೆ. ಜೊತೆಗೆ ಪವರ್​ ಹಿಟ್ಟರ್​​​ ಇಲ್ಲದೇ ಚೆನ್ನೈ ಬಡವಾಗಿದೆ.

Follow Us:
Download App:
  • android
  • ios