ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ ಐಪಿಎಲ್ 2022 ಲೀಗ್ ಟೂರ್ನಿಯ 50ನೇ ಪಂದ್ಯ ಡೆಲ್ಲಿ- ಹೈದರಾಬಾದ್ ತಂಡಕ್ಕೆ ಮಹತ್ವದ ಪಂದ್ಯ
ಮುಂಬೈ(ಮೇ.05): ಐಪಿಎಲ್ 2022 ಲೀಗ್ ಟೂರ್ನಿಯ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್ ಹಾಗೂ ಸೀನ್ ಅಬಾಟ್ ಹೈದರಾಬಾದ್ ತಂಡ ಸೇರಿಕೊಂಡಿದ್ದಾರೆ. ಇತ್ತ ಡೆಲ್ಲಿ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದೆ. ಅನ್ರಿಚ್ ನೊರ್ಜೆ, ಮನ್ದೀಪ್ ಸಿಂಗ್, ರಿಪಾಲ್ ಪಟೇಲ್ ಹಾಗೂ ಖಲೀಲ್ ಅಹಮ್ಮದ್ ತಂಡ ಸೇರಿಕೊಂಡಿದ್ದಾರೆ. ತಂಡದಲ್ಲಿದ್ದ ಪೃಥ್ವಿ ಶಾ, ಅಕ್ಸರ್ ಪಟೇಲ್, ಮುಸ್ತಾಫಿಜುರ್ ರೆಹಮಾನ್ ಹಾಗೂ ಸಕಾರಿಯಾ ತಂಡದಿಂದ ಹೊರಗುಳಿದಿದ್ದಾರೆ.
ಡೆಲ್ಲಿ ಹಾಗೂ ಹೈದರಾಬಾದ್ ಮುಖಾಮುಖಿಯಲ್ಲಿ ಒಂದು ವಿಶೇಷತೆ ಇದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಚಾಂಪಿಯನ್ ಮಾಡಿದ ಡೇವಿಡ್ ವಾರ್ನರ್ ಇದೇ ಮೊದಲ ಬಾರಿಗೆ ಹೈದರಾಬಾದ್ ವಿರುದ್ಧ ಆಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೀ ಪ್ಲೇಯರ್ ವಾರ್ನರ್, ಹೈದರಾಬಾದ್ ವಿರುದ್ಧ ಅಬ್ಬರಿಸಲು ಸಜ್ಜಾಗಿದ್ದಾರೆ.
IPL 2022: ಹಾರ್ದಿಕ್ ಪಾಂಡ್ಯ ಪುತ್ರ ಅಗಸ್ತ್ಯನಿಂದ ರಶೀದ್ ಖಾನ್‌ಗೆ ಪ್ಲೈಯಿಂಗ್ ಕಿಸ್..! ವಿಡಿಯೋ ವೈರಲ್
ಸನ್‌ರೈಸರ್ಸ್ ಹೈದರಾಬಾದ್ ಆರಂಭದಲ್ಲಿ ಹ್ಯಾಟ್ರಿಕ್ ಸೋಲು ಕಂಡು ನಿರಾಸೆಗೊಂಡಿತ್ತು. ಬಳಿಕ ಸತತ 5 ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ರೇಸ್‌ನಲ್ಲಿ ಪ್ರಬಲ ತಂಡವಾಗಿ ಗುರುತಿಸಿಕೊಂಡಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿನ ಸೋಲು ಹೈದರಾಬಾದ್ ತಂಡದ ಆತ್ಮವಿಶ್ವಾಸದ ಮೇಲೆ ಹೊಡೆತ ನೀಡಿದೆ.
ಸೋಲು ಗೆಲುವಿನ ಮಿಶ್ರಣದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಗ್ಗರಿಸಿತ್ತು. ಅಂಕಪಟ್ಟಿಯಲ್ಲಿ ಸನ್‌ರೈರ್ಸ್ ಹೈದರಾಬಾದ್ ತಂಡ 5ನೇ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 7ನೇ ಸ್ಥಾನದಲ್ಲಿದೆ.
IPL 2022: ಸಿಎಸ್‌ಕೆ ಬಗ್ಗುಬಡಿದ ಆರ್‌ಸಿಬಿ, ಪಂದ್ಯದ ವೇಳೆ ವೈರಲ್ ಆದ ಟಾಪ್ ಮೀಮ್ಸ್‌ಗಳಿವು..!
ಐಪಿಎಲ್ ಪಾಯಿಂಟ್ಸ್ ಟೇಬಲ್
ಐಪಿಎಲ್ ಟೂರ್ನಿ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಂಕಪಟ್ಟಿಯಲ್ಲಿ ಟಾಪ್ ಸ್ಥಾನ ಪಡೆಯಲು ಹೋರಾಟ ತೀವ್ರಗೊಳ್ಳುತ್ತಿದೆ. ಸದ್ಯ ಗುಜರಾತ್ ಟೈಟಾನ್ಸ್ 10 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿ ಮೊದಲ ಸ್ಥಾನ ಅಲಂಕರಿಸಿದೆ. ಗುಜರಾತ್ 16 ಅಂಕ ಸಂಪಾದಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಲಖನೌ ಸೂಪರ್ ಜೈಂಟ್ಸ್ 10ರಲ್ಲಿ 7 ಪಂದ್ಯಗಳನ್ನು ಗೆದ್ದು 2ನೇ ಸ್ಥಾನದಲಲ್ಲಿದೆ. ಒಟ್ಟು 14 ಅಂಕ ಗಳಿಸಿಕೊಂಡಿದೆ. ಇನ್ನು ರಾಜಸ್ಥಾನ ರಾಯಲ್ಸ್ 10 ಪಂದ್ಯಗಳಲ್ಲಿ 6 ಗೆಲುವು ಕಂಡಿದೆ. ಈ ಮೂಲಕ 3ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆುಲುವು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಬೆಂಗಳೂರು 11 ಪಂದ್ಯಗಳಲ್ಲಿ 6 ಗೆಲುವು ಕಂಡಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ 9ರಲ್ಲಿ 5 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 6ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 9ರಲ್ಲಿ 4 ಗೆಲುವು ದಾಖಲಿಸಿ 7ನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ 10ರಲ್ಲಿ 4 ಗೆಲುವು ದಾಖಲಿಸಿ 8ನೇ ಸ್ಛಾನದಲ್ಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ 10ರಲ್ಲಿ 3 ಪಂದ್ಯದಲ್ಲಿ ಗೆಲುವು ದಾಖಲಿಸಿ 9ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 9 ಪಂದ್ಯದಲ್ಲಿ ಕೇವಲ 1 ಗೆಲುವು ದಾಖಲಿಸಿ 10ನೇ ಸ್ಥಾನದಲ್ಲಿದೆ.
