Asianet Suvarna News Asianet Suvarna News

IPL 2022 ಜೋಸ್ ಬಟ್ಲರ್ ಬೊಂಬಾಟ್ ಬ್ಯಾಟಿಂಗ್, ಸಿಕ್ಸರ್ ಗಳ ಮೂಲಕವೇ ಅಬ್ಬರಿಸಿದ ರಾಜಸ್ಥಾನ ಬ್ಯಾಟ್ಸ್ ಮನ್ !

ಸಾಧಾರಣ ಮೊತ್ತ ದಾಖಲಿಸುತ್ತ ಸಾಗುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಕೊನೇ ಎರಡು ಓವರ್ ಗಳಲ್ಲಿ ಬಟ್ಲರ್ ಹಾಗೂ ಹೆಟ್ಮೆಯರ್ ಸೂಪರ್ ಡೂಪರ್ ಇನ್ನಿಂಗ್ಸ್ ಆಡುವ ಮೂಲಕ ಸವಾಲಿನ ಮೊತ್ತಕ್ಕೆ ಕಾರಣರಾದರು. ಕೊನೆಯ 12 ಎಸೆತಗಳಲ್ಲಿ ಈ ಜೋಡಿ 42 ರನ್ ಕೂಡಿಹಾಕುವ ಮೂಲಕ ಆರ್ ಸಿಬಿ ತಂಡಕ್ಕೆ 170 ರನ್ ಗಳ ಸವಾಲು ನೀಡುವಲ್ಲಿ ಯಶಸ್ವಿಯಾಗಿದೆ.

IPL 2022 RR vs RCB Jos Buttler hits Half Century Rajasthan Royals Post 170 target for Royal Challengers Bangalore san
Author
Bengaluru, First Published Apr 5, 2022, 9:26 PM IST

ಮುಂಬೈ (ಏ.5): ಇನ್ನಿಂಗ್ಸ್ ನ ಕೊನೆಯಲ್ಲಿ ಜೋಸ್ ಬಟ್ಲರ್ (Jos Buttler) ಹಾಗೂ ಶಿಮ್ರೋನ್ ಹೆಟ್ಮೆಯರ್ (Shimron Hetmyer) ಅವರ ಆಕರ್ಷಕ ಆಟದ ನೆರವಿನಿದ ರಾಜಸ್ಥಾನ ರಾಯಲ್ಸ್ (Rajasthan Royals) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಗೆಲುವಿಗೆ 170 ರನ್ ಸವಾಲು ನೀಡಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ (RR)ತಂಡ ಆರಂಭದಿಂದಲೂ ಎಚ್ಚರಿಕೆಯ ಬ್ಯಾಟಿಂಗ್ ಗೆ ಮುಂದಾಯಿತು. 2ನೇ 2ನೇ ವಿಕೆಟ್ ಗೆ ದೇವದತ್ ಪಡಿಕ್ಕಲ್ ಹಾಗೂ ಜೋಸ್ ಬಟ್ಲರ್ ಬಾರಿಸಿದ ಆಕರ್ಷಕ ಇನ್ನಿಂಗ್ಸ್ ನೆರವಿನಿಂದ 20 ಓವರ್ ಗಳಲ್ಲಿ 3 ವಿಕೆಟ್ ಗೆ 169 ರನ್ ಪೇರಿಸಿತು.

ಕಳೆದ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿ ಮಿಂಚಿದ್ದ ಜೋಸ್ ಬಟ್ಲರ್ 70 ರನ್ ಗಳ (47 ಎಸೆತ, 6 ಬೌಂಡರಿ) ಮತ್ತೊಂದು ಮನಮೋಹಕ ಇನ್ನಿಂಗ್ಸ್ ಮೂಲಕ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಶಿಮ್ರೋನ್ ಹೆಟ್ಮೆಯರ್ 42 ರನ್ (31 ಎಸೆತ, 4 ಬೌಂಡರಿ, 2 ಸಿಕ್ಸರ್) ಬಾರಿಸಿ ಗಮನಸೆಳೆದರು.

ರಾಜಸ್ಥಾನ ರಾಯಲ್ಸ್ ಗೆ ಈ ಪಂದ್ಯದಲ್ಲಿ ಉತ್ತಮ ಆರಂಭ ಸಿಗಲಿಲ್ಲ. ರನ್ ಗಳಿಸಲು ಪರದಾಟ ನಡೆಸುತ್ತಿರುವ ಆರಂಭಿಕ ಬ್ಯಾಟ್ಸ್ ಮನ್ ಯಶಸ್ವಿ ಜೈಸ್ವಾಲ್ 2ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಮೂಲದ ವೇಗಿ ಡೇವಿಡ್ ವಿಲ್ಲಿಗೆ ವಿಕೆಟ್ ಒಪ್ಪಿಸುವ ಮುನ್ನ ಯಶಸ್ವಿ ಜೈಸ್ವಾಲ್ ಕೇವಲ 4 ರನ್ ಬಾರಿಸಿದ್ದರು.

ನಂತರ ಆರಂಭಿಕ ಆಟಗಾರ ಜೋಸ್ ಬಟ್ಲರ್ ಗೆ ಜೊತೆಯಾದ ದೇವದತ್ ಪಡಿಕ್ಕಲ್ ಆಕರ್ಷಕ 37 ರನ್ ( 29 ಎಸೆತ, 2 ಬೌಂಡರಿ, 2 ಸಿಕ್ಸರ್) ಬಾರಿಸಿ ಗಮನಸೆಳೆದರು. ಮೈದಾನಕ್ಕೆ ಇಳಿದ ಬೆನ್ನಲ್ಲಿಯೇ ಸಿಕ್ಸರ್ ಸಿಡಿಸಿ ಗಮನಸೆಳೆದ ಆರ್ ಸಿಬಿಯ (RCB) ಮಾಜಿ ಆಟಗಾರ ದೇವದತ್ ಪಡಿಕ್ಕಲ್, ನಂತರ ನಿರಾತಂಕವಾಗಿ ಬ್ಯಾಟಿಂಗ್ ಮಾಡಲು ಆರಂಭಿಸಿದರು. ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಜೋಸ್ ಬಟ್ಲರ್ ಕೂಡ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಆಕಾಶ್ ದೀಪ್ ಬೌಲಿಂಗ್ ವೇಳೆ ಡೇವಿಡ್ ವಿಲ್ಲಿ ಜೋಸ್ ಬಟ್ಲರ್ ಕ್ಯಾಚ್ ಕೈಚೆಲ್ಲುವ ಮೂಲಕ ಜೀವದಾನವನ್ನೂ ನೀಡಿದ್ದರು.

ಸಿಎಸ್​​​​ಕೆ ನಾಯಕ ಯಾರು..ಬರೀ ಟಾಸ್​​ಗೆ ಮಾತ್ರ ಸೀಮಿತವಾದ್ರಾ ಜಡೇಜಾ?

ಅಪಾಯಕಾರಿಯಾಗುತ್ತಿದ್ದ ಈ ಜೋಡಿಯನ್ನು 10ನೇ ಓವರ್ ನಲ್ಲಿ ಹರ್ಷಲ್ ಪಟೇಲ್ ಬೇರ್ಪಡಿಸಿದರು ಹರ್ಷಲ್ ಪಟೇಲ್ ಎಸೆದ ನಿಧಾನಗತಿಯ ಎಸೆತವನ್ನು ಅಂದಾಜು ಮಾಡದ ದೇವದತ್ ಪಡಿಕ್ಕಲ್ ದೊಡ್ಡ ಹೊಡೆತಕ್ಕೆ ಮುಂದಾಗಿ ವಿರಾಟ್ ಕೊಹ್ಲಿ ಹಿಡಿದ ಆಕರ್ಷಕ ಕ್ಯಾಚ್ ಗೆ ನಿರ್ಗಮಿಸಿದರು. ಇದರ ಬೆನ್ನಲ್ಲಿಯೇ ಎಸೆತಕ್ಕೆ ಒಂದು ರನ್ ನಂತೆ 8 ರನ್ ಬಾರಿಸಿದ ನಾಯಕ ಸಂಜು ಸ್ಯಾಮ್ಸನ್ ರನ್ನು ವಾನಿಂದು ಹಸರಂಗ ಔಟ್ ಮಾಡಿದರು.

IPL 2022 ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ, ಬೌಲಿಂಗ್ ಆಯ್ಕೆ!

86 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಜೊತೆಯಾದ ಬಟ್ಲರ್ ಹಾಗೂ ಶಿಮ್ರೋನ್ ಹೆಟ್ಮೆಯರ್, ಆರ್ ಸಿಬಿ ಬೌಲರ್ ಗಳನ್ನು ದಂಡಿಸುವ ಮೂಲಕ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. 4ನೇ ವಿಕೆಟ್ ಗೆ 51 ಎಸೆತಗಳಲ್ಲಿ 83 ರನ್ ಜೊತೆಯಾಟವಾಡಿದ ಈ ಜೋಡಿ, ಕೊನೇ ಎರಡು ಓವರ್ ಗಳಲ್ಲೇ 42 ರನ್ ದೋಚುವ ಮೂಲಕ ಆರ್ ಸಿಬಿ ಬೌಲರ್ ಗಳನ್ನು ದಂಡಿಸಿದರು.

Follow Us:
Download App:
  • android
  • ios