* ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಟಗಾರ ತಿಲಕ್ ವರ್ಮಾ ಹಿಂದಿದೆ ಕರುಣಾಜನಕ ಸ್ಥಿತಿ* ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಸೆನ್ಸೇಷನ್ ತಿಲಕ್ ವರ್ಮಾ ಕುಟುಂಬಕ್ಕೆ ಇಲ್ಲ ಸ್ವಂತ ಮನೆ* ಐಪಿಎಲ್ ಹಣದಲ್ಲಿ ಸ್ವಂತ ಮನೆ ಕಟ್ಟುವ ಕನಸು ಕಾಣುತ್ತಿರುವ ತಿಲಕ್ ವರ್ಮಾ
ಮುಂಬೈ(ಏ.05): ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿಕೊಟ್ರೆ ಸಾಕು ಕ್ರಿಕೆಟರ್ಸ್ ಲೈಫೇ ಚೇಂಜ್ ಆಗುತ್ತೆ. ಆದರೆ ಆಗಮನಕ್ಕೂ ಮುನ್ನ ಅವರ ಬದುಕು ನಿಜಕ್ಕೂ ದುಸ್ತರ. ಐಪಿಎಲ್ ಇತಿಹಾಸದ ಪುಟಗಳನ್ನ ಒಮ್ಮೆ ತಿರುವಿ ಹಾಕಿದರೆ ಅದೆಷ್ಟೋ ಮನಮಿಡಿಯುವ ಕಥೆಗಳು ನಮಗೆ ಕಾಣ ಸಿಗುತ್ತೆ. ಬಡತನ ಬೇಗೆ ಮೆಟ್ಟಿನಿಂತು ಉಸಿರಾಗಿಸಿಕೊಂಡು ಕ್ರಿಕೆಟ್ ಆಟದಲ್ಲಿ ಗೆದ್ದವರಿದ್ದಾರೆ. ಇದರಿಂದ ಬದುಕು ಬೆಳಗಿದೆ. ಇನ್ಸ್ಸ್ಪಿರೇಶನ್ ಪ್ಲೇಯರ್ಸ್ ಅಂತ ಕರೆಸಿಕೊಳ್ಳೋ ಜಸ್‌ಪ್ರೀತ್ ಬುಮ್ರಾ (Jasprit Bumrah), ಸೂರ್ಯಕುಮಾರ್ ಯಾದವ್ (Suryakumar Yadav) ಇದಕ್ಕೆ ಬೆಸ್ಟ್ ಎಕ್ಸಾಂಪಲ್ಸ್. ಸದ್ಯ ಈ ಲಿಸ್ಟ್ಗೆ ಸೇರಿಕೊಳ್ಳಲು ತಿಲಕ್ ವರ್ಮಾ (Tilak Varma) ಹವಣಿಸ್ತಿದ್ದಾರೆ.
ಈಗ ತಾನೇ ಐಪಿಎಲ್ (IPL) ಲೋಕದಲ್ಲಿ ಅಂಬೆಗಾಲಿಟ್ಟಿರೋ ತಿಲಕ್ ವರ್ಮಾ ಸ್ಪೋಟಕ ಆಟದಿಂದ ಸುದ್ದಿಯಲ್ಲಿದ್ದಾರೆ. ಅದು ಜಸ್ಟ್ ಎರಡೇ ಪಂದ್ಯದಿಂದ. ಮುಂಬೈ ಇಂಡಿಯನ್ಸ್ ಪರ ಮೊದಲೆರಡು ಪಂದ್ಯಗಳಲ್ಲಿ ತಿಲಕ್ ವರ್ಮಾ ಕ್ರಮವಾಗಿ 21 ಹಾಗೂ 61 ರನ್ ಬಾರಿಸಿದ್ದಾರೆ. ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದಾರೆ. ಆದರೆ ಅಂಗಳದಲ್ಲಿ ಹೀಗೆ ಬೌಂಡರಿ-ಸಿಕ್ಸರ್ ಸಿಡಿಸಿ ಫ್ಯಾನ್ಸ್ ದಿಲ್ ಗೆದ್ದಿರೋ ಹೈದ್ರಾಬಾದ್ ಆಟಗಾರನ ಹಿಂದೆ ಒಂದು ಮನಮಿಡಿಯುವ ಕಥೆ ಇದೆ. ಅದು ಬೆಂಕಿಯಲ್ಲಿ ಅರಳಿದ ಹೂವಿನ ಕಥೆ.
ಹೊಸ ಕಿಟ್ಸ್ ಕೊಂಡುಕೊಳ್ಳಲು ದುಡ್ಡಿಲ್ಲದೆ ಪರದಾಟ:
ಇಂದು ತಿಲಕ್ ಐಪಿಎಲ್ನ ಮೋಸ್ಟ್ ಸಕ್ಸಸ್ಫುಲ್ ತಂಡದ ಪರ ಆಡ್ತಿರಬಹುದು. ಎರಡೇ ಪಂದ್ಯದಲ್ಲಿ ಎಡಗೈ ಬ್ಯಾಟರ್ ಪ್ರತಿಭೆ ಅನಾರಣಗೊಂಡಿರಬಹುದು. ಆದರೆ ತಿಲಕ್ ಕ್ರಿಕೆಟ್ ಬದುಕು ಅಂದುಕೊಂಡಷ್ಟು ಸುಲಭವಿರ್ಲಿಲ್ಲ. ಇವರದ್ದು ಕಡು ಬಡತನದ ಕುಟುಂಬ. ತಂದೆ ಹೈದ್ರಾಬಾದ್ನಲ್ಲಿ ಎಲೆಕ್ಟ್ರಿಷಿಯನ್. ಬಂದ ಆದಾಯದಲ್ಲೇ ಕುಟುಂಬ ನಿರ್ವಹಣೆ ಮಾಡಬೇಕಿತ್ತು. ಹೀಗಾಗಿ ತಿಲಕ್ ಕ್ರಿಕೆಟ್ ಕಲಿಕೆಗೆ ತಂದೆಯಿಂದ ಹೆಚ್ಚಿನ ಸಪೋರ್ಟ್ ಸಿಗ್ಲಿಲ್ಲ. ಆದ್ರೂ ಮಗನನ್ನ ದೊಡ್ಡ ಕ್ರಿಕೆಟ್ ಮಾಡಬೇಕೆಂದು ಕನಸು ಕಂಡಿದ್ರು.
ಆರ್ಥಿಕ ಸಮಸ್ಯೆಯಿಂದ ತಿಲಕ್ ಕ್ರಿಕೆಟ್ ಬದುಕಿಗೆ ಮುಗಿದೆ ಹೋಯ್ತು ಅನ್ನೋವಾಗ್ಲೇ ನೆರವಿಗೆ ಬಂದಿದ್ದು ಕೋಚ್ ಸಲಾಂ ಬಿಯಾಸ್. ಬಿಯಾಸ್, ತಿಲಕ್ ಕೋಚಿಂಗ್ ಜೊತೆ ಆರ್ಥಿಕ ನೆರವು ನೀಡಿದ್ರು. ಟೂಲ್ಸ್ ಜೊತೆ ಮುರಿದ ಬ್ಯಾಟ್ನಲ್ಲಿ ಆಡ್ತಿದ್ದ ವರ್ಮಾಗೆ ಹೊಸ ಬ್ಯಾಟ್ ತಂದುಕೊಟ್ರು. ನಂತರ ವರ್ಮಾಗೆ ಅಂಡರ್ -19 ವಿಶ್ವಕಪ್ನಲ್ಲಿ (ICC U-19 World Cup) ಅವಕಾಶ ಸಿಗ್ತು. ಹೈದರಾಬಾದ್ ಪರ ಡೊಮೆಸ್ಟಿಕ್ ಕ್ರಿಕೆಟ್ ಆಡಿದ್ರು. ಅಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಐಪಿಎಲ್ನಲ್ಲಿ ಆಡಲು ಚಾನ್ಸ್ ಗಿಟ್ಟಿಸಿಕೊಂಡ್ರು.
ಮುಂಬೈ ಬಿಡ್ ಮಾಡ್ತಿದ್ದಂತೆ ಕುಣಿದು ಕುಪ್ಪಳಿಸಿದ್ದ ತಿಲಕ್:
ಇನ್ನು ಅನ್ಕ್ಯಾಪ್ಡ್ ತಿಲಕ್ ವರ್ಮಾ ಆಕ್ಷನ್ನಲ್ಲಿ 20 ಲಕ್ಷ ಮೂಲಬೆಲೆ ಘೋಷಿಸಿಕೊಂಡಿದ್ರು. ಇವರ ಖರೀದಿಗೆ ರಾಜಸ್ಥಾನ, ಹೈದ್ರಾಬಾದ್, ಮುಂಬೈ ಹಾಗೂ ಚೆನ್ನೈ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ 1.7 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ (Mumbai Indians) ತೆಕ್ಕೆಗೆ ಹಾಕಿಕೊಳ್ತು. ಮುಂಬೈ ಪಾಲಾಗ್ತಿದ್ದಂತೆ ವರ್ಮಾ ಸ್ನೇಹಿತರನ್ನ ತಬ್ಬಿಕೊಂಡು ಕುಣಿದು ಕುಪ್ಪಳಿಸಿದ್ರು.
ಸ್ವಂತ ಸೂರಿಲ್ಲ, IPL ದುಡ್ಡಲ್ಲಿ ಮನೆ ಕಟ್ಟಿಲು ನಿರ್ಧಾರ:
ಯೆಸ್, ಮುಂಬೈ ತಂಡದ ತಿಲಕ್ ವರ್ಮಾ ಅವರಿಗೆ ಇನ್ನೂ ಸ್ವಂತ ಸೂರಿಲ್ಲ. ಬಾಡಿಗೆ ಮನೆಯಲ್ಲಿ ವಾಸ್ತಿದ್ದಾರೆ. ಹೀಗಾಗಿ ಐಪಿಎಲ್ನಿಂದ ಗಳಿಸುವ ದುಡ್ಡಿನಲ್ಲಿ ಸ್ವಂತ ಮನೆ ಖರೀದಿಸಲು ಲೆಫ್ಟಿ ಪ್ಲೇಯರ್ ನಿರ್ಧರಿಸಿದ್ದಾರೆ. ಆ ಮೂಲಕ ತಂದೆ ತಾಯಿಗೆ ಬಿಗ್ ಗಿಫ್ಟ್ ನೀಡಲು ಮುಂದಾಗಿದ್ದಾರೆ. ಇದರಲ್ಲಿ ಇದರಲ್ಲಿ ಯಶಸ್ಸು ಸಿಗಲಿ ಎನ್ನುವುದು ನಮ್ಮ ಹಾರೈಕೆ.
