ಹಾರ್ದಿಕ್ ಪಾಂಡ್ಯ. ಸದ್ಯ ಐಪಿಎಲ್ನಲ್ಲಿ ಮಿಂಚು ಹರಿಸಿರೋ ಹೆಸರು ಇದು. ಮುಂಬೈ ಇಂಡಿಯನ್ಸ್ ತಂಡದಿಂದ ಗುಜರಾತ್ ಟೈಟನ್ಸ್ ಟೀಮ್ಗೆ ಜಂಪ್ ಆಗಿರೋ ಈ ಆಲ್ರೌಂಡರ್, ಈ ಸೀಸನ್ನಲ್ಲಿ ಭಾರಿ ಸದ್ದು ಮಾಡ್ತಿದ್ದಾನೆ.
ಮುಂಬೈ (ಏ.17): ಹಾರ್ದಿಕ್ ಪಾಂಡ್ಯ (Hardik Pandya). ಸದ್ಯ ಐಪಿಎಲ್ನಲ್ಲಿ (IPL) ಮಿಂಚು ಹರಿಸಿರೋ ಹೆಸರು ಇದು. ಮುಂಬೈ ಇಂಡಿಯನ್ಸ್ (Mumbai Indians) ತಂಡದಿಂದ ಗುಜರಾತ್ ಟೈಟನ್ಸ್ (Gujarat Titans) ಟೀಮ್ಗೆ ಜಂಪ್ ಆಗಿರೋ ಈ ಆಲ್ರೌಂಡರ್, ಈ ಸೀಸನ್ನಲ್ಲಿ ಭಾರಿ ಸದ್ದು ಮಾಡ್ತಿದ್ದಾನೆ. ಪಾಂಡ್ಯ ನಾಯಕನಾಗಿ ಗುಜರಾತ್ ಟೀಮ್ಗೆ ಐದರಲ್ಲಿ ನಾಲ್ಕು ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಐದು ಪಂದ್ಯಗಳಿಂದ 228 ರನ್ ಹೊಡೆದು, 4 ವಿಕೆಟ್ ಸಹ ಪಡೆದಿದ್ದಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ಕ್ಯಾಪ್ಟನ್ಸಿ ಹೀಗೆ ನಾಲ್ಕು ವಿಭಾಗದಲ್ಲೂ ಹಾರ್ದಿಕ್ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಹಾಗಾಗಿನೇ ಪಾಂಡ್ಯ ಐಪಿಎಲ್ನಲ್ಲಿ ಸದ್ದು ಮಾಡ್ತಿರೋದು.
ಸಂಜು ರನೌಟ್ನಿಂದ ಬಿಸಿಸಿಐಗೆ 30 ಲಕ್ಷ ಲಾಸ್: ಮೊನ್ನೆ ಗುರುವಾರ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗಿದ್ದವು. ಗುಜರಾತ್ ವಿರುದ್ಧ ಗೆಲುವಿಗೆ 193 ರನ್ ಬೆನ್ನಟ್ಟಿದ ರಾಯಲ್ಸ್ 65 ರನ್ಗೆ 3 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ಸಮಯದಲ್ಲಿ ನಾಯಕ ಸಂಜು ಸ್ಯಾಮ್ಸನ್ ಸಿಕ್ಸರ್ ಬಾರಿಸಿ ಸಿಡಿಯುವ ಮುನ್ಸೂಚನೆ ನೀಡಿದರು. ಸಂಜು 11 ರನ್ ಗಳಿಸಿದ್ದಾಗ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ರನೌಟ್ ಮಾಡಿದರು.
David Warner: ರಾಕಿ ಬಾಯ್ ಯಶ್ ಅವತಾರದಲ್ಲಿ ಧೂಳೆಬ್ಬಿಸಿದ ವಾರ್ನರ್
ಅಯ್ಯೋ, ಪಾಂಡ್ಯ ರನೌಟ್ ಮಾಡಿದ್ದರಿಂದ ಬಿಸಿಸಿಐಗೆ 30 ಲಕ್ಷ ಲಾಸ್ ಹೇಗೆ ಆಯ್ತು ಅಂತಿರಾ. ಪಾಂಡ್ಯ ಬಾಲ್ ಎಸೆದ ವೇಗಕ್ಕೆ ಸ್ಟಂಪೇ ಮುರಿದು ಹೋಯ್ತು. ಆ ಒಂದು LED ಸ್ಟಂಪ್ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ. ಹೌದು, ನೀವು ನಂಬದಿದ್ದರೂ ಇದು ಸತ್ಯ ಕಂಡ್ರಿ. ಐಪಿಎಲ್ನಲ್ಲಿ ಬಳಸುತ್ತಿರುವ LED ಸ್ಟಂಪ್ಗಳ ಬೆಲೆ 30ರಿಂದ 45 ಲಕ್ಷ ರೂಪಾಯಿ. ಮೊನ್ನೆ ಹಾರ್ದಿಕ್ ಸ್ಟಂಪ್ ಮುರಿದು ಹಾಕಿದ್ದರಿಂದ ಬಿಸಿಸಿಐಗೆ 30 ಲಕ್ಷ ನಷ್ಟವಾಗಿದೆ.
ಎಲ್ಇಡಿ ಸ್ಟಂಪ್ಗಳ ಬೆಲೆ ಯಾಕೆ ಇಷ್ಟು ದುಬಾರಿ..!: ಕ್ರಿಕೆಟ್ನಲ್ಲಿ ಮೊದಲೆಲ್ಲಾ ಸಾಧಾರಣ ಸ್ಟಂಪ್‌ಗಳನ್ನು ಬಳಸಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಿಂದ LED ಸ್ಟಂಪ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅಂಪೈರ್ಸ್ ಹಾಗೂ ಥರ್ಡ್ ಅಂಪೈರ್ಸ್ಗೆ ವಿಕೆಟ್ ಅನ್ನು ಗುರುತಿಸಲು ಸಹಾಯವಾಗಲಿ ಅನ್ನೋ ಕಾರಣಕ್ಕೆ LED ಸ್ಟಂಪ್ಗಳನ್ನ ಬಳಸುತ್ತಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಈ LED ಸ್ಟಂಪ್‌ಗಳನ್ನು ಐಪಿಎಲ್ನಲ್ಲಿ ಬಳಸಲಾಗಿತ್ತು. ಬಳಿಕ ಬಿಗ್ ಬ್ಯಾಷ್ ಲೀಗ್ನಲ್ಲಿ ಇದನ್ನು ಬಳಲಾಯಿತು.
IPL 2022 ಟಾಸ್ ಗೆದ್ದ ಹೈದರಾಬಾದ್, ಪಂಜಾಬ್‌ಗೆ ಧವನ್ ನಾಯಕ!
LED ಸ್ಟಂಪ್ಗಳನ್ನ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪರಿಚಯಿಸಿದ್ದು ಭಾರತ. 2016ರಲ್ಲಿ ಭಾರತದಲ್ಲಿ ನಡೆದ ಐಸಿಸಿ ಟಿ20 ವರ್ಲ್ಡ್ಕಪ್ನಲ್ಲಿ LED ಸ್ಟಂಪ್ಗಳನ್ನ ಮೊದಲ ಬಾರಿಗೆ ಬಳಲಾಯಿತು. ಅಲ್ಲಿಯವರೆಗೂ ಇದನ್ನು ಕೇವಲ ಫ್ರಾಂಚೈಸಿ ಲೀಗ್ಗಲ್ಲಿ ಮಾತ್ರ ಬಳಸಲಾಗುತ್ತಿತ್ತು. LED ಸ್ಟಂಪ್ಗಳು ಬ್ಯಾಟರಿ ಚಾಲಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸೆನ್ಸಾರ್ ಅಳವಡಿಸಲಾಗಿದ್ದು, ಸ್ಟಂಪ್ಗೆ ಏನಾದರೂ ತಗುಲಿದರೆ ಮಾತ್ರ ಅದು ಬೆಳಕಾಗುತ್ತದೆ. ಅದಕ್ಕೆ ಈ LED ಸ್ಟಂಪ್ಗಳ ಬೆಲೆ ಲಕ್ಷ ಲಕ್ಷ.
