ಪಂಜಾಬ್ ವಿರುದ್ಧ ಹೈದರಾಬಾದ್‌ಗೆ 7 ವಿಕೆಟ್ ಗೆಲುವು ಅಂಕಪಟ್ಟಿಯಲ್ಲಿ 7ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಲಗ್ಗೆ ಮತ್ತೊಂದುು ಸೋಲಿಗೆ ಗುರಿಯಾದ ಪಂಜಾಬ್ ಕಿಂಗ್ಸ್
ಮುಂಬೈ(ಏ.17): ಟಾರ್ಗೆಟ್ ಸುಲಭವಾಗಿತ್ತು, ಆದರೆ ಚೇಸಿಂಗ್ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಪಂಜಾಬ್ ನೀಡಿದ 152 ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ 18.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿದೆ.
152 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡ ಸುಲಭವಾಗಿ ರನ್ ಚೇಸ್ ಮಾಡುವ ವಿಶ್ವಾಸದಲ್ಲಿತ್ತು. ಆದರೆ ಆರಂಭದಲ್ಲೇ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಪತನ ಹೈದರಾಬಾದ್ ತಂಡಕ್ಕೆ ಹಿನನ್ನಡೆ ತಂದಿತು. ವಿಲಿಯಮ್ಸನ್ ಕೇವಲ 3 ರನ್ ಸಿಡಿಸಿ ರಬಾಡಾಗೆ ವಿಕೆಟ್ ಒಪ್ಪಿಸಿದರು. ಆದರೆ ಅಭಿಷೇಕ್ ಶರ್ಮಾ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾಟದಿಂದ ಹೈದರಾಬಾದ್ ಚೇತರಿಸಿಕೊಂಡಿತು.
IPL 2022 ರಾಹುಲ್ ಶತಕಕ್ಕೆ ಒಲಿದ ಗೆಲುವು, ಮುಂಬೈಗೆ ಸತತ 6ನೇ ಸೋಲು!
ರಾಹುಲ್ ತ್ರಿಪಾಠಿ 22 ಎಸೆತದಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 34 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಅಭಿಷೇಕ್ ಶರ್ಮಾ 31 ರನ್ ಸಿಡಿಸಿ ಔಟಾದರು. ತ್ರಿಪಾಠಿ ಹಾಗೂ ಅಭಿಷೇಕ್ ವಿಕೆಟ್ ಪತನ ಸನ್‌ರೈಸರ್ಸ್ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತು.
ಆ್ಯಡಿನ್ ಮಕ್ರಮ್ ಹಾಗೂ ನಿಕೋಲಸ್ ಪೂರನ್ ಜೊತೆಯಾಟದಿಂದ ಸನ್‌ರೈಸರ್ಸ್ ಹೈದರಾಬಾದ್ ಚೇತರಿಸಿಕೊಂಡಿತು. ಅಂತಿಮ 24 ಎಸೆತದಲ್ಲಿ ಹೈದರಾಬಾದ್ ಗೆಲುವಿಗೆ 31 ರನ್ ಅವಶ್ಯಕತೆ ಇತ್ತು. ಮರ್ಕ್ರಾಮ್ ಹಾಗೂ ಪೂರನ್ ಬ್ಯಾಟಿಂಗ್ ಸನ್‌ರೈಸರ್ಸ್ ಆತಂಕ ದೂರ ಮಾಡಿತು.
IPL 2022: ಹಾರ್ದಿಕ್ ಪಾಂಡ್ಯನಿಂದ ಬಿಸಿಸಿಐಗೆ 30 ಲಕ್ಷ ಲಾಸ್
ಮರ್ಕ್ರಮ್ ಅಜೇಯ 41 ರನ್ ಸಿಡಿಸಿದರೆ, ಪೂರನ್ ಅಜೇಯ 35 ರನ್ ಸಿಡಿಸಿದರು. ಈ ಮೂಲಕ 18.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಲಲ್ಲಿ 151 ರನ್‌ಗೆ ಆಲೌಟ್ ಆಗಿತ್ತು. ಉಮ್ರಾನ್ ಮಲಿಕ್ ಹಾಗೂ ಭುವನೇಶ್ವರ್ ಕುಮಾರ್ ದಾಳಿಗೆ ಪಂಜಾಬ್ ನಲುಗಿತ್ತು. ಆದರೆ ಲಿಯಾಮ್ ಲಿವಿಂಗ್‌ಸ್ಟೋನ್ ಹೋರಾಟದಿಂದ ಪಂಜಾಬ್ ಕಿಂಗ್ಸ್ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.
ಶಿಖರ್ ಧವನ್ 8 ರನ್ ಸಿಡಿಸಿ ನಿರ್ಗಮಿಸಿದರೆ, ಪ್ರಭಸಿಮ್ರನ್ ಸಿಂಗ್ 14 ರನ್ ಸಿಡಿಸಿ ಔಟಾದರು. ಜಾನಿ ಬೈರ್‌ಸ್ಚೋ 12 ರನ್ ಸಿಡಿಸಿ ವಾಪಸ್ ಆದರು. ಲಿಯಾಮ್ ಲಿವಿಂಗ್‌ಸ್ಟೋನ್ 33 ಎಸೆತದಲ್ಲಿ 60 ರನ್ ಸಿಡಿಸಿದರು. ಲಿಯಾಮ್ ಏಕಾಂಗಿ ಹೋರಾಟ ನೀಡಿದರೆ ಇತರರಿಂದ ಯಾವುದೇ ಸಾಥ್ ಸಿಗಲಿಲ್ಲ. ಜಿತೇಶ್ ಶರ್ಮಾ 11 ರನ್ ಸಿಡಿಸಿದರು. ಶಾರುಖ್ ಖಾನ್ 26 ರನ್ ಕಾಣಿಕೆ ನೀಡಿದರು. ಒಡನ್ ಸ್ಮಿತ್ 13 ರನ್ ಸಿಡಿಸಿದರು. ರಾಹುಲ್ ಚಹಾರ್, ವೈಭವ್ ಅರೋರ್ ಹಾಗೂ ಅರ್ಶದೀಪ್ ಸಿಂಗ್ ಶೂನ್ಯ ಸುತ್ತಿದರು.
ಕೆಕೆಆರ್ ವಿರುದ್ಧ ಮೊದಲ ಗೆಲುವು
ಸತತ 2 ಸೋಲಿನೊಂದಿಗೆ 15ನೇ ಆವೃತ್ತಿಯ ಐಪಿಎಲ್ ಅಭಿಯಾನ ಆರಂಭಿಸಿದ್ದ ಸನ್‌ರೈಸರ್ಸ್ ಹೈದರಾಬಾದ್, ಕೆಕೆಆರ್ ವಿರುದ್ಧ ಗೆಲುವು ದಾಖಲಿಸಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ 7 ವಿಕೆಟ್ ಜಯ ಗಳಿಸಿತು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿತೀಶ್ ರಾಣಾ (36 ಎಸೆತಗಳಲ್ಲಿ 56), ಆ್ಯಂಡ್ರೆ ರಸೆಲ್(ಔಟಾಗದೆ 49) ಹೋರಾಟದ ನೆರವಿನಿಂದ 8 ವಿಕೆಟ್‌ಗೆ 175 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಸನ್‌ರೈಸರ್ಸ್ 17.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಅಭಿಷೇಕ್ (03), ವಿಲಿಯಮ್ಸನ್(17)ರನ್ನು ಬೇಗನೇ ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ರಾಹುಲ್ ತ್ರಿಪಾಠಿ-ಏಡನ್ ಮಾರ್ಕರಮ್ 3 ವಿಕೆಟ್‌ಗೆ 94 ರನ್ ಜೊತೆಯಾಟವಾಡಿ ತಂಡವನ್ನು ಗೆಲ್ಲಿಸಿದರು. 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ತ್ರಿಪಾಠಿ 71(37 ಎಸೆತ) ರನ್ ಸಿಡಿಸಿ ನಿರ್ಗಮಿಸಿದರೆ, ಮಾರ್ಕರಮ್ 36 ಎಸೆತಗಳಲ್ಲಿ 68 ರನ್ ಗಳಿಸಿ ಔಟಾಗದೆ ಉಳಿದರು.
